Bangalore Weather: ಮುಂದಿನ 72 ಗಂಟೆಗಳ ಕಾಲ ಮಳೆ.. ಮಳೆ.. ಶಾಲೆ & ಕಾಲೇಜುಗಳು....
ಮಳೆ.. ಮಳೆ.. ಬೆಂಗಳೂರು ಸೇರಿದಂತೆ ಕರ್ನಾಟಕ ರಾಜ್ಯದಲ್ಲಿ ಚಂಡಮಾರುತದ ಹಿನ್ನೆಲೆ ಸಿಕ್ಕಾಪಟ್ಟೆ ಮಳೆ ಬೀಳುತ್ತಿದೆ. ಅದರಲ್ಲೂ, ಬೆಂಗಳೂರಲ್ಲಿ ಭಾರಿ ಮಳೆ ಸುರಿಯುತ್ತಿರುವ ಹಿನ್ನೆಲೆ ದೊಡ್ಡ ಅವಾಂತರವೇ ಸಂಭವಿಸಿ ಜನರು ಪರದಾಡುವ ರೀತಿ ಆಗಿದೆ. ಹೀಗಿದ್ದರೂ ಮುಂದಿನ 72 ಗಂಟೆಗಳ ಕಾಲ ಮತ್ತೆ ಭಾರಿ ಮಳೆ ಸುರಿಯುವ ಮುನ್ಸೂಚನೆ ನೀಡಿ, ಹವಾಮಾನ ಇಲಾಖೆ ಮುನ್ನೆಚ್ಚರಿಕೆ ಕೊಟ್ಟಿದೆ. ಹಾಗಾದ್ರೆ, ಇವತ್ತು ಸ್ಕೂಲ್ ಇರೋದಿಲ್ವಾ? ಶಾಲೆ & ಕಾಲೇಜುಗಳಿಗೆ ರಜೆ ಕೊಟ್ಟಿದ್ದಾರಾ?
ಮಳೆ ಯಾಕೆ ಇಷ್ಟೊಂದು ಭರ್ಜರಿಯಾಗಿ ಸುರಿಯುತ್ತಿದೆ ಅಂದ್ರೆ, ಅದಕ್ಕೆ ಕಾರಣ ಸೈಕ್ಲೋನ್. ಬೆಂಗಳೂರು ಸೇರಿದಂತೆ ಭಾಗಶಃ ಕರ್ನಾಟಕ ರಾಜ್ಯದಲ್ಲಿ ಇದೀಗ 'ಫೆಂಗಲ್' ಚಂಡಮಾರುತ ಪರಿಣಾಮ ಭಾರಿ ಜೋರಾಗಿ ಮಳೆ ಬೀಳುತ್ತಿದೆ. ಇದೇ ಕಾರಣಕ್ಕೆ ಜನರು ಕೂಡ ಬೆಚ್ಚಿ ಬಿದ್ದು ಭಯಗೊಂಡಿದ್ದಾರೆ. ಚಳಿಗಾಲದ ಸಮಯದಲ್ಲಿ ಈ ರೀತಿ ಭರ್ಜರಿಯಾಗಿ ಮಳೆ ಬೀಳುತ್ತಿರುವ ಕಾರಣಕ್ಕೆ ಕನ್ನಡಿಗರಿಗೆ ಚಿಂತೆ ಶುರುವಾಗಿದೆ. ಮುಂದಿನ 72 ಗಂಟೆಗಳ ಕಾಲ ಬೆಂಗಳೂರು & ಅಕ್ಕಪಕ್ಕದ ಜಿಲ್ಲೆಗಳಿಗೆ ಭಾರಿ ಮಳೆ ಬೀಳಲಿದ್ದು, ಶಾಲೆ & ಕಾಲೇಜುಗಳ ಕಥೆ ಏನು? ಮುಂದೆ ಓದಿ.

ಶಾಲೆ & ಕಾಲೇಜುಗಳ ಕಥೆ ಏನು?
