ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್‌ Viral: ದಿನಕ್ಕೆ 3 ಸಾವಿರ ರೂ. ಗಳಿಕೆ

ಬೆಂಗಳೂರು: ರಸ್ತೆಬದಿಯಲ್ಲಿ ನಿಂತು ಪಾನಿಪುರಿ ಮಾರುವವರನ್ನು ನೋಡಿದಾಗ ಇವರೇನು ಸಂಪಾದನೆ ಮಾಡುತ್ತಾರೆ ಎಂಬ ಪ್ರಶ್ನೆ ಹಲವರಲ್ಲಿ ಮೂಡಿರಬಹುದು. ಆದರೆ, ದೊಡ್ಡ ದೊಡ್ಡ ಕಾರ್ಪೊರೇಟ್ ಕಂಪನಿಗಳಲ್ಲಿ ಹಗಲಿರುಳು ದುಡಿಯುವ ಐಟಿ ಉದ್ಯೋಗಿಗಳು ಅಥವಾ ಪದವೀಧರರಿಗಿಂತ ರಸ್ತೆಬದಿಯ ಪಾನಿಪುರಿ ವ್ಯಾಪಾರಿಗಳೇ ಹೆಚ್ಚು ಹಣ ಗಳಿಸುತ್ತಾರೆ ಎಂದರೆ ನೀವು ನಂಬಲೇಬೇಕು. ಹೌದು, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಂಟೆಂಟ್ ಕ್ರಿಯೇಟರ್ ಒಬ್ಬರು ಪಾನಿಪುರಿ ಅಂಗಡಿಯಲ್ಲಿ ಒಂದು ದಿನ ಕೆಲಸ ಮಾಡಿ, ಆ ವ್ಯಾಪಾರಿಯ ದಿನದ ಸಂಪಾದನೆಯ ಲೆಕ್ಕಾಚಾರವನ್ನು ಬಿಚ್ಚಿಟ್ಟಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರ ಹುಬ್ಬೇರಿಸಿದೆ.

ಕ್ಯಾಸಿ ಪಿರೇರಾ (Cassy Pereira) ಎಂಬ ಬೆಂಗಳೂರಿನ ಕಂಟೆಂಟ್ ಕ್ರಿಯೇಟರ್ ಈ ವಿಶಿಷ್ಟ ಪ್ರಯೋಗ ಮಾಡಿದ್ದಾರೆ. ಒಬ್ಬ ವಾಣಿಜ್ಯ ಪದವೀಧರನ ಆದಾಯ ಮತ್ತು ರಸ್ತೆಬದಿಯ ಪಾನಿಪುರಿ ವ್ಯಾಪಾರಿಯ ಆದಾಯದ ನಡುವಿನ ವ್ಯತ್ಯಾಸವನ್ನು ಹೋಲಿಕೆ ಮಾಡುವ ಉದ್ದೇಶದಿಂದ ಅವರು ಈ ವಿಡಿಯೋ ಮಾಡಿದ್ದಾರೆ. ಇದಕ್ಕಾಗಿ ಅವರು ನೇರವಾಗಿ ರಸ್ತೆಬದಿಯ ಪಾನಿಪುರಿ ಸ್ಟಾಲ್‌ಗೆ ಭೇಟಿ ನೀಡಿ, ವ್ಯಾಪಾರಿಯ ಜೊತೆ ಒಂದು ದಿನದ ಮಟ್ಟಿಗೆ ಕೆಲಸ ಮಾಡಿದ್ದಾರೆ. ಪಾನಿಪುರಿ ತಯಾರಿಸುವ ಮೂಲ ಕೆಲಸಗಳಾದ ಈರುಳ್ಳಿ ಹೆಚ್ಚುವುದು, ಆಲೂಗಡ್ಡೆ ಸಿಪ್ಪೆ ಸುಲಿಯುವುದು ಮತ್ತು ಮಸಾಲೆಯುಕ್ತ ಪಾನಿಪುರಿ ಮಸಾಲೆ ತಯಾರಿಸುವುದನ್ನು ಕ್ಯಾಸಿ ಕಲಿತುಕೊಂಡಿದ್ದಾರೆ.

Bengaluru

ಒಂದೇ ಗಂಟೆಯಲ್ಲಿ 120 ಪೂರಿ ಮಾರಾಟ

ಮೂಲ ಸಿದ್ಧತೆಗಳನ್ನು ಮುಗಿಸಿದ ನಂತರ, ಕ್ಯಾಸಿ ಪಿರೇರಾ ಅವರೇ ಖುದ್ದಾಗಿ ಗ್ರಾಹಕರಿಗೆ ಪಾನಿಪುರಿ ಸರ್ವ್ ಮಾಡಲು ಪ್ರಾರಂಭಿಸಿದರು. "ಆರಂಭದಲ್ಲಿ ನನಗೆ ಸ್ವಲ್ಪ ನರ್ವಸ್ (Nervous) ಅನಿಸಿತು. ಆದರೆ, ಗ್ರಾಹಕರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ನಾನು ಆ ವೇಗಕ್ಕೆ ಒಗ್ಗಿಕೊಂಡೆ. ಕೇವಲ ಒಂದು ಗಂಟೆಯ ಅವಧಿಯಲ್ಲೇ ನಾವು ಬರೋಬ್ಬರಿ 120 ಪೂರಿಗಳನ್ನು ಮಾರಾಟ ಮಾಡಿದೆವು" ಎಂದು ಕ್ಯಾಸಿ ತಮ್ಮ ವಿಡಿಯೋದಲ್ಲಿ ಅನುಭವ ಹಂಚಿಕೊಂಡಿದ್ದಾರೆ.

