ಪಿಯು ಫಲಿತಾಂಶ: ದಕ್ಷಿಣ ಕನ್ನಡ ಮೊದಲು, ಬೀದರ್ ಕೊನೆ
ಬೆಂಗಳೂರು, ಮೇ.8: ಪ್ರಸಕ್ತ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಗುರುವಾರ ಬೆಳಗ್ಗೆ ಪ್ರಕಟವಾಗಿದೆ. ಸುಮಾರು 984 ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಪರೀಕ್ಷೆಯ ಫಲಿತಾಂಶ ಹಲವು ಜಿಲ್ಲೆಗಳಲ್ಲಿ ಸಂತಸ ತಂದಿದ್ದರೆ ಕೆಲವು ಜಿಲ್ಲೆಗಳಿಗೆ ಎಂದಿನಂತೆ ನಿರಾಶೆ ಮೂಡಿಸಿದೆ.
ಒಟ್ಟು 6,13,705 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆದಿದ್ದರು. ಈ ಬಾರಿಯ ಫಲಿತಾಂಶದಲ್ಲೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದು, ಶೇ 66.81ರಷ್ಟು ಫಲಿತಾಂಶವನ್ನು ಅವರು ಪಡೆದಿದ್ದಾರೆ. [ಫಲಿತಾಂಶ ಪಡೆಯಲು ಇಲ್ಲಿ ಕ್ಲಿಕ್ ಮಾಡಿ]
ಪರೀಕ್ಷಾ ಮೌಲ್ಯ ಮಾಪನ ಏ.1 ರಿಂದ ಏ.27ರ ತನಕ ನಡೆಸಲಾಯಿತು, 15,779 ಮೌಲ್ಯಮಾಪಕರು ವಿದ್ಯಾರ್ಥಿಗಳ ಭವಿಷ್ಯದ ಕನ್ನಡಿ ಹಿಡಿದಿದ್ದಾರೆ. ಜಿಲ್ಲಾವಾರು ಶೇಕಡಾವಾರು ಫಲಿತಾಂಶ ಇಳಿಕೆ ಕ್ರಮದಲ್ಲಿ ಕೊಡಲಾಗಿದೆ. ಇಲ್ಲಿ ಫ್ರೆಶರ್ಸ್ ಫಲಿತಾಂಶ ಮಾತ್ರ ಸೇರಿಸಲಾಗಿದೆ.
ಕಳೆದ ಬಾರಿ 2ನೇ ಸ್ಥಾನದಲ್ಲಿದ್ದ ದಕ್ಷಿಣ ಕನ್ನಡ ಜಿಲ್ಲೆ ಈ ಬಾರಿ ಅಗ್ರಸ್ಥಾನಕ್ಕೇರಿದರೆ, ಉಡುಪಿ ಜಿಲ್ಲೆ ಎರಡನೆ ಸ್ಥಾನಕ್ಕೆ ಕುಸಿದಿದೆ. ಕೊಡಗು ಒಂದು ಸ್ಥಾನ ಮೇಲಕ್ಕೇರಿ ಮೂರನೇ ಸ್ಥಾನ ಗಿಟ್ಟಿಸಿಕೊಂಡಿದೆ. ಉತ್ತರ ಕನ್ನಡ ಒಂದು ಸ್ಥಾನ ಕೆಳಗಿಳಿದು ನಾಲ್ಕನೇ ಸ್ಥಾನ ಪಡೆದಿದೆ. ಚಿಕ್ಕಮಗಳೂರು ಕಳೆದ ಬಾರಿಯಂತೆ ಈ ಬಾರಿಯೂ ಐದನೇ ಸ್ಥಾನದಲ್ಲೇ ಉಳಿದಿದೆ. ಪೂರ್ಣ ವಿವರ ಮುಂದಿನ ಕೋಷ್ಟಕದಲ್ಲಿದೆ ನೋಡಿ...

| ಶೈಕ್ಷಣಿಕ ಜಿಲ್ಲೆ | ಮಾರ್ಚ್ 2014 ಫಲಿತಾಂಶ | ಮಾರ್ಚ್ 2013 ಫಲಿತಾಂಶ | |||
| ಶೇಕಡಾ | ಸ್ಥಾನ | ಶೇಕಡಾ | ಸ್ಥಾನ | ||
| ದಕ್ಷಿಣ ಕನ್ನಡ | 86.04 | 1 | 91.76 | 2 | |
| ಉಡುಪಿ | 85.57 | 2 | 92.72 | 1 | |
| ಕೊಡಗು | 75.87 | 3 | 80.83 | 4 | |
| ಉತ್ತರ ಕನ್ನಡ | 72.36 | 4 | 82.97 | 3 | |
| ಚಿಕ್ಕಮಗಳೂರು | 69.29 | 5 | 78.02 | 5 | |
| ಶಿವಮೊಗ್ಗ | 68.86 | 6 | 77.07 | 7 | |
| ಬೆಂಗಳೂರು ಉತ್ತರ | 67.16 | 7 | 74.63 | 10 | |
| ಹಾವೇರಿ | 65.29 | 8 | 76.11 | 8 | |
| ಬೆಂಗಳೂರು ಗ್ರಾಮಾಂತರ | 64.74 | 9 | 73.11 | 11 | |
| ಬೆಂಗಳೂರು ದಕ್ಷಿಣ | 64.10 | 10 | 74.84 | 9 | |
| ಚಾಮರಾಜನಗರ | 62.81 | 11 | 77.56 | 6 | |
| ಬಾಗಲಕೋಟೆ | 59.51 | 12 | 66.76 | 15 | |
| ಧಾರವಾಡ | 59.37 | 13 | 66.26 | 16 | |
| ಬೆಳಗಾವಿ | 58.78 | 14 | 63.91 | 20 | |
| ಮೈಸೂರು | 58.76 | 15 | 70.70 | 12 | |
| ಹಾಸನ | 58.66 | 16 | 69.18 | 13 | |
| ತುಮಕೂರು | 58.00 | 17 | 67.38 | 14 | |
| ದಾವಣಗೆರೆ | 57.90 | 18 | 64.74 | 19 | |
| ಕೋಲಾರ | 56.03 | 19 | 62.71 | 22 | |
| ಚಿಕ್ಕಬಳ್ಳಾಪುರ | 55.14 | 20 | 65.75 | 18 | |
| ಯಾದಗಿರಿ | 53.60 | 21 | 46.02 | 31 | |
| ರಾಮನಗರ | 53.36 | 22 | 63.94 | 17 | |
| ಮಂಡ್ಯ | 52.46 | 23 | 62.56 | 23 | |
| ಗದಗ | 52.12 | 24 | 59.51 | 25 | |
| ಬಳ್ಳಾರಿ | 50.99 | 25 | 63.56 | 21 | |
| ಬಿಜಾಪುರ | 50.34 | 26 | 51.54 | 30 | |
| ಕೊಪ್ಪಳ | 49.46 | 27 | 57.39 | 26 | |
| ಚಿತ್ರದುರ್ಗ | 48.04 | 28 | 61.56 | 24 | |
| ಗುಲ್ಬರ್ಗಾ | 46.71 | 29 | 54.79 | 29 | |
| ರಾಯಚೂರು | 46.11 | 30 | 50.0 | 28 | |
| ಬೀದರ್ | 44.95 | 31 | 55.94 | 27 | |












Click it and Unblock the Notifications