ಬೆಂಗಳೂರಲ್ಲಿ ಶನಿವಾರ ಶುರುವಾದ ಮಳೆ ಸೋಮವಾರ ಬಂದರೂ ನಿಲ್ಲುತ್ತಿಲ್ಲ. ಹೀಗಾಗಿ, ಚಂಡಮಾರುತದ ಅಬ್ಬರದ ಬಗ್ಗೆ ಜನರು ಚಿಂತೆ ಮಾಡುವ ಪರಿಸ್ಥಿತಿ ಇದೆ. ಜೋರು ಜೋರು ಮಳೆ ಜನರನ್ನು ಚಿಂತೆಗೆ ದೂಡಿದ್ದು, ಈಗಾಗಲೇ ಹಲವು ಕಡೆಗಳಲ್ಲಿ ಮಳೆ ಕಾರಣ ಭಾರಿ ದೊಡ್ಡ ಅನಾಹುತಗಳು ಸಂಭವಿಸಿವೆ. ಮಳೆ ಒಂದೇ ಸಮನೆ ಬೀಳುತ್ತಿರುವ ಕಾರಣಕ್ಕೆ ಈಗ ಮತ್ತಷ್ಟು ಅನಾಹುತ ಸಂಭವಿಸುವ ಭಯ ಕಾಡುತ್ತಿದೆ. ಶಾಲೆ & ಕಾಲೇಜುಗಳಿಗೆ ವಿದ್ಯಾರ್ಥಿ & ವಿದ್ಯಾರ್ಥಿನಿಯರು ಹೋಗುವುದು ಕಷ್ಟವಾಗುತ್ತಿದೆ.
ಶಾಲಾ & ಕಾಲೇಜುಗಳಿಗೆ ರಜೆ ಎಲ್ಲೆಲ್ಲಿ?
ಬೆಂಗಳೂರು ಸೇರಿ ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ, ಕೋಲಾರ ಜಿಲ್ಲೆ ಭಾಗದ ಹಲವು ಕಡೆ ಮಳೆ ಸುರಿಯುತ್ತಿದೆ. ಹಾಗೇ, ಚಿಕ್ಕಬಳ್ಳಾಪುರ ಸೇರಿದಂತೆ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮಳೆಯು ಅಬ್ಬರಿಸುವ ವಾರ್ನಿಂಗ್ ಕೊಡಲಾಗಿದೆ. ಇದರ ಜೊತೆ, ಉತ್ತರ ಕರ್ನಾಟಕ ಭಾಗದ ಕೆಲ ಜಿಲ್ಲೆಗಳಿಗೆ ಕೂಡ ಮಳೆಯ ಕಾಟವು ಇರಲಿದೆ.
ಹೀಗಿದ್ದಾಗ ಕೋಲಾರ ಜಿಲ್ಲೆ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಹಾಗೇ ಚಿಕ್ಕಬಳ್ಳಾಪುರದ ಶಾಲಾ & ಕಾಲೇಜುಗಳಿಗೆ ರಜೆ ನೀಡಲಾಗಿದೆ. ಹೀಗಿದ್ದರೂ ಬೆಂಗಳೂರು ನಗರದಲ್ಲಿ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಮಾಡಿಲ್ಲ. ಮಳೆ ಜೋರಾಗಿರುವ ಕಾರಣಕ್ಕೆ ಇದೀಗ ಬೆಂಗಳೂರು ನಗರದಲ್ಲಿ ಶಾಲಾ & ಕಾಲೇಜುಗಳಿಗೆ ರಜೆ ನೀಡುವ ನಿರೀಕ್ಷೆಯಲ್ಲೇ ಜನರು ಕಾಯುತ್ತಿದ್ದಾರೆ. ರಾತ್ರಿ ಪೂರ್ತಿ ಸುರಿದಿರುವ ಮಳೆ, ಬೆಂಗಳೂರಿನಲ್ಲಿ ಇನ್ನೂ 5 ದಿನಗಳ ಕಾಲ ಕಾಟ ಕೊಡುವ ಭಯ ಆವರಿಸಿದೆ.












Click it and Unblock the Notifications