Train: ರಾಜ್ಯದಲ್ಲಿ ಪ್ರಮುಖ ರೈಲುಗಳು ರದ್ದು: ವೇಳಾಪಟ್ಟಿ ಬದಲಾವಣೆ, ಮಾಹಿತಿ ವಿವರ
ಹುಬ್ಬಳ್ಳಿ: ನಿಟ್ಟೂರು ಮತ್ತು ಸಂಪಿಗೆ ರೋಡ್ ನಿಲ್ದಾಣಗಳ ನಡುವಿನ ಲೆವೆಲ್ ಕ್ರಾಸಿಂಗ್-64ರ ರಸ್ತೆ ಕೆಳಸೇತುವೆಗೆ ತಾತ್ಕಾಲಿಕ ಗರ್ಡರ್ ಗಳನ್ನು ಅಳವಡಿಸುವ ಮತ್ತು ತೆಗೆದುಹಾಕಲು ಅಗತ್ಯ ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಸಲುವಾಗಿ, ಈ ಕೆಳಗಿನ ರೈಲುಗಳನ್ನು ರದ್ದು, ಭಾಗಶಃ ರದ್ದು, ಮಾರ್ಗ ಬದಲಾವಣೆ, ನಿಯಂತ್ರಣ ಮತ್ತು ಸಮಯ ಮರುನಿಗದಿ ಮಾಡಲಾಗುತ್ತಿದೆ. ಅವುಗಳ ಮಾಹಿತಿ ಈ ಕೆಳಗಿನಂತಿವೆ:

8 ರೈಲುಗಳ ಸಂಚಾರ ರದ್ದು:
ಈ ಕೆಳಗಿನ ರೈಲುಗಳ ಸಂಚಾರ ಆಗಸ್ಟ್ 8 ಮತ್ತು 15 ರಂದು ತಾತ್ಕಾಲಿಕವಾಗಿ 2 ದಿನ ರದ್ದು ಮಾಡಲಾಗುತ್ತಿದೆ:
1. ರೈಲು ಸಂಖ್ಯೆ 07346 ತುಮಕೂರು-ಚಾಮರಾಜನಗರ ಡೈಲಿ ಪ್ಯಾಸೆಂಜರ್ ಸ್ಪೆಷಲ್.
2. ರೈಲು ಸಂಖ್ಯೆ 07328 ಚಾಮರಾಜನಗರ-ಮೈಸೂರು ಡೈಲಿ ಪ್ಯಾಸೆಂಜರ್ ಸ್ಪೆಷಲ್.
3. ರೈಲು ಸಂಖ್ಯೆ 16239 ಚಿಕ್ಕಮಗಳೂರು-ಯಶವಂತಪುರ ಡೈಲಿ ಎಕ್ಸ್‌ಪ್ರೆಸ್.
4. ರೈಲು ಸಂಖ್ಯೆ 16240 ಯಶವಂತಪುರ-ಚಿಕ್ಕಮಗಳೂರು ಡೈಲಿ ಎಕ್ಸ್‌ಪ್ರೆಸ್.
5. ರೈಲು ಸಂಖ್ಯೆ 06576 ತಮಕೂರು-ಕೆಎಸ್‌ಆರ್ ಬೆಂಗಳೂರು ಮೆಮು ಸ್ಪೆಷಲ್.
6. ರೈಲು ಸಂಖ್ಯೆ 06575 KSR ಬೆಂಗಳೂರು-ತಮುಕೂರು ಮೆಮು ಸ್ಪೆಷಲ್.
7. ರೈಲು ಸಂಖ್ಯೆ 16579 ಯಶವಂತಪುರ-ಶಿವಮೊಗ್ಗ ಟೌನ್ ಇಂಟರ್‌ಸಿಟಿ ಡೈಲಿ ಎಕ್ಸ್‌ಪ್ರೆಸ್.
8. ರೈಲು ಸಂಖ್ಯೆ 16580 ಶಿವಮೊಗ್ಗ ಟೌನ್-ಯಶವಂತಪುರ ಇಂಟರ್‌ಸಿಟಿ ಡೈಲಿ ಎಕ್ಸ್‌ಪ್ರೆಸ್.
