KRS Dam: ಮುಂದುವರೆದ ಹಿಂಗಾರು ಮಳೆ ಆರ್ಭಟ; ಜಲಾಶಯಗಳಲ್ಲಿ ಎಷ್ಟಿದೆ ನೀರಿನ ಮಟ್ಟ
ರಾಜ್ಯಾದ್ಯಂತ ಹಿಂಗಾರು ಮಳೆ ಅಬ್ಬರಿಸುತ್ತಿದೆ. ಹಲವು ಕಡೆಗಳಲ್ಲಿ ಭಾರಿ ಮಳೆಯಿಂದಾಗಿ ಸಾಕಷ್ಟು ಅವಾಂತರಗಳೇ ಆಗುತ್ತಿದೆ. ಕೆರೆ, ಕಟ್ಟೆಗಳು ಭರ್ತಿಯಾಗಿದ್ದು ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಭಾರಿ ಮಳೆಯಿಂದಾಗಿ ರಾಜ್ಯದಲ್ಲಿ ಮತ್ತೊಮ್ಮೆ ನದಿಗಳು ಭೋರ್ಗರೆದು ಹರಿಯಲು ಆರಂಭಿಸಿವೆ. ಹಲವು ಕಡೆ ನದಿಗಳು ಉಕ್ಕಿಹರಿದು ತೋಟ, ಗ್ರಾಮಗಳಿಗೆ ನೀರು ನುಗ್ಗಿದೆ. ಜಲಾಶಯಗಳ ಒಳಹರಿವು ಮತ್ತೆ ಹೆಚ್ಚಾಗಿದ್ದು, ಭಾರಿ ಪ್ರಮಾಣದಲ್ಲಿ ನೀರು ಹೊರಬಿಡಲಾಗುತ್ತಿದೆ.
ರಾಜ್ಯದ ದೊಡ್ಡ ಜಲಾಶಯವಾದ ಲಿಂಗನಮಕ್ಕಿ ಜಲಾಶಯದ ಗರಿಷ್ಠ ಸಾಮರ್ಥ್ಯ 151.75 ಟಿಎಂಸಿ ಇದ್ದು, ಸದ್ಯ 146.75 ಟಿಎಂಸಿ ನೀರು ಸಂಗ್ರಹವಾಗಿದೆ. 14,309 ಕ್ಯೂಸೆಕ್ಸ್ ಒಳಹರಿವು ಇದ್ದು, 6730 ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ.

ಕೃಷ್ಣರಾಜಸಾಗರ (ಕೆಆರ್ ಎಸ್) ಜಲಾಶಯ ಕೂಡ ಮೂರನೇ ಬಾರಿಗೆ ಭರ್ತಿಯಾಗಿದೆ. ನೀರಿನ ಮಟ್ಟ ಗರಿಷ್ಠ 124.80 ಅಡಿ ತಲುಪಿದೆ. 49.45 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯವಿದ್ದು ಅಷ್ಟೇ ಪ್ರಮಾಣದ ನೀರು ಸಂಗ್ರಹವಾಗಿದೆ. 4171 ಕ್ಯೂಸೆಕ್ಸ್ ಒಳಹರಿವು ಇದ್ದು, 3911 ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಕೂಡ ಭಾರಿ ಮಳೆಯಾಗುತ್ತಿದ್ದು, ಜಲಾಶಯಗಳು ಭರ್ತಿಯಾಗಿವೆ.
ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ
ಸೂಪಾ ಜಲಾಶಯ
ಗರಿಷ್ಠ ನೀರಿನ ಮಟ್ಟ : 564 ಮೀಟರ್/ 145.33 ಟಿಎಂಸಿ
ಇಂದಿನ ನೀರಿನ ಮಟ್ಟ: 562.62 ಮೀಟರ್ / 139.44 ಟಿಎಂಸಿ
ಒಳಹರಿವು: 1926 ಕ್ಯೂಸೆಕ್ಸ್
ಹೊರಹರಿವು: 950 ಕ್ಯೂಸೆಕ್ಸ್
ವಾರಾಹಿ ಜಲಾಶಯ
ಗರಿಷ್ಠ ನೀರಿನ ಮಟ್ಟ : 594.36 ಮೀಟರ್/ 31.10 ಟಿಎಂಸಿ
ಇಂದಿನ ನೀರಿನ ಮಟ್ಟ: 593.34 ಮೀಟರ್ / 29.13 ಟಿಎಂಸಿ
ಒಳಹರಿವು: 880 ಕ್ಯೂಸೆಕ್ಸ್
ಹೊರಹರಿವು: 0 ಕ್ಯೂಸೆಕ್ಸ್
ಹಾರಂಗಿ ಜಲಾಶಯ
ಗರಿಷ್ಠ ನೀರಿನ ಮಟ್ಟ: 2859 ಅಡಿ / 8.50 ಟಿಎಂಸಿ
ಇಂದಿನ ನೀರಿನ ಮಟ್ಟ: 2856.67 ಅಡಿ / 7.71 ಟಿಎಂಸಿ
ಒಳಹರಿವು: 210 ಕ್ಯೂಸೆಕ್ಸ್
