ಮಂಡ್ಯದಲ್ಲಿ ಅಪರೂಪದ ಲೀಥಿಯಂ ನಿಕ್ಷೇಪ ಪತ್ತೆ

ಬೆಂಗಳೂರು, ಫೆಬ್ರವರಿ 19: ವಿದ್ಯುತ್ ಚಾಲಿತ ವಾಹನಗಳ ಬಳಕೆಗೆ ಉತ್ತೇಜನ ನೀಡುತ್ತಿರುವ ಸಂದರ್ಭದಲ್ಲಿಯೇ ಉದ್ಯಮಕ್ಕೆ ಚೈತನ್ಯ ನೀಡುವ ಸುದ್ದಿ ದೊರೆತಿದೆ. ವಿದ್ಯುತ್ ಚಾಲಿತ ವಾಹನಗಳ ಬ್ಯಾಟರಿಗಳನ್ನು ನಿರ್ಮಿಸಲು ಅತ್ಯಗತ್ಯವಾದ ಅಪರೂಪದ ಲೋಹ ನಿಕ್ಷೇಪ ಲೀಥಿಯಂ ಮಂಡ್ಯದ ಸಮೀಪ ಪತ್ತೆಯಾಗಿದೆ.

ವಿದ್ಯುತ್ ಚಾಲಿತ ವಾಹನಗಳ ಬ್ಯಾಟರಿಗಳ ಸ್ಥಳೀಯ ಮಟ್ಟದ ತಯಾರಿಕೆಗೆ ಈ ನಿಕ್ಷೇಪಗಳ ಪತ್ತೆ ಉತ್ತೇಜನ ನೀಡುವ ನಿರೀಕ್ಷೆಯಿದೆ. ವಿದ್ಯುತ್‌ ಚಾಲಿತ ವಾಹನಗಳ ಬ್ಯಾಟರಿಗಳ ತಯಾರಿಕೆಗೆ ಲೀಥಿಯಂ ಅತ್ಯಂತ ಮಹತ್ವದ ಲೋಹವಾಗಿದೆ. ಭಾರತದಲ್ಲಿ ಲೀಥಿಯಂ ಲಭ್ಯತೆಯ ಕುರಿತು ಇದುವರೆಗೂ ಯಾವುದೇ ಮಾಹಿತಿ ದೊರಕಿರಲಿಲ್ಲ. ಈಗ ಮಂಡ್ಯದಲ್ಲಿ ದೊರಕಿರುವುದೇ ಮೊದಲನೆಯದು.

ಭಾರತದ ಆಟೋಮಿಕ್ ಎನರ್ಜಿ ಕಮಿಷನ್‌ನ ಘಟಕವಾದ ಪರಮಾಣು ಖನಿಜಗಳ ನಿರ್ದೇಶನಾಲಯದ ಸಂಶೋಧಕರು ಬೆಂಗಳೂರಿನಿಂದ 100 ಕಿ.ಮೀ. ದೂರವಿರುವ ಪ್ರದೇಶದಲ್ಲಿ ಸಣ್ಣ ಭೂ ಪ್ರದೇಶದಲ್ಲಿ ಅಂದಾಜು 14,100 ಟನ್ ಲೀಥಿಯಂ ನಿಕ್ಷೇಪವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಕರೆಂಟ್ ಸೈನ್ಸ್ ನಿಯತಕಾಲಿಕೆಯ ಸಂಚಿಕೆಯಲ್ಲಿ ಈ ಕುರಿತಾದ ಲೇಖನವೊಂದು ತಿಳಿಸಿದೆ.

14,100 ಟನ್ ಲೀಥಿಯಂ

14,100 ಟನ್ ಲೀಥಿಯಂ

'ಪ್ರಸ್ತುತ ಲಭ್ಯವಿರುವ ಅಧ್ಯಯನ ದಾಖಲೆಗಳ ಪ್ರಕಾರ ಶ್ರೀರಂಗಪಟ್ಟಣ ತಾಲ್ಲೂಕಿನ ಕರಿಘಟ್ಟ ಹಿಂಭಾಗದ ಗೋಮಾಳದ ಪ್ರದೇಶದಲ್ಲಿ ಅಲ್ಲಾಪಟ್ಟಣ-ಮರಳಗಾಲ ಗ್ರಾಮದ 0.5 ಕಿ.ಮೀ * 5 ಕಿ.ಮೀ. ಪ್ರದೇಶ ವ್ಯಾಪ್ತಿಯಲ್ಲಿ ಸುಮಾರು 30,300 ಟನ್ Li20 ಲಭ್ಯವಿದ್ದು, ಇದನ್ನು ಹೊರತೆಗೆದರೆ ಅಂದಾಜು 14,100 ಟನ್ ಲೀಥಿಯಂ ಲೋಹ ಸಿಗಬಹುದು' ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಗೌರವ ಪ್ರಾಧ್ಯಾಪಕ ಮತ್ತು ಬ್ಯಾಟರಿ ತಂತ್ರಜ್ಞಾನದ ಪರಿಣತ ಎನ್. ಮುನಿಚಂದ್ರಯ್ಯ ತಿಳಿಸಿದ್ದಾರೆ.