5 ರೈಲುಗಳ ಸಂಚಾರ ಭಾಗಶಃ ರದ್ದು:
ಈ ಕೆಳಗಿನ ರೈಲುಗಳನ್ನು ಆಗಸ್ಟ್ 8 ಮತ್ತು 15 ರಂದು ತಾತ್ಕಾಲಿಕವಾಗಿ 2 ದಿನ ಭಾಗಶಃ ರದ್ದು ಮಾಡಲಾಗುತ್ತಿದೆ:
1. ರೈಲು ಸಂಖ್ಯೆ 06571 ಕೆಎಸ್‌ಆರ್ ಬೆಂಗಳೂರು-ತುಮಕೂರು ಮಮು ವಿಶೇಷ ರೈಲು ಹಿರೇಹಳ್ಳಿ- ತುಮಕೂರು ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ ಮತ್ತು ಈ ರೈಲು ಹಿರೇಹಳ್ಳಿಯಲ್ಲಿ ಕೊನೆಗೊಳ್ಳುತ್ತದೆ.
2. ರೈಲು ಸಂಖ್ಯೆ 06572 ತುಮಕೂರು-ಕೆಎಸ್‌ಆರ್ ಬೆಂಗಳೂರು ಮೆಮು ವಿಶೇಷ ರೈಲು ತುಮಕೂರು- ಹಿರೇಹಳ್ಳಿ, ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿದೆ ಮತ್ತು ಈ ರೈಲು ಹಿರೇಹಳ್ಳಿಯಿಂದ ತನ್ನ ನಿಗದಿತ ಸಮಯದಲ್ಲಿ ಹೊರಡಲಿದೆ.
3. ರೈಲು ಸಂಖ್ಯೆ 20652 ತಾಳಗುಪ್ಪ-ಕೆಎಸ್‌ಆರ್ ಬೆಂಗಳೂರು ಡೈಲಿ ಎಕ್ಸ್‌ಪ್ರೆಸ್ ರೈಲು ಅರಸೀಕೆರೆ-ಕೆಎಸ್‌ಆರ್ ಬೆಂಗಳೂರು ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳ್ಳಲಿದೆ ಮತ್ತು ಈ ರೈಲು ಅರಸೀಕೆರೆಯಲ್ಲಿ ಕೊನೆಗೊಳ್ಳುತ್ತದೆ.
4. ರೈಲು ಸಂಖ್ಯೆ 12726 ಧಾರವಾಡ-ಕೆಎಸ್‌ಆರ್ ಬೆಂಗಳೂರು ಸಿದ್ಧಗಂಗಾ ಡೈಲಿ ಎಕ್ಸ್‌ಪ್ರೆಸ್ ಅರಸೀಕೆರೆ- ಕೆಎಸ್‌ಆರ್ ಬೆಂಗಳೂರು ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳ್ಳಲಿದೆ ಮತ್ತು ಈ ರೈಲು ಅರಸೀಕೆರೆಯಲ್ಲಿ ಕೊನೆಗೊಳ್ಳುತ್ತದೆ.
5. ರೈಲು ಸಂಖ್ಯೆ 12725 ಕೆಎಸ್‌ಆರ್ ಬೆಂಗಳೂರು-ಧಾರವಾಡ ಸಿದ್ಧಗಂಗಾ ಡೈಲಿ ಎಕ್ಸ್‌ಪ್ರೆಸ್ ಕೆಎಸ್‌ಆರ್ ಬೆಂಗಳೂರು-ಅರಸಿಕೆರೆ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳ್ಳಲಿದೆ ಮತ್ತು ಈ ರೈಲು ಅರಸೀಕೆರೆಯಿಂದ ತನ್ನ ನಿಗದಿತ ಸಮಯದಲ್ಲಿ ಹೊರಡಲಿದೆ.

5 ರೈಲುಗಳ ಮಾರ್ಗ ಬದಲಾವಣೆ:
1. ಆಗಸ್ಟ್ 7 & 14 ರಂದು ವಾಸ್ಕೊ-ಡ-ಗಾಮಾದಿಂದ ಹೊರಡುವ ರೈಲು ಸಂಖ್ಯೆ 17310 ವಾಸ್ಕೋ ಡ ಗಾಮಾ-ಯಶವಂತಪುರ ಡೈಲಿ ಎಕ್ಸ್‌ಪ್ರೆಸ್ ರೈಲು ಅರಸೀಕೆರೆ, ಹಾಸನ, ನೆಲಮಂಗಲ, ಯಶವಂತಪುರ ಮಾರ್ಗದ ಮೂಲಕ ಸಂಚರಿಸಲಿದೆ. ಹೀಗಾಗಿ ತಿಪಟೂರು ಮತ್ತು ತುಮಕೂರು ನಿಲ್ದಾಣಗಳಲ್ಲಿ ನಿಗದಿತ ನಿಲುಗಡೆ ಇರುವುದಿಲ್ಲ.
