Kannada: ನಮ್ಮ ರಕ್ತವೇ ಕನ್ನಡ, ಅದನ್ನು ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ: ಶಿಕ್ಷಣ ಸಚಿವ ಮಧು ಬಂಗಾರಪ್ಪ
Kannada: ನಮ್ಮ ರಕ್ತವೇ ಕನ್ನಡ, ಅದನ್ನು ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಹೇಳಿದ್ದಾರೆ. ಶುಕ್ರವಾರ ಮಾರ್ಚ್ 27ರಂದು ವಿಧಾನಸಭೆಯಲ್ಲಿ ಶಾಲಾ ಶಿಕ್ಷಣದಲ್ಲಿ ಕನ್ನಡ ಭಾಷೆಯ ಅಸ್ಮಿತೆ ಮತ್ತು ಕಲಿಕೆಯ ಬಗ್ಗೆ ನನ್ನ ಸ್ಪಷ್ಟ ನಿಲುವನ್ನು ಹಂಚಿಕೊಂಡಿರುವ ಅವರು, ಕನ್ನಡ ಭಾಷೆಯನ್ನು ಇನ್ನೂ ಹೆಚ್ಚು ಆಳವಾಗಿ, ಅರ್ಥಪೂರ್ಣವಾಗಿ ಕಲಿಸುವ ಪ್ರಯತ್ನವನ್ನು ಎಲ್ಲ ಸರ್ಕಾರಿ ಶಾಲೆಗಳಲ್ಲಿ ಮಾಡಲಾಗುವುದು ಎಂದು ಹೇಳಿದ್ದಾರೆ.
ಮಕ್ಕಳಿಗೆ ಕನ್ನಡವನ್ನು ಇನ್ನಷ್ಟು 'ಚಂದವಾಗಿ', ಅರ್ಥಪೂರ್ಣವಾಗಿ ಹಾಗೂ ಆಳವಾಗಿ ಹೇಗೆ ಒಲಿಸಿಕೊಳ್ಳಬಹುದು ಎಂಬುದರ ಬಗ್ಗೆ ನಮ್ಮ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಇದಕ್ಕಾಗಿ ನಾನು ಖುದ್ದಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರೊ. ಪುರುಷೋತ್ತಮ ಬಿಳಿಮಲೆ, ಹಿರಿಯ ಸಾಹಿತಿಗಳಾದ ಬರಗೂರು ರಾಮಚಂದ್ರಪ್ಪ ಹಾಗೂ ದೇವನೂರ ಮಹಾದೇವ ಅವರಂತಹ ಗಣ್ಯರೊಂದಿಗೆ ಚರ್ಚಿಸಿ ಸೂಕ್ತ ಸಲಹೆಗಳನ್ನು ಪಡೆದಿದ್ದೇನೆ.

ಸುಪ್ರೀಂ ಕೋರ್ಟ್ ಆದೇಶದಂತೆ ಶಿಕ್ಷಣ ಮಾಧ್ಯಮವನ್ನು ಆಯ್ಕೆ ಮಾಡುವ ಹಕ್ಕು ಪೋಷಕರಿಗೆ ಇದೆ. ರಾಜ್ಯದಲ್ಲಿ ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕನ್ನಡ ಇದೆ. ನಮ್ಮ ರಾಜ್ಯದ ಪ್ರಸ್ತುತ ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು, ನನ್ನ ಪೂಜ್ಯ ತಂದೆಯವರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಎಸ್. ಬಂಗಾರಪ್ಪನವರು ಸೇರಿದಂತೆ ಸದನದಲ್ಲಿರುವ ಅನೇಕ ಗಣ್ಯರು ಕನ್ನಡ ಮಾಧ್ಯಮದ ಶಾಲೆಯಲ್ಲೇ ಓದಿ ಉನ್ನತ ಸ್ಥಾನಕ್ಕೇರಿದವರು ಎನ್ನುವುದು ನಮ್ಮೆಲ್ಲರ ಹೆಮ್ಮೆ.
ಕನ್ನಡ ಭಾಷೆಯನ್ನು ನಮ್ಮ ಮಕ್ಕಳಿಗೆ ಇನ್ನಷ್ಟು ಪರಿಣಾಮಕಾರಿಯಾಗಿ ಕಲಿಸುವ ನಿಟ್ಟಿನಲ್ಲಿ ನಿಮ್ಮ ಉತ್ತಮ ಸಲಹೆಗಳಿಗೆ ಸದಾ ಮುಕ್ತ ಸ್ವಾಗತವಿದೆ. ಬನ್ನಿ, ನಿಮ್ಮ ಸೂಕ್ತ ಸಲಹೆಗಳನ್ನು ನೀಡಿ, ಅವುಗಳನ್ನು ಅನುಷ್ಠಾನಕ್ಕೆ ತರುವ ಜವಾಬ್ದಾರಿ ನನ್ನದು ಎಂದೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಹೇಳಿದ್ದಾರೆ.
