Prashant Kini ಭವಿಷ್ಯ: ಕರ್ನಾಟಕದಲ್ಲಿ 2028ಕ್ಕೆ ಬಿಜೆಪಿಯಿಂದ ಧರ್ಮಗುರು ಸಿಎಂ, ಖ್ಯಾತ ಜ್ಯೋತಿಷಿ ಭವಿಷ್ಯ
Prashant Kini: ಕರ್ನಾಟಕದ ರಾಜಕೀಯದಲ್ಲಿ ಮಹತ್ವದ ಬದಲಾವಣೆಗಳು ಆಗಲಿವೆ ಎಂದು ಖ್ಯಾತ ಜ್ಯೋತಿಷಿ ಪ್ರಶಾಂತ್ ಕಿಣಿ ಅವರು ಭವಿಷ್ಯ ನುಡಿದಿದ್ದಾರೆ. ಪ್ರಶಾಂತ್ ಕಿಣಿ ಅವರು ಈ ಹಿಂದೆ ಹೇಳಿರುವ ಹಲವು ಭವಿಷ್ಯಗಳು ನಿಜವಾಗಿರುವ ಹಿನ್ನೆಲೆಯಲ್ಲಿ ಇದೀಗ ಕರ್ನಾಟಕದ ರಾಜಕೀಯ ಭವಿಷ್ಯವು ಮಹತ್ವ ಪಡೆದುಕೊಂಡಿದೆ. ಕರ್ನಾಟಕದಲ್ಲಿ ಮುಂದಿನ ದಿನಗಳಲ್ಲಿ ಧರ್ಮಗುರುವೊಬ್ಬರು ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.
ಪ್ರಶಾಂತ್ ಕಿಣಿ ಅವರು ಕರ್ನಾಟಕದ ರಾಜಕೀಯ ಭವಿಷ್ಯದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಗಂಭೀರವಾದ ಚರ್ಚೆ ಶುರುವಾಗಿದೆ. ಒಬ್ಬ ಧಾರ್ಮಿಕ ಮುಖಂಡರು (ಧರ್ಮ ಗುರು) ಕರ್ನಾಟಕ ಬಿಜೆಪಿಗೆ ಸೇರಲಿದ್ದಾರೆ. ಅವರು 2028 ರಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ. ಈ ಭವಿಷ್ಯವು ಸೋಷಿಯಲ್ ಮೀಡಿಯಾದಲ್ಲಿ ಗಂಭೀರ ಹಾಗೂ ಹಾಸ್ಯ ಪೂರ್ಣ ಚರ್ಚೆಗೆ ವೇದಿಕೆಯಾಗಿದೆ.

ಯಾರವರು? ಯಾರಿರಬಹುದು?
ಇನ್ನು ಸೋಷಿಯಲ್ ಮೀಡಿಯಾದಲ್ಲಿ ಕರ್ನಾಟಕದಲ್ಲಿ ಯಾವ ಧರ್ಮಗುರು ಬಿಜೆಪಿಗೆ ಸೇರಿ ಮುಖ್ಯಮಂತ್ರಿ ಆಗಲಿದ್ದಾರೆ ಎನ್ನುವ ಚರ್ಚೆ ಜೋರಾಗಿದೆ. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿ ಆಗಿದ್ದಾರೆ. ಉತ್ತರ ಪ್ರದೇಶದ ಮಾದರಿಯಲ್ಲೇ ಕರ್ನಾಟಕದಲ್ಲೂ ಆಡಳಿತ ಬೇಕು ಎಂದು ಕೆಲವರು ಆಗ್ರಹಿಸುತ್ತಿರುವುದು ಇದೆ. ಆದರೆ, ಹಿಂದೂ ಧರ್ಮಗುರುಗಳು ಯಾರೂ ನೇರವಾಗಿ ಕರ್ನಾಟಕದಲ್ಲಿ ರಾಜಕೀಯವಾಗಿ ಗುರುತಿಸಿಕೊಂಡಿಲ್ಲ.
ಕೆಲವರು ನಿರ್ದಿಷ್ಟವಾಗಿ ನಿರ್ದಿಷ್ಟ ಜಾತಿಯ ರಾಜಕಾರಣಿಗಳಿಗೆ ಬೆಂಬಲ ಸೂಚಿಸಿದ್ದಾರಾದರೂ ನೇರವಾಗಿ ಗುರುತಿಸಿಕೊಂಡಿಲ್ಲ. ಇದೀಗ 2028ರ ಅಂದರೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಯಾರು ಕರ್ನಾಟಕದ ಮುಖ್ಯಮಂತ್ರಿ ಆಗಲಿದ್ದಾರೆ. ಅದೂ ಸಹ ಧರ್ಮಗುರು ಆಗಿದ್ದವರು ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.
ಇದಕ್ಕೆ ಕನ್ನಡಿಗರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಉತ್ತರ ಭಾರತ ಮತ್ತು ದಕ್ಷಿಣ ಭಾರತ ರಾಜಕಾರಣ ಬೇರೆ ಬೇರೆ ಎಂದು ನೆಟ್ಟಿಗರು ಹೇಳಿದ್ದಾರೆ. ಅಭಿಷೇಕ್ ಸಜ್ಜನ್ ಎನ್ನುವವರು ಸುಮ್ಮನೆ ಕಥೆ ಕಟ್ಟುತ್ತಾರೆ. ಇವರು ಒಂದು ತಿಂಗಳ ಹಿಂದೆ ಇನ್ನ 25 ದಿನಗಳಲ್ಲಿ ಭಾರತ ಪಾಕ್ ಯುದ್ಧ ಶುರು ಅಂದಿದ್ರು...ಅಷ್ಟೇ ಎಂದು ವ್ಯಂಗ್ಯವಾಡಿದ್ದಾರೆ. ಪ್ರಕಾಶ್ ರಾಜಾರಾವ್ ಎನ್ನುವವರು, ಯಾವ ಧರ್ಮದವರು ಸಾರ್, ಭಯ ಆಗ್ತಿದೆ ಎಂದಿದ್ದಾರೆ.













Click it and Unblock the Notifications