ರಾಮ-ಸೀತೆಯಂತೆ ನಿಮ್ಮ ಮಕ್ಕಳಿಗೆ ವೇಷ ತೊಡಿಸಿದ್ದೀರಾ? ಹಾಗಾದರೆ ಫೋಟೋ ಕಳುಹಿಸಿ
ದೇಶದೆಲ್ಲೆಡೆ ಶ್ರೀರಾಮನ ನಾಮ ಜಪಿಸಲಾಗುತ್ತಿದೆ. ಅಯೋಧ್ಯೆಯ ರಾಮ ಮಂದಿರದಲ್ಲಿ ಶ್ರೀ ರಾಮಲಲ್ಲಾನ ಮೂರ್ತಿ ಪ್ರಾಣಪ್ರತಿಷ್ಠಾಪನೆ ಕಾರ್ಯ ಪೂರ್ಣಗೊಂಡಿದೆ. ಇಂತಹ ಐತಿಹಾಸಿಕ ಕ್ಷಣವನ್ನು ಸಾವಿರಾರು ಗಣ್ಯರು ನೇರವಾಗಿ ಕಣ್ತುಂಬಿಕೊಂಡಿದ್ದಾರೆ. ಈ ಮಂಗಳಕರ ದಿನವನ್ನು ನೀವು ಕೂಡ ನಿಮ್ಮ ಮನೆಯಲ್ಲಿ ಶ್ರೀರಾಮನ ಪೂಜೆ, ವ್ರತ, ಉಪವಾಸ ಮಾಡುವ ಮೂಲಕ ಆಚರಿಸುತ್ತಿರಬಹುದು. ಜೊತೆಗೆ ರಾಮ-ಸೀತೆಯಂತೆ ನಿಮ್ಮ ಮಕ್ಕಳಿಗೆ ವೇಷ ತೊಡಿಸಿ ಸಂತೋಷ ಪಡುತ್ತಿರಬಹುದು.
ಹೀಗೆ ನೀವು ನಿಮ್ಮ ಮುದ್ದಾದ ಮಕ್ಕಳ ನಗುವಿನಲ್ಲಿ ಶ್ರೀರಾಮನನ್ನು ಕಾಣುವ ಮೂಲಕ ಈ ದಿನವನ್ನು ಸಂಭ್ರಮಿಸುತ್ತಿದ್ದರೆ, ನಿಮ್ಮ ಮಕ್ಕಳಿಗೆ ರಾಮ, ಸೀತೆ ಹಾಗೂ ಲಕ್ಷ್ಮಣನಂತೆ ವೇಷ ತೊಡಿಸಿದ್ದರೆ ಆ ಚಿತ್ರವನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ಅದನ್ನು ನಾವು ನಮ್ಮ ಒನ್‌ಇಂಡಿಯಾ ಕನ್ನಡ ವೆಬ್‌ಸೈಟ್‌ನಲ್ಲಿ ಪ್ರಸ್ತುಪಡಿಸುತ್ತೇವೆ. ಹಾಗಾದರೆ ತಡ ಯಾಕೆ ಪುಟ್ಟ ಮಕ್ಕಳ ಚಂದದ ಶ್ರೀರಾಮನ ವೇಷ ತೊಡಿಸಿದ ಫೋಟೋವನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

ನಿಮ್ಮ ಮಕ್ಕಳಿಗೆ ರಾಮನ ವೇಷ ತೊಡಿಸಿದ ಫೋಟೋವನ್ನು [email protected] ಮೇಲ್ ಐಡಿಗೆ ಕಳುಹಿಸಿ.












Click it and Unblock the Notifications