Kannada: ಸಾರ್ವಜನಿಕರು ಹೇಳಿದ್ದೇನು
ಇನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಮಂಡಿಸಿರುವ ವಿಷಯದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ, ಕೆಲವರು ಹಿಂದಿ ಭಾಷೆಯನ್ನು ಪಠ್ಯದಿಂದ ಕೈಬಿಡಿ ಎಂದು ಆಗ್ರಹಿಸಿದ್ದಾರೆ. ಕರ್ನಾಟಕದಲ್ಲಿ ಹಿಂದಿ ಭಾಷೆಯ ವಿಷಯದಿಂದಾಗಿ ಪ್ರತಿ ವರ್ಷ ಸುಮಾರು 1 ಲಕ್ಷ ವಿದ್ಯಾರ್ಥಿಗಳು ತಮ್ಮ ವೃತ್ತಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಮೂರನೇ ಭಾಷೆಯ ಬದಲಿಗೆ IT ಕೋರ್ಸ್‌ನ ಅಡಿಪಾಯವನ್ನು ಪರಿಚಯಿಸಿ, ತ್ರಿಭಾಷಾ ನೀತಿ ಕಿತ್ತು ಬಿಸಾಡಿ. ಹಿಂದಿ ಟೀಚರ್ ಬದಲಿಗೆ ಕಂಪ್ಯೂಟರ್ ಟೀಚರ್ ನೇಮಕ ಮಾಡಿ ಎಂದು ಹಲವರು ಆಗ್ರಹಿಸಿದ್ದಾರೆ.
"ನಮ್ಮ ರಕ್ತವೇ ಕನ್ನಡ, ಅದನ್ನು ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ!"
— Madhu Bangarappa (@Madhu_Bangarapp) March 25, 2026
ಇಂದು ವಿಧಾನಸಭೆಯಲ್ಲಿ ಶಾಲಾ ಶಿಕ್ಷಣದಲ್ಲಿ ಕನ್ನಡ ಭಾಷೆಯ ಅಸ್ಮಿತೆ ಮತ್ತು ಕಲಿಕೆಯ ಬಗ್ಗೆ ನನ್ನ ಸ್ಪಷ್ಟ ನಿಲುವನ್ನು ಹಂಚಿಕೊಂಡೆ.
ಮಕ್ಕಳಿಗೆ ಕನ್ನಡವನ್ನು ಇನ್ನಷ್ಟು 'ಚಂದವಾಗಿ', ಅರ್ಥಪೂರ್ಣವಾಗಿ ಹಾಗೂ ಆಳವಾಗಿ ಹೇಗೆ ಒಲಿಸಿಕೊಳ್ಳಬಹುದು ಎಂಬುದರ ಬಗ್ಗೆ ನಮ್ಮ ಸರ್ಕಾರ… pic.twitter.com/qB64TDWyvI
ಮಹೇಶ ಬಸಾಪುರ ಎನ್ನುವವರು, ನಿಮಗೆ ನಿಜವಾಗಲೂ ಕನ್ನಡ ಕುಲದ ಕಾಳಜಿ ಇದ್ದರೆ, ತಮಿಳುನಾಡಿನ ರೀತಿ ದ್ವಿಭಾಷಾ ನೀತಿ ಜಾರಿ ಮಾಡಿ. ಕನ್ನಡ ಪಠ್ಯದಲ್ಲಿ ಕನ್ನಡ ಸರಳೀಕರಣೆಗೆ ಆಯೋಗ ರಚಿಸಿ, ಈಗಿರುವ ಕನ್ನಡ ಮಾದ್ಯಮ ಪುಸ್ತಕಗಳು ಬೇಡದ ಕ್ಲಿಷ್ಟ ಸಂಸ್ಕೃತ ಪದಗಳಿಂದ ತುಂಬಿವೆ. ಕಾಲೇಜುಗಳಲ್ಲಿ ಒಂದು ಕನ್ನಡ ವಿಷಯ ಕಡ್ಡಾಯ ಮಾಡಿ, ಮಾತಿನಲ್ಲಿ ಮರಳು ಮಾಡುವುದು ಬೇಡ ಎಂದಿದ್ದಾರೆ.












Click it and Unblock the Notifications