Property Updates: ಸರ್ಕಾರದ ಪ್ರಕಾರ ಈ ಆಸ್ತಿಗಳು ಅನಧಿಕೃತ!

Property Updates: ಕರ್ನಾಟಕದಲ್ಲಿ ಆಸ್ತಿಗಳಿಗೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್‌ ಸರ್ಕಾರವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಇನ್ನು ಇದೀಗ ರಾಜ್ಯದಲ್ಲಿ 40ರಿಂದ 50 ಲಕ್ಷ ಆಸ್ತಿಗಳಿಗೆ ಬಿ - ಖಾತಾ ನೀಡುವುದಕ್ಕೆ ರಾಜ್ಯ ಸರ್ಕಾರವು ನಿರ್ಧಾರಿಸಿದೆ. ಈ ರೀತಿ ಇರುವಾಗಲೇ ಯಾವುದೆಲ್ಲ ಅಕ್ರಮ ಆಸ್ತಿ ಅಥವಾ ಅನಧಿಕೃತ ಆಸ್ತಿಗಳು ಎಂದು ರಾಜ್ಯ ಸರ್ಕಾರವು ಗುರುತಿಸಿದೆ. ಈ ಸಂಬಂಧ ಪ್ರಕಟಣೆಯನ್ನು ಸಹ ಹೊರಡಿಸಿದೆ. ಈ ರೀತಿ ಸರ್ಕಾರ ಯಾವೆಲ್ಲ ಆಸ್ತಿಗಳನ್ನು ಅನಧಿಕೃತ ಎಂದು ನಿಗದಿ ಮಾಡಿದೆ ಎನ್ನುವ ವಿವರ ಇಲ್ಲಿದೆ. ಬಿ - ಖಾತಾ ಆಸ್ತಿಗಳನ್ನು ರಾಜ್ಯ ಸರ್ಕಾರವು ವೇಗವಾಗಿ ನೀಡುತ್ತಿದೆ. ಮುಂದಿನ ಮೂರು ತಿಂಗಳ ಅವಧಿಯಲ್ಲಿ ಬಿ ಖಾತಾ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಅನಧಿಕೃತ ಆಸ್ತಿಗಳ ಪಟ್ಟಿ ಮಾಡಲಾಗಿದೆ.

ಕರ್ನಾಟಕದಲ್ಲಿ ಆಸ್ತಿಗಳಿಂದ ಆಸ್ತಿ ತೆರಿಗೆ ಸಂಗ್ರಹ ಮಾಡುವುದಕ್ಕೆ ರಾಜ್ಯ ಸರ್ಕಾರವು ಹಲವು ಸರ್ಕಸ್‌ಗಳನ್ನು ಮಾಡಿದೆ. ಇ - ಖಾತಾ ನೀಡುವುದನ್ನು ಪ್ರಾರಂಭ ಮಾಡಿದ ಮೇಲೆ ಬಿ - ಖಾತಾದಲ್ಲಿ ಗೊಂದಲ ಸೃಷ್ಟಿಯಾಗಿತ್ತು. ಇದೀಗ ಎಲ್ಲಾ ಅನಧಿಕೃತ ಹಾಗೂ ರೆವಿನ್ಯೂ ಆಸ್ತಿಗಳಿಗೆ ಬಿ - ಖಾತಾ ನೀಡುವುದಕ್ಕೆ ಮುಂದಾಗಿದೆ. ಈ ಹೊಸ ನಿರ್ಧಾರದಿಂದ ರಾಜ್ಯ ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ಆದಾಯ ಬರುವ ನಿರೀಕ್ಷೆ ಇದೆ. ರಾಜ್ಯದ ಕಂದಾಯ ಇಲಾಖೆಗೆ ಬಂಪರ್ ಬರುವ ನಿರೀಕ್ಷೆ ಇದೆ.

Property Updates According to Government these Properties are Unauthorized

ರಾಜ್ಯ ಸರ್ಕಾರವು ಆಸ್ತಿಗಳ ಮೇಲೆ ಕಣ್ಣಿಟ್ಟಿದೆ. ಹಲವು ಅನಧಿಕೃತ ಆಸ್ತಿಗಳನ್ನು ಬಿ -ಖಾತಾ ವ್ಯಾಪ್ತಿಗೆ ತಂದು ಆ ಆಸ್ತಿಗಳಿಗೆ ದುಪ್ಪಟ್ಟು ತೆರಿಗೆಯನ್ನು ವಿಧಿಸುವುದಕ್ಕೆ ನಿರ್ಧರಿಸಲಾಗಿದೆ. ಒಮ್ಮೆ ಈ ಆಸ್ತಿಗಳು ಆಸ್ತಿ ತೆರಿಗೆ ವ್ಯಾಪ್ತಿಗೆ ಬಂದರೆ ನಿರಂತರವಾಗಿ ಆಸ್ತಿ ತೆರಿಗೆಯನ್ನು ಪಾವತಿ ಮಾಡಬೇಕಾಗುತ್ತದೆ. ಅಲ್ಲದೆ ಸರ್ಕಾರದಿಂದ ಸಿಗುವ ಕೆಲವು ನಿರ್ದಿಷ್ಟ ಸೌಲಭ್ಯಗಳನ್ನು ನೀಡುವುದಾಗಿ ರಾಜ್ಯ ಕಾಂಗ್ರೆಸ್‌ ಸರ್ಕಾರವು ಮಾಹಿತಿ ನೀಡಿದೆ. ಮುಂದಿನ ಮೂರು ತಿಂಗಳ ಅವಧಿಯಲ್ಲಿ ಎಲ್ಲಾ ಆಸ್ತಿಗಳಿಗೂ ಬಿ -ಖಾತಾ ಸಿಗಲಿದೆ. ಅನಧಿಕೃತ ಆಸ್ತಿಗಳಿಗೆ ಬಿ ರಿಜಿಸ್ಟರ್‌ನಲ್ಲಿ ದಾಖಲಿಸಿ ಇ-ಖಾತೆ ಕೊಡುವ ನಿರ್ಧಾರವನ್ನು ರಾಜ್ಯ ಕಾಂಗ್ರೆಸ್‌ ಸರ್ಕಾರ ಮಾಡಿದೆ.

