ಜೀ ನ್ಯೂಸ್‌ ಸಮೀಕ್ಷೆ ಫಲಿತಾಂಶ ಪ್ರಕಟ: ಕಾಂಗ್ರೆಸ್-ಬಿಜೆಪಿಗೆ ಅಘಾತ; ಈ ಬಾರಿಯೂ ದಳಪತಿಗಳೇ ಕಿಂಗ್‌ ಮೇಕರ್‌?

ಬೆಂಗಳೂರು, ಮಾರ್ಚ್ 28: ವಿಧಾನಸಭಾ ಚುನಾವಣೆಗೆ ಮಿಷನ್ 150 ಟರ್ಗೆಟ್‌ ಬಿಜೆಪಿ ಇಟ್ಟುಕೊಂಡಿದ್ದು, ಇತ್ತ ಕಾಂಗ್ರೆಸ್‌ ಹಲವು ಕಾಂಗ್ರೆಸ್‌ ಸಹ ಹಲವು ತಂತ್ರಗಳ ಮೂಲಕ ಈ ಬಾರೀ ರಾಜ್ಯದಲ್ಲಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲು ಹಲವು ತಂತ್ರಗಾರಿಕೆಯನ್ನ ನಡೆಸಿದೆ.

ಇತ್ತ ಜೆಡಿಎಸ್ ಹಲವು ಯಾತ್ರೆಗಳ ಮೂಲಕ ರಾಜ್ಯಾದ್ಯಂತ ಪ್ರಚಾರ ಕಾರ್ಯವನ್ನು ಆರಂಭಿಸಿದ್ದು, ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಸೇರಿದಂತೆ ಕಾಂಗ್ರೆಸ್‌ ಹಾಗೂ ಬಿಜೆಪಿ ನಾಯಕರು ವಿಶ್ವಾಸವನ್ನ ವ್ಯಕ್ತಪಡಿಸಿದ್ದಾರೆ.

Pre-Poll Survey Result Of Zee News-Matrize Karnataka Assembly Elections 2023

ಈಗಾಗಲೇ ಚುನಾವಣಾ ಆಯೋಗ ಮೇ 10 ರಂದು ಚುನಾವನಾ ದಿನಾಂಕವನ್ನ ಪ್ರಕಟ ಮಾಡಿದ್ದು, ಈ ಬಾರಿಯ 2023ರ ವಿಧಾನಸಭಾ ಚುನಾವಣೆ ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿದೆ. ಈಗಾಗಲೇ ಹಲವು ಸಮೀಕ್ಷೆಗಳನ್ನ ನಡೆಸಿರುವ ರಾಜಕೀಯ ಪಕ್ಷಗಳಿಗೆ ಸರ್ವೆಯಿಂ ಆಘಾತವಾಗಿದ್ದು, ಇನ್ನೂ ಚುನಾವಣಾ ತಯಾರಿಯನ್ನು ಚುರುಕುಗೊಳಿಸಿದೆ.

ಹೌದು, ಈಗಾಗಲೇ ಗೆಲ್ಲುವ ತಂತ್ರಗಾರಿಕೆಯ ಜೊತೆಗೆ ಹಲವು ಸಮೀಕ್ಷೆಗಳನ್ನ ನಡೆಸಿರುವ ಪಕ್ಷಗಳು ಯಾವ ಕ್ಷೇತ್ರದಲ್ಲಿ ಸೋಲು ಉಂಟಾಗಿದಿಯೋ ಆ ಕ್ಷೇತ್ರದ ಮೇಲೆ ಹೆಚ್ಚಿನ ಒತ್ತುಕೊಡುವ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು ಮುಂದಾಗಿದ್ದು, ಇದೀಗ ಜೀ ನ್ಯೂಸ್‌ ಸಮೀಕ್ಷೆ ಪ್ರಕಟಗೊಂಡಿದೆ. ಕಾಂಗ್ರೆಸ್‌ ಹಾಗೂ ಬಿಜೆಪಿಗೆ ಅಘಾತ ಉಂಟು ಮಾಡಿದೆ.

