Property Sales: ಇ - ಹರಾಜು: ಜಾಗ & ಮನೆ ಖರೀದಿ ಮಾಡುವವರಿಗೆ ಸರ್ಕಾರದಿಂದ ಗುಡ್‌ನ್ಯೂಸ್!
Property Sales: ನೀವು ಮನೆ ಹಾಗೂ ನಿವೇಶನಗಳನ್ನು ಖರೀದಿ ಮಾಡಬೇಕು ಎಂದು ಆಸೆಪಡುತ್ತಿದ್ದೀರಾ. ಹಾಗಾದರೆ ನಿಮಗೆ ಇಲ್ಲೊಂದು ಗುಡ್‌ನ್ಯೂಸ್ ಇದೆ. ನೀವು ತುಮಕೂರು ಹಾಗೂ ಬೆಂಗಳೂರಿನಲ್ಲಿದ್ದರೆ ಇದು ಖಂಡಿತವಾಗಿಯೂ ಸಿಹಿಸುದ್ದಿ. ಮನೆ ಹಾಗೂ ವಸತಿ ನಿವೇಶನ ಅಥವಾ ಜಾಗ ಖರೀದಿ ಮಾಡಬೇಕು ಎನ್ನುವವರಿಗೆ "ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ"ಯು (ಕೆಐಎಡಿಬಿ /KIADB) ಭರ್ಜರಿ ಗುಡ್‌ನ್ಯೂಸ್ ನೀಡಿದೆ. ಹೌದು ಕೆಐಎಡಿಬಿಯಿಂದ ಮನೆಗಳ ಮತ್ತು ನಿವೇಶನಗಳ ಮಾರಟ ಹಾಗೂ ಇ - ಹರಾಜಿನ ದಿನಾಂಕಗಳ ವಿಸ್ತರಣೆಗೆ ಸಂಬಂಧಿಸಿದಂತೆ ಮಹತ್ವದ ಅಪ್ಡೇಟ್ ಕೊಡಲಾಗಿದೆ. ತುಮಕೂರಿನ ಭಾಗದಲ್ಲಿ ನಿಮಗೆ ಕಡಿಮೆ ಬೆಲೆಗೆ ನಿವೇಶನ ಹಾಗೂ ವಸತಿ ಕಟ್ಟಡಗಳು ಸಿಗಲಿವೆ. ಇದರ ಸಂಪೂರ್ಣ ವಿವರ ಇಲ್ಲಿದೆ.
ನಮ್ದೂ ಅಂತ ಒಂದು ಮನೆ ಅಥವಾ ಜಾಗ ಇರಬೇಕು ಎನ್ನುವುದು ಎಲ್ಲರ ಕನಸು. ಅದರಲ್ಲೂ ಮಧ್ಯಮ ವರ್ಗದ ಜನ ತಮ್ಮ ಜೀವಮಾನದಲ್ಲಿ ದುಡಿದ ದುಡ್ಡನ್ನೆಲ್ಲವೂ ಮನೆ ಖರೀದಿ ಮಾಡುವುದಕ್ಕಾಗಿಯೇ ವೆಚ್ಚ ಮಾಡುತ್ತಾರೆ. ಮನೆ ಖರೀದಿ ಮಾಡಬೇಕು ಇಲ್ಲವೇ ಜಾಗ ತೆಗೆದುಕೊಳ್ಳಬೇಕು ಎನ್ನುವವರ ಆಸೆಯನ್ನು ಪೂರೈಸುವುದಕ್ಕೆ "ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ"ಯು ಮುಂದಾಗಿದೆ.

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕರ್ನಾಟಕ ಸರ್ಕಾರದ ಒಂದು ಅಧೀನ ಸಂಸ್ಥೆ)ಯು ವಸಂತನರಸಾಪುರ ಕೈಗಾರಿಕಾ ಪ್ರದೇಶ, 3ನೇ ಹಂತ, ತುಮಕೂರು ಜಿಲ್ಲೆಯಲ್ಲಿ ವಸತಿ ಬಡಾವಣೆ ಪ್ರದೇಶ / ಖರೀದಿಗೆ ಸಿದ್ಧವಾಗಿರುವ ವ್ಯಾಜ್ಯ ಮುಕ್ತ ಮನೆಗಳು ಮತ್ತು ವಸತಿ ನಿವೇಶನಗಳ ಮಾರಾಟಕ್ಕೆ ಮುಂದಾಗಿದೆ.
* ಮುಂಬರುವ ತುಮಕೂರು ಕೈಗಾರಿಕಾ ಟೌನ್‌ಶಿಪ್‌ಗೆ ಸಮೀಪದಲ್ಲಿ ಎಲ್ಲಾ ಮೂಲ ಸೌಕರ್ಯಗಳೊಂದಿಗೆ ಉತ್ತಮವಾಗಿ ಅಭಿವೃದ್ಧಿ ಹೊಂದಿದ ವಸತಿ ಬಡಾವಣೆ.