ಈ ಪಾನಿಪುರಿ ಅಂಗಡಿಯು ಪ್ರತಿದಿನ ಸಂಜೆ 4 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಕಾರ್ಯನಿರ್ವಹಿಸುತ್ತದೆ. ಸಂಜೆಯಾಗುತ್ತಿದ್ದಂತೆ ಗ್ರಾಹಕರ ದಟ್ಟಣೆ ಮತ್ತಷ್ಟು ಹೆಚ್ಚಾಗುತ್ತಲೇ ಇರುತ್ತದೆ. ಇದೇ ವೇಳೆ ಕ್ಯಾಸಿ ಅವರನ್ನು ಗುರುತಿಸಿದ ಹಲವು ಫಾಲೋವರ್ಸ್ ಕೂಡ ಅವರ ಬಳಿ ಬಂದು ಮಾತನಾಡಿಸಿದ್ದಾರೆ.

ತಿಂಗಳಿಗೆ 90 ಸಾವಿರ ರೂ. ಸಂಪಾದನೆ

ಇನ್ನು ಪಾನಿಪುರಿ ವ್ಯಾಪಾರಿಯ ಸಂಪಾದನೆಯ ಲೆಕ್ಕಾಚಾರವನ್ನು ಕ್ಯಾಸಿ ಬಿಚ್ಚಿಟ್ಟಿದ್ದಾರೆ. ಈ ಅಂಗಡಿಯಲ್ಲಿ ಒಂದು ಪ್ಲೇಟ್ ಪಾನಿಪುರಿಗೆ 30 ರೂಪಾಯಿ ನಿಗದಿಪಡಿಸಲಾಗಿದೆ. ಪ್ರತಿದಿನ ಕನಿಷ್ಠ 80 ರಿಂದ 100 ಪ್ಲೇಟ್ ಪಾನಿಪುರಿಗಳು ಮಾರಾಟವಾಗುತ್ತವೆ. ಇದರ ಪ್ರಕಾರ ಲೆಕ್ಕ ಹಾಕಿದರೆ, ಆ ವ್ಯಾಪಾರಿಯ ಒಂದು ದಿನದ ಸಂಪಾದನೆ ಸುಮಾರು 3,000 ರೂಪಾಯಿಗಳಷ್ಟಾಗುತ್ತದೆ. ಅಂದರೆ, ಒಂದು ತಿಂಗಳಿಗೆ ಬರೋಬ್ಬರಿ 90,000 ರೂಪಾಯಿ ಹಾಗೂ ವಾರ್ಷಿಕವಾಗಿ ಅಂದಾಜು 10.8 ಲಕ್ಷ ರೂಪಾಯಿ ಆದಾಯವನ್ನು ಈ ಪಾನಿಪುರಿ ವ್ಯಾಪಾರಿ ಗಳಿಸುತ್ತಿದ್ದಾರೆ ಎಂದು ಕ್ಯಾಸಿ ಅಂದಾಜಿಸಿದ್ದಾರೆ.

ನೆಟ್ಟಿಗರ ಅಚ್ಚರಿಯ ಪ್ರತಿಕ್ರಿಯೆ

ಕ್ಯಾಸಿ ಪಿರೇರಾ ಹಂಚಿಕೊಂಡಿರುವ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಸೃಷ್ಟಿಸಿದೆ. ಲಕ್ಷಾಂತರ ವೀಕ್ಷಣೆ ಪಡೆದಿರುವ ಈ ವಿಡಿಯೋಗೆ ನೆಟ್ಟಿಗರು ಬಗೆಬಗೆಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. "ಎಷ್ಟೋ ವರ್ಷ ಓದಿ, ಡಿಗ್ರಿ ಪಡೆದು ಕಾರ್ಪೊರೇಟ್ ಕಂಪನಿಗಳಲ್ಲಿ ಕೆಲಸ ಮಾಡುವವರಿಗಿಂತ ಇವರೇ ಉತ್ತಮ ಸಂಪಾದನೆ ಮಾಡುತ್ತಿದ್ದಾರೆ" ಎಂದು ಹಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಸಾಂಪ್ರದಾಯಿಕ ವೃತ್ತಿ ಮಾರ್ಗಗಳು ಮತ್ತು ರಸ್ತೆಬದಿಯ ವ್ಯಾಪಾರದ ಆದಾಯದ ನಡುವಿನ ಅಜಗಜಾಂತರ ವ್ಯತ್ಯಾಸದ ಬಗ್ಗೆ ಆನ್‌ಲೈನ್‌ನಲ್ಲಿ ದೊಡ್ಡ ಚರ್ಚೆಯೇ ಶುರುವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+