ಹೊರಹರಿವು: 300 ಕ್ಯೂಸೆಕ್ಸ್
ಹೇಮಾವತಿ ಜಲಾಶಯ
ಗರಿಷ್ಠ ನೀರಿನ ಮಟ್ಟ: 2922 ಅಡಿ / 37.10 ಟಿಎಂಸಿ
ಇಂದಿನ ನೀರಿನ ಮಟ್ಟ: 2918.43 ಅಡಿ / 33.71 ಟಿಎಂಸಿ
ಒಳಹರಿವು: 4811 ಕ್ಯೂಸೆಕ್ಸ್
ಹೊರಹರಿವು: 4700 ಕ್ಯೂಸೆಕ್ಸ್
ಕಬಿನಿ ಜಲಾಶಯ
ಗರಿಷ್ಠ ನೀರಿನ ಮಟ್ಟ : 2284 ಅಡಿ / 19.52 ಟಿಎಂಸಿ
ಇಂದಿನ ನೀರಿನ ಮಟ್ಟ: 2283.84 ಅಡಿ / 19.48 ಟಿಎಂಸಿ
ಒಳಹರಿವು: 1152 ಕ್ಯೂಸೆಕ್ಸ್
ಹೊರಹರಿವು: 1050 ಕ್ಯೂಸೆಕ್ಸ್
ಭದ್ರಾ ಜಲಾಶಯ
ಗರಿಷ್ಠ ನೀರಿನ ಮಟ್ಟ : 2158 ಅಡಿ / 71.54 ಟಿಎಂಸಿ
ಇಂದಿನ ನೀರಿನ ಮಟ್ಟ: 2158 ಅಡಿ / 71.54 ಟಿಎಂಸಿ
ಒಳಹರಿವು: 3607 ಕ್ಯೂಸೆಕ್ಸ್
ಹೊರಹರಿವು: 3607 ಕ್ಯೂಸೆಕ್ಸ್
ತುಂಗಭದ್ರಾ ಜಲಾಶಯ
ಗರಿಷ್ಠ ನೀರಿನ ಮಟ್ಟ : 1633 ಅಡಿ / 105.79 ಟಿಎಂಸಿ
ಇಂದಿನ ನೀರಿನ ಮಟ್ಟ: 1631.91 ಅಡಿ / 101.42ಟಿಎಂಸಿ
ಒಳಹರಿವು: 26,516 ಕ್ಯೂಸೆಕ್ಸ್
ಹೊರಹರಿವು: 26,516 ಕ್ಯೂಸೆಕ್ಸ್
ಘಟಪ್ರಭಾ ಜಲಾಶಯ
ಗರಿಷ್ಠ ನೀರಿನ ಮಟ್ಟ : 2175 ಅಡಿ / 51.00 ಟಿಎಂಸಿ
ಇಂದಿನ ನೀರಿನ ಮಟ್ಟ: 2174.70 ಅಡಿ / 50.93 ಟಿಎಂಸಿ
ಒಳಹರಿವು: 2,902 ಕ್ಯೂಸೆಕ್ಸ್
ಹೊರಹರಿವು: 2,902 ಕ್ಯೂಸೆಕ್ಸ್
ಮಲಪ್ರಭಾ ಜಲಾಶಯ
ಗರಿಷ್ಠ ನೀರಿನ ಮಟ್ಟ : 2079 ಅಡಿ / 37.73 ಟಿಎಂಸಿ
ಇಂದಿನ ನೀರಿನ ಮಟ್ಟ: 2079 ಅಡಿ / 37.73 ಟಿಎಂಸಿ
ಒಳಹರಿವು: 3694 ಕ್ಯೂಸೆಕ್ಸ್
ಹೊರಹರಿವು: 3694 ಕ್ಯೂಸೆಕ್ಸ್
ಆಲಮಟ್ಟಿ ಜಲಾಶಯ
ಗರಿಷ್ಠ ನೀರಿನ ಮಟ್ಟ : 519 ಮೀಟರ್ / 123.08 ಟಿಎಂಸಿ
ಇಂದಿನ ನೀರಿನ ಮಟ್ಟ: 518.56 ಮೀಟರ್ / 122.66 ಟಿಎಂಸಿ
ಒಳಹರಿವು: 55,593 ಕ್ಯೂಸೆಕ್ಸ್
ಹೊರಹರಿವು: 55,593 ಕ್ಯೂಸೆಕ್ಸ್
ನಾರಾಯಣಪುರ ಜಲಾಶಯ
ಗರಿಷ್ಠ ನೀರಿನ ಮಟ್ಟ : 492.25 ಮೀಟರ್ / 33.31 ಟಿಎಂಸಿ
ಇಂದಿನ ನೀರಿನ ಮಟ್ಟ: 491.82 ಮೀಟರ್ / 31.92 ಟಿಎಂಸಿ
ಒಳಹರಿವು: 88,503 ಕ್ಯೂಸೆಕ್ಸ್
ಹೊರಹರಿವು: 91,164 ಕ್ಯೂಸೆಕ್ಸ್
ವಾಣಿ ವಿಲಾಸ ಸಾಗರ
ಗರಿಷ್ಠ ನೀರಿನ ಮಟ್ಟ : 2140 ಅಡಿ / 30.42 ಟಿಎಂಸಿ
ಇಂದಿನ ನೀರಿನ ಮಟ್ಟ: 2134 ಅಡಿ / 25.39 ಟಿಎಂಸಿ
ಒಳಹರಿವು: 1964 ಕ್ಯೂಸೆಕ್ಸ್
ಹೊರಹರಿವು: 133 ಕ್ಯೂಸೆಕ್ಸ್












Click it and Unblock the Notifications