ಬೇರೆ ದೇಶಗಳಿಗೆ ಹೋಲಿಸಿದರೆ ಕಡಿಮೆ

ಬೇರೆ ದೇಶಗಳಿಗೆ ಹೋಲಿಸಿದರೆ ಕಡಿಮೆ

ಆದರೆ, ಇತರೆ ಅನೇಕ ಪ್ರಮುಖ ಲೀಥಿಯಂ ಉತ್ಪಾದಕರಿಗೆ ಹೋಲಿಸಿದರೆ ಮಂಡ್ಯದಲ್ಲಿ ಸಿಕ್ಕಿರುವ ಲೀಥಿಯಂ ಲೋಹದ ಪ್ರಮಾಣ ತೀರಾ ಕಡಿಮೆ. ಚಿಲಿಯಲ್ಲಿ 8.6 ಮಿಲಿಯನ್ ಟನ್, ಆಸ್ಟ್ರೇಲಿಯಾದಲ್ಲಿ 2.8 ಮಿಲಿಯನ್ ಟನ್, ಅರ್ಜೆಂಟೀನಾದಲ್ಲಿ 1.7 ಮಿಲಿಯನ್ ಟನ್, ಪೋರ್ಚುಗಲ್‌ನಲ್ಲಿ 60,000 ಟನ್ ಗಳಷ್ಟು ನಿಕ್ಷೇಪ ಪತ್ತೆಯಾಗಿವೆ. ಇವುಗಳೊಂದಿಗೆ ತುಲನೆ ಮಾಡಿದರೆ 14,100 ಟನ್ ಅತ್ಯಲ್ಪವಾಗಿದೆ ಎಂದು ಅವರು ಹೇಳಿದ್ದಾರೆ.

ಆಮದು ಮೂರು ಪಟ್ಟು ಹೆಚ್ಚಳ

ಆಮದು ಮೂರು ಪಟ್ಟು ಹೆಚ್ಚಳ

ಲೀಥಿಯಂ ಬ್ಯಾಟರಿಗಳಿಗೆ ಭಾರತದಲ್ಲಿ ಅಪಾರ ಬೇಡಿಕೆಯಿದೆ. 2017ನೇ ಹಣಕಾಸು ವರ್ಷದಲ್ಲಿ ಭಾರತವು 384 ಮಿಲಿಯನ್ ಡಾಲರ್ ಮೌಲ್ಯದ ಲೀಥಿಯಂ ಬ್ಯಾಟರಿಗಳನ್ನು ಆಮದು ಮಾಡಿಕೊಂಡಿದ್ದರೆ, 2019ರ ಹಣಕಾಸು ವರ್ಷದಲ್ಲಿ ಅದು ಮೂರುಪಟ್ಟು ಹೆಚ್ಚಳವಾಗಿ, 1.2 ಬಿಲಿಯನ್ ಡಾಲರ್ ಮೌಲ್ಯದ ಲೀಥಿಯಂ ಬ್ಯಾಟರಿಗಳನ್ನು ಆಮದು ಮಾಡಿಕೊಳ್ಳಲಾಗಿದೆ.

ವಿದೇಶದಲ್ಲಿ ಭಾರತದ ಕಂಪೆನಿ

ವಿದೇಶದಲ್ಲಿ ಭಾರತದ ಕಂಪೆನಿ

ದೇಶದಲ್ಲಿ ಲೀಥಿಯಂ ಸಿಗದ ಕಾರಣ ಅರ್ಜೆಂಟೀನಾ, ಚಿಲಿ ಮತ್ತು ಬೊಲಿವಿಯಾಗಳಲ್ಲಿ ಲೀಥಿಯಂ ನಿಕ್ಷೇಪಗಳನ್ನು ಪತ್ತೆಹಚ್ಚಿ ಹೊರತೆಗೆಯುವ ಸಲುವಾಗಿ ಭಾರತ ಖನಿಜ್ ಬಿದೇಶ್ ಇಂಡಿಯಾ ಲಿಮಿಟೆಡ್ ಸ್ಥಾಪಿಸಿದೆ. ಮುಂದಿನ ಹತ್ತು ವರ್ಷಗಳಲ್ಲಿ ಲೀಥಿಯಂ-ಐಯಾನ್ ಬ್ಯಾಟರಿಗಳನ್ನು ತಯಾರಿಸಲು ಹತ್ತು ಬೃಹತ್ ಕಾರ್ಖಾನೆಗಳ ಸ್ಥಾಪನೆಗೆ ನೀತಿ ಆಯೋಗ ಗುರಿ ಹೊಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+