ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮನಸ್ಸು ನೋಯಿಸಿ; ಘಾಸಿಗೊಳಿಸಬೇಡಿ ಎಂದ ಬಿ.ವೈ ವಿಜಯೇಂದ್ರ, ಕಾರಣವೇನು

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಬೆಂಬಲಕ್ಕೆ ಕರ್ನಾಟಕದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಸಪೋರ್ಟ್ ಮಾಡಿದ್ದಾರೆ.

ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್‌ ಬಿ.ವೈ ವಿಜಯೇಂದ್ರ ಅವರು, ಸಹೃದಯ ರೈತ ಬಂಧುಗಳೇ ರೈತರ ಹಿತ, ಆಶೋತ್ತರಗಳಿಗೆ ಸ್ಪಂದಿಸಿದ ಹೆಗ್ಗಳಿಕೆಯ ಇತಿಹಾಸ ನಮ್ಮ ಭಾರತೀಯ ಜನತಾ ಪಾರ್ಟಿಯ ಬೆನ್ನಿಗಿದೆ. ರೈತ ಹೋರಾಟದಿಂದಲೇ ಮೇಲೆದ್ದು ಬಂದು ಮುಖ್ಯಮಂತ್ರಿಯಾಗಿ ಕೃಷಿ ಬಜೆಟ್ ಮಂಡಿಸಿದ ಐತಿಹಾಸಿಕ ನಿರ್ಧಾರಕ್ಕೆ ಕಾರಣರಾದವರು ನಿಮ್ಮ ಯಡಿಯೂರಪ್ಪನವರು. ಬಿ.ಎಸ್ ಯಡಿಯೂರಪ್ಪನವರೊಂದಿಗೆ ಸದಾಕಾಲಕ್ಕೂ ಹೆಗಲು ಕೊಡುತ್ತಾ ಬಂದಿರುವ ಪ್ರಹ್ಲಾದ್ ಜೋಶಿಯವರ ಅನನ್ಯ ರೈತ ಕಾಳಜಿ, ಹಾಗೂ ಕೃಷಿ ಕ್ಷೇತ್ರದ ಮೇಲಿನ ಬದ್ಧತೆ ಪ್ರಶ್ನಾತೀತ.

Pralhad Joshis Feelings Should Not Be Hurt Says BY Vijayendra What s the Reason

ಕಬ್ಬಿನ ಬೆಂಬಲ ದರ (MSP) ಹೋರಾಟ ಮಾಡುತ್ತಿರುವ ರೈತ ಬಂಧುಗಳ ನಿವೇದನೆಗೆ ಸ್ಪಂದಿಸುವ ನಿಟ್ಟಿನಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು, ಅವರು ಹಾಗೂ ಕೇಂದ್ರ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್ ಅವರೊಂದಿಗೆ ನಿರಂತರ ಪ್ರಯತ್ನದಲ್ಲಿದ್ದಾರೆ. ಈ ಸಂಬಂಧ ರೈತ ನಿಯೋಗದೊಂದಿಗೆ ಸಮಗ್ರ ಚರ್ಚೆ ನಡೆಸಿದ್ದಾರೆ.

ರೈತ ಸಮುದಾಯದ ಬೇಡಿಕೆಗೆ ಪೂರಕ ನಿರ್ಧಾರ ಕೈಗೊಳ್ಳುವುದಾಗಿ ಈಗಾಗಲೇ ಅಭಯದ ಮಾತನಾಡಿದ್ದಾರೆ. ಪ್ರಹ್ಲಾದ್ ಜೋಶಿಯವರ ಪ್ರಾಮಾಣಿಕ ಸ್ಪಂದನಾಶೀಲ ಕಾರ್ಯ ವೈಖರಿಯ ಕುರಿತು ನಮ್ಮ ರೈತ ಬಂಧುಗಳು ಪರಿಪೂರ್ಣ ನಂಬಿಕೆಯನ್ನಿರಿಸಿಕೊಳ್ಳಬೇಕೆಂದು ವಿನಮ್ರವಾಗಿ ವಿನಂತಿಸುತ್ತೇನೆ.