2. ಆಗಸ್ಟ್ 8 ಮತ್ತು 15 ರಂದು ಮೈಸೂರಿನಿಂದ ಹೊರಡುವ ರೈಲು ಸಂಖ್ಯೆ 22687 ಮೈಸೂರು-ವಾರಣಾಸಿ ದ್ವಿ-ಸಾಪ್ತಾಹಿಕ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಯಶವಂತಪುರ, ನೆಲಮಂಗಲ, ಹಾಸನ, ಅರಸೀಕೆರೆ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ತುಮಕೂರಿನಲ್ಲಿ ನಿಗದಿತ ನಿಲುಗಡೆ ಇರುವುದಿಲ್ಲ.
3. ಆಗಸ್ಟ್ 8 ಮತ್ತು 15 ರಂದು ಯಶವಂತಪುರ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 82653 ಯಶವಂತಪುರ-ಜೈಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಯಶವಂತಪುರ, ನೆಲಮಂಗಲ, ಹಾಸನ, ಅರಸೀಕೆರೆ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ತುಮಕೂರಿನಲ್ಲಿ ನಿಗದಿತ ನಿಲುಗಡೆ ಇರುವುದಿಲ್ಲ.
4. ಆಗಸ್ಟ್ 8 ಮತ್ತು 15 ರಂದು ಮೈಸೂರಿನಿಂದ ಹೊರಡುವ ರೈಲು ಸಂಖ್ಯೆ 19668 ಮೈಸೂರು-ಉದಯಪುರ ಸಿಟಿ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು ಕೆಎಸ್‌ಆರ್ ಬೆಂಗಳೂರು, ಯಶವಂತಪುರ, ನೆಲಮಂಗಲ, ಹಾಸನ, ಅರಸೀಕೆರೆ, ದಾವಣಗೆರೆ ಮಾರ್ಗವಾಗಿ ಸಂಚರಿಸಲಿದೆ.
5. ಆಗಸ್ಟ್ 8 ಮತ್ತು 15 ರಂದು ಮೈಸೂರಿನಿಂದ ಹೊರಡುವ ರೈಲು ಸಂಖ್ಯೆ 17326 ಮೈಸೂರು-ಬೆಳಗಾವಿ ವಿಶ್ವಮಾನವ ಡೈಲಿ ಎಕ್ಸ್ ಪ್ರೆಸ್ ರೈಲು ಯಶವಂತಪುರ, ನೆಲಮಂಗಲ, ಹಾಸನ, ಅರಸೀಕೆರೆ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ತುಮಕೂರು ಮತ್ತು ತಿಪಟೂರು ನಿಲ್ದಾಣಗಳಲ್ಲಿ ನಿಗದಿತ ನಿಲುಗಡೆ ಇರುವುದಿಲ್ಲ.
5 ರೈಲುಗಳ ನಿಯಂತ್ರಣ:
1. ಆಗಸ್ಟ್ 6 ಮತ್ತು 13 ರಂದು ಬಿಕಾನೇರ್ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 16588 ಬಿಕಾನೇರ್- ಯಶವಂತಪುರ ದ್ವಿ-ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲನ್ನು ಮಾರ್ಗ ಮಧ್ಯೆ 150 ನಿಮಿಷ ನಿಯಂತ್ರಿಸಲಾಗುತ್ತದೆ.
2. ಆಗಸ್ಟ್ 8 ಮತ್ತು 15 ರಂದು ಯಶವಂತಪುರದಿಂದ ಹೊರಡುವ ರೈಲು ಸಂಖ್ಯೆ 12629 ಯಶವಂತಪುರ- ಹಜರತ್ ನಿಜಾಮುದ್ದೀನ್ ರೈಲನ್ನು ಮಾರ್ಗ ಮಧ್ಯೆ 50 ನಿಮಿಷ ನಿಯಂತ್ರಿಸಲಾಗುತ್ತದೆ.