Pre-Poll Survey Result Of Zee News-Matrize Karnataka Assembly Elections 2023

ಹೌದು, ವಿಧಾನಸಭಾ ಚುನಾವಣೆಗೆ ಒಂದು ತಿಂಗಳು ಮಾತ್ರ ಬಾಕಿ ಉಳಿದಿದ್ದು, ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಎಬಿಪಿ-ಸಿ ವೋಟರ್ ಸಮೀಕ್ಷೆ ಭವಿಷ್ಯ ನುಡಿದರೆ, ಮತ್ತೊಂದೆಡೆ ರಾಜ್ಯದಲ್ಲಿ ಈ ಬಾರಿ ಅತಂತ್ರ ಸ್ಥಿತಿ ನಿರ್ಮಾಣವಾಗಲಿದೆ ಎಂದು ಜೀ ನ್ಯೂಸ್ ಸರ್ವೇ ಹೇಳುತ್ತಿದೆ.

2023ನೇ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಲಿದೆ ಎಂದು ಜೀ ನ್ಯೂಸ್ ಸಮೀಕ್ಷೆ ಹೇಳುತ್ತಿದೆ. ಜೀ ನ್ಯೂಸ್ ಚುನಾವಣಾ ಪೂರ್ವ ಸಮೀಕ್ಷೆ ಪ್ರಕಾರ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ 96 ರಿಂದ 106, ಕಾಂಗ್ರೆಸ್ 88-98, ಹಾಗೂ ಪ್ರಾದೇಶಿಕ ಪಕ್ಷ ಜೆಡಿಎಸ್ 23-33, ಇತರೆ 02-07 ಸೀಟು ಗೆಲ್ಲೋ ಸಾಧ್ಯತೆ ಇದೆ ಎಂದು ಸರ್ವೆಯಿಂದ ತಿಳಿದು ಬಂದಿದೆ.

Pre-Poll Survey Result Of Zee News-Matrize Karnataka Assembly Elections 2023

2018 ರ ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾದಂತೆ, ಈ ಬಾರಿಯೂ ಅತಂತ್ರ ಸ್ಥಿತಿ ಉಂಟಾದಲ್ಲಿ ಮತ್ತೆ ಮೈತ್ರಿ ಸರ್ಕಾರ ರಚನೆ ಆಗೋ ಸಾಧ್ಯತೆ ಇದೆ. ಬಿಜೆಪಿ, ಜೆಡಿಎಸ್ ಈ ಬಾರಿ ಮೈತ್ರಿ ಮಾಡಿಕೊಂಡು ಸರ್ಕಾರ ಮಾಡುವ ಲಕ್ಷಣಗಳು ಗೋಚರಿಸುತ್ತಿವೆ. ಹೀಗಾದಲ್ಲಿ ಮತ್ತೆ ಮುಖ್ಯಮಂತ್ರಿಯಾಗಿ ಎಚ್.ಡಿ ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ ಎನ್ನಲಾಗುತ್ತಿದೆ.

ಬಹುನಿರೀಕ್ಷಿತ ಕರ್ನಾಟಕ ವಿಧಾನಸಭಾ ಚುನಾವಣೆಗೆ ಈಗಾಗಲೇ ಕೇಂದ್ರ ಚುನಾವಣಾ ಆಯೋಗ ದಿನಾಂಕ ನಿಗದಿ ಮಾಡಿದೆ. ಮೇ 10ನೇ ತಾರೀಕಿನಂದು ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಇದಾದ 2 ದಿನಗಳ ಬಳಿಕ ಅಂದರೆ ಮೇ 13ನೇ ತಾರೀಕು ಚುನಾವಣಾ ಫಲಿತಾಂಶ ಹೊರಬೀಳಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+