ರಾಜ್ಯಸಭೆ ಚುನಾವಣೆ 2016 : ಅಭ್ಯರ್ಥಿಗಳ ಆಸ್ತಿ ವಿವರಗಳು

Posted By:
Subscribe to Oneindia Kannada

ಬೆಂಗಳೂರು, ಮೇ 31 : ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ ನಾಲ್ಕು ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಜೂನ್ 11ರಂದು ಚುನಾವಣೆ ನಡೆಯಲಿದೆ. ನಾಮಪತ್ರ ಸಲ್ಲಿಕೆ ಕಾರ್ಯ ಆರಂಭವಾಗಿದ್ದು, ರಾಜ್ಯಸಭೆ ಚುನಾವಣೆ ಅಖಾಡದಲ್ಲಿಯೂ ಕೋಟ್ಯಾಧಿಪತಿಗಳಿದ್ದಾರೆ.

ಸೋಮವಾರ ಕಾಂಗ್ರೆಸ್ ಅಭ್ಯರ್ಥಿಗಳಾಗಿ ಜೈರಾಮ್ ರಮೇಶ್, ಆಸ್ಕರ್ ಫರ್ನಾಂಡೀಸ್ ಮತ್ತು ಕೆ.ಸಿ.ರಾಮಮೂರ್ತಿ ಅವರು ನಾಮಪತ್ರ ಸಲ್ಲಿಸಿದ್ದಾರೆ. ಜೆಡಿಎಸ್‌ನಿಂದ ಬಿ.ಎಂ.ಫಾರೂಕ್ ಅವರು ನಾಮಪತ್ರವನ್ನು ಸಲ್ಲಿಕೆ ಮಾಡಿದ್ದಾರೆ. ಅಭ್ಯರ್ಥಿಗಳು ತಮ್ಮ ನಾಮಪತ್ರದ ಜೊತೆ ಆಸ್ತಿ ವಿವರ ಸಲ್ಲಿಸಿದ್ದು, ಬಿ.ಎಂ.ಫಾರೂಕ್ ಅವರು ಶ್ರೀಮಂತ ಅಭ್ಯರ್ಥಿಯಾಗಿದ್ದಾರೆ. [ಅಚ್ಚರಿಯಾದರೂ ಸತ್ಯ, ಜೆಡಿಎಸ್ ಅಭ್ಯರ್ಥಿಗೆ ಖೇಣಿ ಬೆಂಬಲ!]

ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡೀಸ್ ಅವರ ಆಸ್ತಿ ಮೌಲ್ಯ 30 ಕೋಟಿ, ಜೈರಾಮ್ ರಮೇಶ್ ಅವರ ಒಟ್ಟು ಆಸ್ತಿ 4.75 ಕೋಟಿ, ಕೆ.ಸಿ.ರಾಮಮೂರ್ತಿ ಅವರು 82.13 ಕೋಟಿ ಮೌಲ್ಯದ ಆಸ್ತಿ ಘೋಷಿಸಿಕೊಂಡಿದ್ದಾರೆ. ಜೆಡಿಎಸ್ ಅಭ್ಯರ್ಥಿ ಬಿ.ಎಂ.ಫಾರೂಕ್ ಅವರ ಆಸ್ತಿ ಮೌಲ್ಯ 750 ಕೋಟಿ ರೂ.ಗಳು. [#VenkayyaSakayya ಅಭಿಯಾನ ಹುಟ್ಟಿದ್ದು ಹೇಗೆ?]