ಕೆಲವು ರೈತರು ತಮ್ಮ ತಾಳ್ಮೆಯ ಎಲ್ಲೆ ಮೀರಿ ಉದ್ವೇಗದಲ್ಲಿ ಪ್ರಹ್ಲಾದ್ ಜೋಶಿ ಹಾಗೂ ಕುಟುಂಬ ಸದಸ್ಯರ ಕುರಿತು ವ್ಯಕ್ತಿಗತ ನಿಂದನೆ ಮಾಡುತ್ತಿರುವುದು ಸರ್ವಥಾ ಸರಿಯಲ್ಲ. ಇಂತಹ ವರ್ತನೆ ರೈತಸ್ನೇಹಿ ಸಚಿವರ ಮನಸ್ಸನ್ನು ನೋಯಿಸಿ ಘಾಸಿಗೊಳಿಸಬಾರದೆಂಬುದಷ್ಟೇ ನನ್ನ ಕಾಳಜಿಯಾಗಿದೆ. ಕರ್ನಾಟಕದಲ್ಲಿ ರೈತ ಹೋರಾಟಕ್ಕೆ ಘನತೆಯ ಇತಿಹಾಸವಿದೆ. ದೇಶಕ್ಕೆ ಮಾದರಿಯಾದ ರೈತಬಂಧುಗಳು ಎಂಬ ಹೆಮ್ಮೆಯಿದೆ.

ಹೋರಾಟದ ವಿಷಯದಲ್ಲಿ ಯಾರೊಂದಿಗೂ ರಾಜಿ ಮಾಡಿಕೊಳ್ಳದ ಸಂಘಟನೆ ಎಂಬ ಹಿನ್ನೆಲೆಯಿದೆ. ಸರ್ಕಾರಕ್ಕೆ ಬಿಸಿ ತಾಗಿಸುವ ನಿಟ್ಟಿನಲ್ಲಿ ಈವರೆಗಿನ ರೈತ ಹೋರಾಟಗಳು ವ್ಯಕ್ತಿಗತ ನಿಂದನೆಗೆ ಇಳಿದ ಉದಾಹರಣೆಗಳು ನಮ್ಮ ಮುಂದಿಲ್ಲ. ವ್ಯಕ್ತಿಗತ ನಿಂದನೆಗೆ ಚಳುವಳಿಯ ಉದ್ದೇಶವನ್ನು ಕೇಂದ್ರೀಕರಿಸಿಕೊಳ್ಳದೇ ಬೇಡಿಕೆಯ ಈಡೇರಿಕೆಗೆ ಹೋರಾಟ ಮುಂದುವರೆಯಲಿ.

ರೈತರ ಭಾವನೆಗಳೊಂದಿಗೆ, ಅವರ ಕಷ್ಟ ಸಂಕಷ್ಟಗಳೊಂದಿಗೆ ಹಾಗೂ ಕೃಷಿ ಕ್ಷೇತ್ರದ ಸರ್ವ ಅಭಿವೃದ್ಧಿಗೆ ಪ್ರಥಮಾದ್ಯತೆ ನೀಡುವ ಪ್ರಧಾನಿ ನರೇಂದ್ರ ಮೋದಿ ಅವರು ಸದಾ ಒಂದು ಹೆಜ್ಜೆ ಮುಂದಿಡುತ್ತಾರೆ ಎಂಬುದು ಈವರೆಗಿನ ಕೇಂದ್ರ ಸರ್ಕಾರದ ರೈತ ಕಲ್ಯಾಣದ ಕಾರ್ಯಕ್ರಮಗಳು ಸಾಕ್ಷಿಯಾಗಿ ನಮ್ಮ ಮುಂದಿದೆ.

ಈ ಕ್ಷಣಕ್ಕೂ ಪ್ರಹ್ಲಾದ್ ಜೋಶಿಯವರೂ ಸೇರಿದಂತೆ ಬಿಜೆಪಿಯ ನಾವೆಲ್ಲರೂ ರೈತ ಬಂಧುಗಳ ಬೇಡಿಕೆಯ ದನಿಗೆ ಹೆಗಲುಕೊಡುವವರಿದ್ದೇವೆ,ಈ ಬಗ್ಗೆ ಯಾವುದೇ ಸಂಶಯ ಬೇಡ. ಉದ್ವೇಗದ ಮಾತುಗಳು, ಘೋಷಣೆಗಳು ಚಳುವಳಿಗೆ ಪೂರಕವಾಗಿರಲಿ ನನ್ನ ಕೋರಿಕೆಯಾಗಿದೆ ಎಂದು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಬಿ.ವೈ ವಿಜಯೇಂದ್ರ ಅವರು ಪೋಸ್ಟ್‌ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+