Railway New Line: ಕರ್ನಾಟಕದ ಹೊಸ ರೈಲ್ವೆ ಮಾರ್ಗದ ಸರ್ವೆಗೆ ಕೇಂದ್ರ ಸಚಿವರ ನಿರ್ದೇಶನ
ಬೆಂಗಳೂರು, ಮೇ 01: ಕರ್ನಾಟಕದ ವಿವಿಧ ರೈಲು ಯೋಜನೆಗಳ ಪ್ರಾಥಮಿಕ ಕೆಲಸ, ನಿರ್ಮಾಣ ಕೆಲಸ ಬರದಿಂದ ಸಾಘಿದೆ. ಈ ಮಧ್ಯೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಉತ್ತರ ಕರ್ನಾಟಕದ ಪ್ರಮುಖ 'ಲೋಕಾಪೂರ - ರಾಮದುರ್ಗ - ಸವದತ್ತಿ - ಧಾರವಾಡ' ಮಧ್ಯದ ರೈಲ್ವೆ ಯೋಜನೆ ಕುರಿತು ರಾಜ್ಯದ ಸಂಸದರಿಗೆ ಪತ್ರ ಬರೆದಿದ್ದಾರೆ. ಈ ಮಾರ್ಗದಲ್ಲಿ ರೈಲು ಮಾರ್ಗ ನಿರ್ಮಾಣ ತೀರಾ ಅತ್ಯಗತ್ಯವಾಗಿದೆ ಎಂದು ಸಂದರು ಮಾಹಿತಿ ನೀಡಿದ್ದಾರೆ.
ಉತ್ತರ ಕರ್ನಾಟಕದ ಲೋಕಾಪೂರ - ರಾಮದುರ್ಗ - ಸವದತ್ತಿ - ಧಾರವಾಡ ನಡುವೆ ನೂತನ ರೈಲು ಮಾರ್ಗ ನಿರ್ಮಾಣ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ ನಡೆಸಲಾದ ಯೋಜನೆ ಬಗೆಗಿನ "ಸಾಮಾನ್ಯ ಸಮೀಕ್ಷೆ"ಯನ್ನು ಮತ್ತೊಮ್ಮೆ ಅಂದರೆ ಪುನರ್ ಪರಿಶೀಲನೆ ಮಾಡುವಂತೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಸ್ಪಷ್ಟ ನಿರ್ದೇಶನ ನೀಡಿದ್ದಾರೆ. ಈ ಕುರಿತು ತಮಗೆ ಪತ್ರದ ಮೂಲಕ ತಿಳಿಸಿದ್ದಾರೆ ಎಂದು ಬೆಳಗಾವಿ ಬಿಜೆಪಿ ಸಂಸದ ಜಗದೀಶ್ ಶೆಟ್ಟರ್ ಹೇಳಿದರು.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಸಂಸದರು, ಪ್ರಸ್ತಾಪಿತ ಲೋಕಾಪೂರ - ರಾಮದುರ್ಗ - ಸವದತ್ತಿ - ಧಾರವಾಡ ನಡುವೆ ನೂತನ ರೈಲು ಮಾರ್ಗ ನಿರ್ಮಿಸಲು ಯೋಜಿಸಲಾಗಿದೆ. ಈ ಸಂಬಂಧ ರೇಲ್ವೆ ಅಧಿಕಾರಿಗಳು ಕರೋನಾ-19 (ಕೋವಿಡ್ ರೋಗ) ದೇಶಕ್ಕೆ ಕಾಲಿಡುವ ಮೊದಲು ಸಾಮಾನ್ಯ ಸಮೀಕ್ಷೆ ನಡೆಸಿದ್ದರು. ಇತ್ತೀಚೆಗೆ ಈ ಸಮೀಕ್ಷೆಯ ಪ್ರಕಾರ, ಮಾರ್ಗ ನಿರ್ಮಾಣ ಕಾರ್ಯಸಾಧ್ಯತೆ ಅನುಮಾನದಾಯಕವೆಂದು ಉಲ್ಲೇಖಿಸಿ, ವರದಿ ನೀಡಿದ್ದಾರೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.