ಚುನಾವಣೆಗೆ ನಾಮಪತ್ರಗಳನ್ನು ಸಲ್ಲಿಸಲು ಮೇ 31ರ ಮಂಗಳವಾರ ಕೊನೆಯ ದಿನವಾಗಿತ್ತು. ಕೊನೆಯ ದಿನ ಬಿಜೆಪಿ ಅಭ್ಯರ್ಥಿ, ಕೇಂದ್ರ ವಾಣಿಜ್ಯೋದ್ಯಮ ಖಾತೆ ರಾಜ್ಯ ಸಚಿವೆ (ಸ್ವತಂತ್ರ) ನಿರ್ಮಲಾ ಸೀತಾರಾಮನ್ ಅವರು ನಾಮಪತ್ರ ಸಲ್ಲಿಸಿದರು. [ರಾಜ್ಯಸಭೆಗೆ ಕರ್ನಾಟಕದಿಂದ ವೆಂಕಯ್ಯ ಬದಲಿಗೆ ನಿರ್ಮಲಾ]

155 ಕೋಟಿ ಸಾಲ ಮಾಡಿದ್ದಾರೆ ಫಾರೂಕ್

155 ಕೋಟಿ ಸಾಲ ಮಾಡಿದ್ದಾರೆ ಫಾರೂಕ್

ಜೆಡಿಎಸ್‌ನಿಂದ ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸುತ್ತಿರುವ ಉದ್ಯಮಿ ಬಿ.ಎಂ.ಫಾರೂಕ್ ಅವರು ಶ್ರೀಮಂತ ಅಭ್ಯರ್ಥಿಯಾಗಿದ್ದಾರೆ. ಅವರ ಒಟ್ಟು ಆಸ್ತಿ ಮೌಲ್ಯ 750 ಕೋಟಿ ರೂ.ಗಳು. ಪತ್ನಿ ಹೆಸರಿನಲ್ಲಿ 25 ಕೋಟಿ ಮೌಲ್ಯದ ಷೇರು ಇದೆ. 688 ಕೋಟಿ ಚರಾಸ್ತಿ ಮತ್ತು 155 ಕೋಟಿ ಸಾಲವಿದೆ. 11 ಕೋಟಿ ನಗದು ಇದೆ.
* 1.12 ಕೋಟಿ ಬೆಲೆಯ ರೇಂಜ್ ರೋವರ್ ಕಾರು
* 3 ಕೆಜಿ ಬಂಗಾರ
* ರೋಲೆಕ್ಸ್ ಸೇರಿದಂತೆ ದುಬಾರಿ ವಾಚ್‌ಗಳಿವೆ.

ಕೆ.ಸಿ.ರಾಮಮೂರ್ತಿ ಅವರ ಆಸ್ತಿ ವಿವರ

ಕೆ.ಸಿ.ರಾಮಮೂರ್ತಿ ಅವರ ಆಸ್ತಿ ವಿವರ

ಕಾಂಗ್ರೆಸ್ ಪಕ್ಷದಲ್ಲಿ ನಿವೃತ್ತ ಐಪಿಎಸ್ ಅಧಿಕಾರಿ ಕೆ.ಸಿ.ರಾಮಮೂರ್ತಿ ಅವರೇ ಶ್ರೀಮಂತ ಅಭ್ಯರ್ಥಿಗಳು. ಅವರ ಒಟ್ಟು ಆಸ್ತಿ 82.13 ಕೋಟಿ ರೂ.ಗಳು. ಪತ್ನಿ ಹೆಸರಲ್ಲಿ 16.44 ಕೋಟಿ ರೂ.ಗಳ ಆಸ್ತಿ ಇದೆ. 4.63 ಕೋಟಿ ಮೌಲ್ಯದ ಚರಾಸ್ತಿ ಹೊಂದಿದ್ದಾರೆ. 56.19 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ. ರಾಮಮೂರ್ತಿ ಅವರ ಬಳಿ ಸ್ವಂತ ಕಾರಿಲ್ಲ.

