Rain Alert: 72 ಗಂಟೆಗಳ ಕಾಲ ಮಳೆ... ಮಳೆ... ಫೆಂಗಲ್ ಚಂಡಮಾರುತದ ಪರಿಣಾಮ...
ಮಳೆ, ಮಳೆ.. ಮಳೆರಾಯ ಅಬ್ಬರಿಸುತ್ತಿದ್ದು ಜನ ಮಳೆ ಆರ್ಭಟಕ್ಕೆ ಬೆಚ್ಚಿಬಿದ್ದು ಹೋಗುವಂತೆ ಆಗಿದೆ. ಇದ್ಯಾವ ಸೀಮೆ ವಾತಾವರಣ ಗುರೂ, ನವೆಂಬರ್ & ಡಿಸೆಂಬರ್ ತಿಂಗಳಲ್ಲಿ ಹಿಂಗೆ ಮಳೆ ಬರುತ್ತಿದೆ. ಇನ್ನೂ ಯಾವ ಯಾವ ಸಮಸ್ಯೆ ಕಾದಿದೆಯೋ ಅಂತಾ ಜನ ಗೊಣಗುವ ಪರಿಸ್ಥಿತಿ ಬಂದಿದೆ. ಯಾಕಂದ್ರೆ ಅಕಾಲಿಕ ಮಳೆ ಪರಿಣಾಮ ಇಡೀ ಕರ್ನಾಟಕದ ಜನರು ಈಗ ನಲುಗಿ ಹೋಗಿದ್ದಾರೆ.
ಈಗಾಗಲೇ ಭರ್ಜರಿಯಾಗಿ ಮಳೆ ಸುರಿದು, ಕೆರೆ & ಕುಂಟೆ ಸೇರಿದಂತೆ ನಮ್ಮ ಕರ್ನಾಟಕದ ಎಲ್ಲಾ ಜಲಾಶಯಗಳು ತುಂಬಿ ತುಳುಕುತ್ತಿವೆ. ಇಂತಹ ಸಮಯದಲ್ಲೂ ಮತ್ತೆ ಮಳೆ ಮುನ್ನೆಚ್ಚರಿಕೆ ನೀಡಲಾಗಿದೆ. 72 ಗಂಟೆ ಕಾಲ ಮಳೆ.. ಮಳೆ.. ಫೆಂಗಲ್ ಚಂಡಮಾರುತದ ಪರಿಣಾಮ ಭಾರಿ ಭರ್ಜರಿ ಮಳೆ ಸುರಿಯಲಿದೆ ಎಂದು ಇದೀಗ ಎಚ್ಚರಿಕೆ ನೀಡಲಾಗಿದೆ. ಹಾಗಾದ್ರೆ ಮಳೆ ಈಗ ಅಬ್ಬರಿಸಲಿರುವ ಕರ್ನಾಟಕದ ಜಿಲ್ಲೆಗಳು ಯಾವುವು? ಬನ್ನಿ ತಿಳಿಯೋಣ.

ಮಳೆ.. ಮಳೆ.. ಭಾರಿ ಮಳೆ!
ಬಂಗಾಳ ಕೊಲ್ಲಿ ಸಮುದ್ರ ಪ್ರದೇಶದಲ್ಲಿ 'ಫೆಂಗಲ್' ಚಂಡಮಾರುತ ಜನ್ಮ ಪಡೆದಿದ್ದು, ಮಳೆ ಬರಲು ಶುರುವಾಗಿದೆ. ಕಡಿಮೆ ಒತ್ತಡ ಪ್ರದೇಶದ ಪರಿಣಾಮ ಕಳೆದ 3 ದಿನಗಳಿಂದಲೂ ಇಲ್ಲಿನ ವಾತಾವರಣ ಸಂಪೂರ್ಣ ಕೈಕೊಟ್ಟಿದೆ. ಪರಿಸ್ಥಿತಿ ಹೀಗಿದ್ದಾಗಲೇ ಮತ್ತೆ ಮುಂದಿನ 3 ದಿನಗಳ ಕಾಲ ಇನ್ನಷ್ಟು ಜೋರಾಗಿ ಮಳೆ ಬರುವುದು ಕನ್ಫರ್ಮ್ ಆಗಿದೆ. ಹಾಗಾದ್ರೆ ಮಳೆ ಅಬ್ಬರಿಸುವ ಜಿಲ್ಲೆಗಳು ಯಾವುವು? ಮುಂದೆ ಓದಿ.
ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿದಂತೆ, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ, ಕೋಲಾರ & ಚಿಕ್ಕಬಳ್ಳಾಪುರ ಸೇರಿದಂತೆ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮಳೆ ಅಬ್ಬರಿಸುವ ಸಾಧ್ಯತೆ ಇದೆ ಎಂದು ವಾರ್ನಿಂಗ್ ಕೊಡಲಾಗಿದೆ. ಇದರ ಜೊತೆಯಲ್ಲಿ, ಉತ್ತರ ಕರ್ನಾಟಕ ಭಾಗದ ಕೆಲವು ಜಿಲ್ಲೆಗಳಿಗೆ ಕೂಡ ಮಳೆಯ ಕಾಟವು ಇರಲಿದೆ. ಹೀಗಾಗಿ, ಇದೀಗ ಜನರು ಮಳೆ ನಿಂತರೆ ಸಾಕು ದೇವರೆ ಎನ್ನುವ ಪರಿಸ್ಥಿತಿ ಎದುರಾಗಿದೆ.
ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ!
ಮಳೆ ಅಬ್ಬರ ಹೆಚ್ಚಾದ ಕಾರಣಕ್ಕೆ ತಮಿಳುನಾಡು, ಕೇರಳ ಸೇರಿ ಅಕ್ಕಪಕ್ಕದ ರಾಜ್ಯಗಳಲ್ಲಿ ಭಾರಿ ಕಟ್ಟೆಚ್ಚರವನ್ನು ವಹಿಸಲಾಗಿದೆ. ಇದರ ಜೊತೆ ಅಲ್ಲಿನ ಶಾಲಾ & ಕಾಲೇಜುಗಳಿಗೆ ಕೂಡ ರಜೆ ಘೋಷಣೆ ಮಾಡಲಾಗಿದೆ. ಅದರಲ್ಲೂ ತಮಿಳುನಾಡು ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ದೊಡ್ಡ ಅವಾಂತರ ಸಂಭವಿಸುವ ಆತಂಕ ಇದ್ದು, ಹೀಗಾಗಿ ಬಹುತೇಕ ಜಿಲ್ಲೆಗಳಲ್ಲಿ ಈಗ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಕರ್ನಾಟಕದಲ್ಲಿ ಈಗ ಮಳೆ ಸುರಿದರೂ, ದೊಡ್ಡ ವಿನಾಶ ಸೃಷ್ಟಿ ಮಾಡುವ ಆತಂಕ ಇಲ್ಲ.












Click it and Unblock the Notifications