ಇಲ್ಲಿ ರೈಲ್ವೆ ಮಾರ್ಗ ನಿರ್ಮಾಣ ಅತ್ಯಗತ್ಯ
ಬೆಳಗಾವಿ ಸಂಸದರಾಗಿ ನಾನು ಚುನಾಯಿತಗೊಂಡ ನಂತರದಲ್ಲಿ ಈ ನೂತನ ಮಾರ್ಗ ನಿರ್ಮಾಣದ ಕುರಿತು ಸತ್ಯಾಸತ್ಯತೆಯ ಬಗ್ಗೆ ಸಾಕಷ್ಟು ಮಾಹಿತಿ ಪಡೆದಿದ್ದೇನೆ. ಈ ಭಾಗದಲ್ಲಿ ಹೊಸ ರೈಲ್ವೆ ಮಾರ್ಗ ನಿರ್ಮಾಣ ಅತೀ ಅವಶ್ಯಕವಾಗಿದೆ. ಇಲ್ಲಿನ ಸವದತ್ತಿಯ ಶ್ರೀ ರೇಣುಕಾ ಯಲ್ಲಮ್ಮ ದೇವಿಯ ದರ್ಶನಕ್ಕೆಂದು ಪ್ರತಿ ವರ್ಷ ಆಗಮಿಸುವ ಲಕ್ಷಾಂತರ ಭಕ್ತಾದಿಗಳಿಗೆ ಇದು ಖಂಡಿತವಾಗಿ ಅನುಕೂಲಕರವಾಗಲಿದೆ.
ಯಲ್ಲಮ್ಮನ ದೇಗುಲಕ್ಕೆ ಬರುವ ಅಪಾರ ಭಕ್ತರಿಗೆ, ಈ ಭಾಗದ ನಾಗರಿಕರಿಗೆ ಇಲ್ಲಿ ರೈಲ್ವೆ ನಿರ್ಮಿಸುವ ಅಗತ್ಯತೆಯನ್ನು ಈಗಾಗಲೇ ಕೇಂದ್ರ ರೇಲ್ವೆ ಸಚಿವರಾದ ಮಾನ್ಯ ಅಶ್ವಿನಿ ವೈಷ್ಣವ್ ಹಾಗೂ ಕೇಂದ್ರ ರೇಲ್ವೆ ರಾಜ್ಯ ಸಚಿವರಾದ ವಿ.ಸೋಮಣ್ಣ ಅವರಿಗೆ ತಿಳಿಸಲಾಗಿದೆ. ಅಷ್ಟೇ ಅಲ್ಲದೇ ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾದ ಪ್ರಹ್ಲದ್ ಜೋಶಿಯವರಿಗೂ ಮಾಹಿತಿ ನೀಡಿದ್ದಾರೆ.

ಶೀಘ್ರವೇ ಸಮೀಕ್ಷೆ ಕಾರ್ಯ ಆರಂಭ
ಇದೆಲ್ಲ ಮುಗಿದ ಬಳಿಕ ಇದೀದ ಅಶ್ವಿನಿ ವೈಷ್ಣವ್ ಅವರು, ರೇಲ್ವೆ ಬೋರ್ಡ್‌ಗೆ ಸಂಬಂಧಿಸಿದ ವಿಭಾಗದ ಅಧಿಕಾರಿಗಳಿಗೆ ಈ ಲೋಕಾಪೂರ - ರಾಮದುರ್ಗ - ಸವದತ್ತಿ - ಧಾರವಾಡ ನಡುವೆ ಪ್ರಸ್ತಾಪಿತ ಮಾರ್ಗದಲ್ಲಿ ಸಾಮಾನ್ಯ ಸಮೀಕ್ಷೆ ನಡೆಸುವಂತೆ ಅವರು ಸ್ಪಷ್ಟ ನಿರ್ದೇಶನ ನೀಡಿದ್ದಾರೆ. ಸಮೀಕ್ಷೆ ಕಾರ್ಯವನ್ನು ರೇಲ್ವೆ ಅಧಿಕಾರಿಗಳು ಆದಷ್ಟು ಬೇಗನೇ ಆರಂಭಿಸುವಂತೆ ಅವರು ತಿಳಿಸಿ ಪತ್ರ ಬರೆದಿರುವುದು ಹರ್ಷವೆನಿಸಿದೆ. ಶೀಘ್ರವೇ ಮತ್ತೊಮ್ಮೆ ಸಮೀಕ್ಷೆ ನಡೆಯುವ ವಿಶ್ವಾಸ ಇದೆ ಎಂದರು..












Click it and Unblock the Notifications