ಆಸ್ಕರ್ ಫರ್ನಾಂಡೀಸ್ ಅವರು ಸಾಲ ಮಾಡಿಲ್ಲ

ಆಸ್ಕರ್ ಫರ್ನಾಂಡೀಸ್ ಅವರು ಸಾಲ ಮಾಡಿಲ್ಲ

ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡೀಸ್ ಅವರು ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ತಮ್ಮ ಆಸ್ತಿಯನ್ನು ಘೋಷಣೆ ಮಾಡಿಕೊಂಡಿದ್ದಾರೆ. ಅವರ ಒಟ್ಟು ಆಸ್ತಿಯ ಮೌಲ್ಯ 30 ಕೋಟಿ. ರೂ.ಗಳು. ಪತ್ನಿ ಬ್ಲಾಸಂ ಹೆಸರಿನಲ್ಲಿ 10.25 ಕೋಟಿ ಸ್ಥಿರಾಸ್ತಿ ಇದೆ. 14.3 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಆಸ್ಕರ್ ಅವರ ಬಳಿ ಮಹೀಂದ್ರ ಜೀಪ್ ಇದೆ. ಅವರು ಎಲ್ಲಿಯೂ ಸಾಲ ಮಾಡಿಲ್ಲ.

ಜೈರಾಮ್ ರಮೇಶ್ ಅವರ ಬಳಿ ಒಂದ ಕಾರು

ಜೈರಾಮ್ ರಮೇಶ್ ಅವರ ಬಳಿ ಒಂದ ಕಾರು

ಮಾಜಿ ಕೇಂದ್ರ ಸಚಿವ ಜೈರಾಮ್ ಅವರ ಬಳಿ 4.75 ಕೋಟಿ ಮೊತ್ತದ ಆಸ್ತಿ ಇದೆ. ಪತ್ನಿ ಜಯಶ್ರೀ ಹೆಸರಿನಲ್ಲಿ 3.2 ಲಕ್ಷ ಮೌಲ್ಯದ ಷೇರು ಇದೆ. ಸ್ವಂತ ಭೂಮಿ ಮತ್ತು ಮನೆ ಇಲ್ಲ. ಜೈರಾಮ್ ರಮೇಶ್ ಅವರ ಬಳಿ ಒಂದು ಮಾರುತಿ ರಿಟ್ಸ್ ಕಾರಿದೆ.

ನಿರ್ಮಲಾ ಸೀತಾರಾಮನ್ ಅವರ ಆಸ್ತಿ ಎಷ್ಟು?

ನಿರ್ಮಲಾ ಸೀತಾರಾಮನ್ ಅವರ ಆಸ್ತಿ ಎಷ್ಟು?

ರಾಜ್ಯಸಭೆ ಚುನಾವಣೆಗೆ ಬಿಜೆಪಿಯಿಂದ ಕೇಂದ್ರ ವಾಣಿಜ್ಯೋದ್ಯಮ ಖಾತೆ ರಾಜ್ಯ ಸಚಿವೆ (ಸ್ವತಂತ್ರ) ನಿರ್ಮಲಾ ಸೀತಾರಾಮನ್ ಅವರು ನಾಮಪತ್ರ ಸಲ್ಲಿಸಿದ್ದಾರೆ. ಅವರು 1.40 ಕೋಟಿ ಮೌಲ್ಯದ ನಗದು, ಆಸ್ತಿ ಮತ್ತು ಚಿನ್ನಾಭರಣ ಹೊಂದಿದ್ದಾರೆ.

* ಬ್ಯಾಂಕ್‌ ಖಾತೆಯಲ್ಲಿ 5,74,768 ರೂ ಇದೆ
* 5.60 ರೂ. ಹಣವನ್ನು ಬೇರೆಯವರಿಗೆ ಮುಂಗಡವಾಗಿ ನೀಡಿದ್ದಾರೆ
* ಚೇತಕ್ ಸ್ಕೂಟರ್ ಇದೆ
* 315 ಗ್ರಾಂ ಚಿನ್ನ ಮತ್ತು 80 ಸಾವಿರ ರೂ. ಮೌಲ್ಯದ ಬೆಳ್ಳಿ ಹೊಂದಿದ್ದಾರೆ
* 16,02,000 ರೂ ಮೌಲ್ಯದ ಅಪಾರ್ಟ್‌ಮೆಂಟ್ ಇದ್ದು, 45,25,992 ರೂ. ಸಾಲವಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
These are the assets of all party candidates who filed nominations for the upcoming Rajya Sabha election. On June 11, 2016 election will be held form Karnataka assembly to elect 4 member to Rajya Sabha.
Please Wait while comments are loading...