3. ಆಗಸ್ಟ್ 8 ಮತ್ತು 15 ರಂದು ರೈಲು ಸಂಖ್ಯೆ 20651 ಕೆಎಸ್‌ಆರ್ ಬೆಂಗಳೂರು-ತಾಳಗುಪ್ಪ ಡೈಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲನ್ನು ಮಾರ್ಗದಲ್ಲಿ 10 ನಿಮಿಷಗಳವರೆಗೆ ನಿಯಂತ್ರಿಸಲ್ಪಡುತ್ತದೆ.
4. ಆಗಸ್ಟ್ 8 ಮತ್ತು 15 ರಂದು ಬೆಳಗಾವಿಯಿಂದ ಹೊರಡುವ ರೈಲು ಸಂಖ್ಯೆ 17325 ಬೆಳಗಾವಿ-ಮೈಸೂರು ವಿಶ್ವಮಾನವ ಡೈಲಿ ಎಕ್ಸ್ ಪ್ರೆಸ್ ರೈಲನ್ನು ಮಾರ್ಗದಲ್ಲಿ 55 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ
5. ಆಗಸ್ಟ್ 8 ಮತ್ತು 15 ರಂದು ರೈಲು ಸಂಖ್ಯೆ 07345 ಚಾಮರಾಜನಗರ-ತುಮಕೂರು ಡೈಲಿ ಪ್ಯಾಸೆಂಜರ್ ಸ್ಪೆಷಲ್ ರೈಲನ್ನು ಮಾರ್ಗದಲ್ಲಿ 120 ನಿಮಿಷಗಳವರೆಗೆ ನಿಯಂತ್ರಿಸಲ್ಪಡುತ್ತದೆ.
2 ರೈಲುಗಳ ಸಮಯ ಮರುನಿಗದಿ:
1. ಆಗಸ್ಟ್ 8 ಮತ್ತು 15 ರಂದು ರೈಲು ಸಂಖ್ಯೆ 17309 ಯಶವಂತಪುರ-ವಾಸ್ಕೋಡಗಾಮಾ ಡೈಲಿ ಎಕ್ಸ್‌ಪ್ರೆಸ್ ರೈಲು ಯಶವಂತಪುರದಿಂದ 60 ನಿಮಿಷ ತಡವಾಗಿ ಹೊರಡಲಿದೆ.
2. ಆಗಸ್ಟ್ 14 ರಂದು ರೈಲು ಸಂಖ್ಯೆ 06513 ತುಮಕೂರು-ಶಿವಮೊಗ್ಗ ಟೌನ್ ಮೆಮು ಸ್ಪೆಷಲ್ ರೈಲು
ತುಮಕೂರಿನಿಂದ 85 ನಿಮಿಷ ತಡವಾಗಿ ಹೊರಡಲಿದೆ.
-
Train Delay: ರೈಲು ಪ್ರಯಾಣಿಕರೇ ಎಚ್ಚರ! ನಾಳೆ ಬೆಂಗಳೂರು-ಚೆನ್ನೈ ನಡುವಿನ ಸಂಚಾರದಲ್ಲಿ ಭಾರಿ ವ್ಯತ್ಯಯ -
Vande Bharat Sleeper: ಉತ್ಪಾದನೆ ಗುರಿ ತಲುಪದ ಬೆಂಗಳೂರು-ಚೆನ್ನೈ ಕಂಪನಿಗಳು, ಸ್ಲೀಪರ್ ರೈಲು ವಿತರಣೆ ವಿಳಂಬ -
ಭಾರತದ ಏಕೈಕ ರೈಲು ಸಂಪರ್ಕವಿಲ್ಲದ ರಾಜ್ಯ ಸಿಕ್ಕಿಂ: ಕಾರಣ ಮತ್ತು ಪ್ರಯಾಣ ಮಾರ್ಗಗಳ ವಿವರ -
ರೈಲಿನಲ್ಲಿ ಆಹಾರ ಗುಣಮಟ್ಟ, ಅಧಿಕೃತ ವೆಂಡರ್ ಮಾಹಿತಿ ತಿಳಿಯಲು QR ಕೋಡ್ ವ್ಯವಸ್ಥೆ, ಏನಿದು? -
Mysuru-Nanjangud special train: ನಂಜನಗೂಡು ದೊಡ್ಡ ಜಾತ್ರೆಗೆ ಮೈಸೂರಿನಿಂದ ವಿಶೇಷ ರೈಲು ಸೇವೆ: ಸಚಿವ ವಿ.ಸೋಮಣ್ಣ ಮಾಹಿತಿ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್












Click it and Unblock the Notifications