ಕರ್ನಾಟಕ ಪೌರಸಭೆಗಳ ಅಧಿನಿಯಮಗಳ ಅಡಿಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ನೋಂದಣಿಯಾದ ಅನಧಿಕೃತ ಆಸ್ತಿಗಳಿಗೆ ಇ-ಖಾತೆ ಕೊಡುವುದಕ್ಕೆ

ಅವಕಾಶ ಕೊಡಲಾಗಿದೆ. ಇದಾದ ನಂತರ ನೋಂದಣಿ ಮಾಡಿಕೊಂಡವರಿಗೆ ಅವಕಾಶ ಇಲ್ಲ.

ಸರ್ಕಾರದಿಂದ ನಿಗದಿ ಮಾಡಿರುವ ಅನಧಿಕೃತ ಆಸ್ತಿಗಳು ಯಾವುವು ?

ರಾಜ್ಯ ಸರ್ಕಾರವು ಬಿ - ಖಾತಾ ಗುಡ್‌ನ್ಯೂಸ್‌ನ ಜೊತೆಗೆ ಯಾವುದೆಲ್ಲ ಅನಧಿಕೃತ ಆಸ್ತಿಗಳು ಎನ್ನುವ ವಿವರಣೆಯನ್ನು ಸಹ ಕೊಟ್ಟಿದೆ.

* ಭೂ ಪರಿವರ್ತನೆ ಮಾಡಿ ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆದುಕೊಳ್ಳದ ಬಡಾವಣೆಯಲ್ಲಿರುವ ನಿವೇಶನ ಹಾಗೂ ಕಟ್ಟಡಗಳು.

Property Updates According to Government these Properties are Unauthorized

* ಭೂ ಪರಿವರ್ತನೆ ಮಾಡದೆ ಉಪವಿಭಜನೆ ಮಾಡಿ ನಿವೇಶನಗಳಾಗಿ ಮಾರಾಟ ಮಾಡಲಾಗಿರುವ ನಿವೇಶನಗಳು ಹಾಗೂ ಕಟ್ಟಡಗಳು.

* ಬಿ ರಿಜಿಸ್ಟರ್‌ನಲ್ಲಿ ದಾಖಲಿಸುವ ಆಸ್ತಿಗಳಿಗೆ ಮೊದಲು ಮಾತ್ರ ಆಸ್ತಿ ತೆರಿಗೆಯ ಎರಡು ಪಟ್ಟು ತೆರಿಗೆ ಮುಂದಿನ ವರ್ಷಗಳಲ್ಲಿ ಆಸ್ತಿ / ಸ್ವತ್ತು ತೆರಿಗೆಯನ್ನು ಮಾತ್ರ ವಿಧಿಸಲಾಗುತ್ತದೆ.

* 2024 ಸೆಪ್ಟೆಂಬರ್‌ 10ರ ಪೂರ್ವದಲ್ಲಿ ಸೃಷ್ಟಿಯಾದ ಅನಧಿಕೃತ ಆಸ್ತಿಗಳಲ್ಲಿ ಬಿ ರಿಜಿಸ್ಟರ್ ದಾಖಲಿಸುವುದಕ್ಕೆ ಮಾತ್ರ ಅವಕಾಶ ಇರಲಿದೆ.

* ಬಿ ರಿಜಿಸ್ಟರ್‌ನಲ್ಲಿ ದಾಖಲಿಸಿರುವ ಆಸ್ತಿಗಳಿಗೆ ಇ-ಆಸ್ತಿ ತಂತ್ರಾಂಶದಲ್ಲಿ ನಮೂನೆ 2ಎ/3ಎ ಸೃಜನೆ ಮಾಡಿ ನೀಡಲಾಗುತ್ತದೆ.

* ಆಸ್ತಿ ತೆರಿಗೆ ವಿಧಿಸುವ ಉದ್ದೇಶಕ್ಕಾಗಿ ಪ್ರತ್ಯೇಕ ವ್ಯವಸ್ಥೆಯ ಮೂಲಕ ಅನಧಿಕೃತ ಆಸ್ತಿಗಳನ್ನು ದಾಖಲಿಸಿ ನಿರ್ವಹಣೆ ಮಾಡಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+