Get Updates
Get notified of breaking news, exclusive insights, and must-see stories!

Yash: "ನೀವ್ಯಾಕೆ ಪ್ರತಿಯೊಂದಕ್ಕೂ ಗಂಡನನ್ನು ಕರೀತೀರಿ".. ರಾಧಿಕಾ ಪಂಡಿತ್ ಇನ್‌ಸ್ಟಾಗ್ರಾಮ್ ಪೋಸ್ಟ್‌ ವೈರಲ್!

ಸ್ಯಾಂಡಲ್‌ವುಡ್‌ನ ಟಾಪ್ ಬೆಸ್ಟ್‌ ಜೋಡಿಗಳಲ್ಲಿ ರಾಕಿಂಗ್‌ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಜೋಡಿ ಸಹ ಒಂದು. ತೆರೆಯ ಮೇಲೆ ಒಂದಾಗಿ ಕಾಣಿಸಿಕೊಂಡು ಸಿನಿ ಪ್ರಿಯರನ್ನು ರಂಜಿಸಿದ್ದ ಜೋಡಿ ಇದೀಗ ದಾಂಪತ್ಯ ಜೀವನಕ್ಕೆ ಕಾಲಿರಿಸಿ 8 ವರ್ಷಗಳು ಪೂರ್ಣಗೊಂಡಿವೆ. ನಟ ಯಶ್ ಅವರು ಭಾರತೀಯ ಸಿನಿಮಾರಂಗದಲ್ಲಿ ಹೊಸ ಅಲೆ ಸೃಷ್ಟಿ ಮಾಡಿದ್ದಾರೆ. ಕೆಜಿಎಫ್ ದೇಶದಾದ್ಯಂತ ಭಾರೀ ಸದ್ದು ಮಾಡಿದ್ದು, ಹಲವು ದಾಖಲೆಗಳನ್ನು ಮುರಿದಿದೆ. ಈ ಸಂಭ್ರಮಚಾರಣೆಯ ಸಂದರ್ಭದಲ್ಲಿ ನಟಿ ರಾಧಿಕಾ ಪಂಡಿತ್ ಅವರು Instagramನಲ್ಲಿ ಮಾಡಿರುವ ಪೋಸ್ಟ್ ಭಾರೀ ವೈರಲ್ ಆಗುತ್ತಿದೆ.

ರಾಕಿಂಗ್‌ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಅವರು ದಾಂಪತ್ಯ ಜೀವನಕ್ಕೆ ಕಾಲಿರಿಸಿ 8 ವರ್ಷಗಳು ಕಳೆದಿವೆ. 9ನೇ ವರ್ಷದ ಮದುವೆ ವಾರ್ಷಿಕೋತ್ಸವಕ್ಕೆ ನಟಿ ರಾಧಿಕಾ ಪಂಡಿತ್‌ ಅವರು ಸೋಷಿಯಲ್ ಮೀಡಿಯಾದಲ್ಲಿ ಪತಿ ಮತ್ತು ನಟ ರಾಕಿಂಗ್ ಸ್ಟಾರ್‌ ಯಶ್ ಅವರ 10 ಗುಣಗಳ ಬಗ್ಗೆ ಎಐ ರಚಿತ ಫೋಟೋವನ್ನು ಹಂಚಿಕೊಂಡಿದ್ದಾರೆ.

Radhika Pandit Yash Viral Post You are and always will be my answer to everything

ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೊ ಹಂಚಿಕೊಂಡ ರಾಧಿಕಾ ಪಂಡಿತ್ ಅವರು, ನೀವ್ಯಾಕೆ ಪ್ರತಿಯೊಂದಕ್ಕೂ ಗಂಡನನ್ನು ಕರೀತೀರಿ ಎನ್ನುವ ಪ್ರಶ್ನೆಯೊಂದನ್ನು ಕೇಳಿದ್ದು.. ಅದಕ್ಕೆ ಅವರೇ ಉತ್ತರ ರೂಪದಲ್ಲಿ ಯಶ್ ಅವರ ವಿವಿಧ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ನನ್ನ ಚಾಟ್‌ ಜಿಪಿಟಿ, ಅಡುಗೆ ಮಾಡುವವರು , ನನ್ನ ಗುರು, ಕ್ಯಾಲಿಕ್ಯುಲೇಟರ್, ಡಿಜೆ, ಸ್ಟ್ರೆಸ್‌ಬಸ್ಟರ್‌, ಪರ್ಸನಲ್‌ ಡಾಕ್ಟರ್‌, ಫೋಟೋಗ್ರಾಫರ್ ಹಾಗೂ ನನ್ನ ಶಾಂತಿ ಎಂದು ಒಂದೊಂದು ಫೋಟೋಗಳಿಗೂ ಒಂದೊಂದು ಟ್ಯಾಗ್‌ಲೈನ್ ಕೊಟ್ಟಿದ್ದಾರೆ.

ಯಶ್ ಮತ್ತು ರಾಧಿಕಾ ಪಂಡಿತ್ 2016 ಡಿಸೆಂಬರ್ 9ರಂದು ಬೆಂಗಳೂರಿನ ತಾಜ್ ವೆಸ್ಟ್ ಎಂಡ್ನಲ್ಲಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಯಶ್ ಮತ್ತು ರಾಧಿಕಾ ಪಂಡಿತ್ ಅವರಿಗೆ ಐರಾ ಮತ್ತು ಯಥರ್ವ್ ಎನ್ನುವ ಇಬ್ಬರು ಮಕ್ಕಳಿದ್ದಾರೆ.

ಮಸ್ತ್‌ ರಿಪ್ಲೈ ಕೊಟ್ಟ ಅಭಿಮಾನಿಗಳು: ರಾಧಿಕಾ ಅವರ ಈ ಪೋಸ್ಟ್‌ಗೆ ಅಭಿಮಾನಿಗಳಿಂದ ಶುಭಾಶಯದ ಸುರಿಮಳೆ ವ್ಯಕ್ತವಾಗಿದೆ. Perfect package of Family man ❤️ ಎಂದು ನೆಟ್ಟಿಗರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+