* ಉತ್ತಮ ಸಂಪರ್ಕ ಮತ್ತು ಪ್ರವೇಶವನ್ನು ಹೊಂದಿದ್ದು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಗೆ ಹತ್ತಿರದಲ್ಲಿದೆ.
* 24/7 ವಿದ್ಯುತ್ ಮತ್ತು ನೀರಿನ ಲಭ್ಯತೆಯೊಂದಿಗೆ ವ್ಯಾಜ್ಯ ಮುಕ್ತ ಮತ್ತು ಸ್ಪಷ್ಟ ಹಕ್ಕುಪತ್ರಗಳು ಸಿಗಲಿವೆ ಎಂದು ಕೆಐಎಡಿಬಿ ಹೇಳಿದೆ.
ಹೌದು ಈ ಭಾಗದಲ್ಲಿ ಮನೆ ಮತ್ತು ಜಾಗವನ್ನು ಖರೀದಿ ಮಾಡುವವರಿಗೆ ಇದೀಗ ಸಿಹಿಸುದ್ದಿ ನೀಡಲಾಗಿದೆ. ಅಲ್ಲದೇ ಇದೀಗ ಇ - ಹರಾಜು ಹಾಗೂ ಇ - ಹರಾಜಿನ ದಿನಾಂಕವನ್ನು ಸಹ ವಿಸ್ತರಣೆ ಮಾಡಲಾಗಿದೆ. ವಸತಿ ಬಡಾವಣೆ ಪ್ರದೇಶದಲ್ಲಿ ವಸತಿ ಗೃಹಗಳು ಹಾಗೂ ವಸತಿ ನಿವೇಶನಗಳು ಯಾವ ಮಾದರಿಯಲ್ಲಿ ಇವೆ ಎನ್ನುವ ವಿವರ ಇಲ್ಲಿದೆ.
ಮನೆಗಳು: ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು ಮೂರು ಮಾದರಿ ಮನೆಗಳನ್ನು ಹರಾಜಿಗೆ ಇರಿಸಿದೆ. ಅದರಲ್ಲಿ HIG, MIG ಮತ್ತು LIG ಸೇರಿವೆ.
ವಸತಿ ನಿವೇಶನಗಳು: ಇನ್ನು ವಸತಿ ನಿವೇಶನಗಳ ಮಾದರಿಯಲ್ಲಿ EWS, LIG, MIG, HIG ಹಾಗೂ Odd ಮಾದರಿಗಳು ಸೇರಿವೆ.
* ಹೊಸದಾಗಿ ನೊಂದಾಯಿಸಲು ಕೊನೆಯ ದಿನಾಂಕವನ್ನು 24ನೇ ಏಪ್ರಿಲ್ 2025 ರವರೆಗೆ ವಿಸ್ತರಿಸಲಾಗಿದೆ.
* ಹೊಸದಾಗಿ ನೊಂದಾಯಿಸುವ ಬಿಡ್ಡುದಾರರಿಗೆ ಲೈವ್ ಹರಾಜು ದಿನಾಂಕ : 26ನೇ & 27ನೇ ಏಪ್ರಿಲ್ 2025ರಂದು ಇರಲಿದೆ.
ಹೆಚ್ಚಿನ ವಿವರಗಳಿಗಾಗಿ: ಕೆಐಎಡಿಟಿ ಸಂಪರ್ಕಿಸಬಹುದಾಗಿದೆ. ಕೆಐಎಡಿಬಿ, ವಲಯ ಕಚೇರಿ, ತುಮಕೂರು, ಮಾರುತಿ ಗ್ರೂಪ್ಸ್ ಕಟ್ಟಡ, 2ನೇ ಮಹಡಿ, ಎಸ್‌ಐಟಿ ಕಾಲೇಜು ಹತ್ತಿರ, ಮುಖ್ಯ ಗೇಟ್, ಬಿ.ಹೆಚ್. ರಸ್ತೆ, ತುಮಕೂರು - 572103, ಇ - ಮೇಲ್: [email protected] / ವೆಬ್‌ಸೈಟ್ www.kiadb.in. 9663311797/8105575100 / ಇ-ಹರಾಜಿನಲ್ಲಿ ಭಾಗವಹಿಸಲು ಇ-ಪ್ರೊಕ್ಯೂರ್‌ಮೆಂಟ್ ಪೋರ್ಟಲ್: https://kppp.karnataka.gov.in ಗೆ ಭೇಟಿ ನೀಡಬಹುದಾಗಿದೆ.












Click it and Unblock the Notifications