ಕ್ಯಾಬಿನೆಟ್ ಆಫರ್, 2 ಗಂಟೆ 37ನಿಮಿಷ ಆಡಿಯೋದಲ್ಲಿ ಏನಿದೆ: ಹೊಸ ಬಾಂಬ್ ಸಿಡಿಸಿದ ದೇವರಾಜೇಗೌಡ
ಹಾಸನ, ಮೇ 07: ಹಾಸನ ಪ್ರಜ್ವಲ್ ರೇವಣ್ಣಗೆ ಸಂಬಂಧಿಸಿದ ಅಶ್ಲೀಲ ವಿಡಿಯೋ ಹರಿಬಿಟ್ಟ ರೂವಾರಿ ಸಿಎಂ ಮತ್ತು ಡಿಸಿಎಂ. ಪೆನ್ ಡ್ರೈವ್ ಕಥಾ ನಾಯಕ ಕಾಂಗ್ರೆಸ್ ಸರ್ಕಾರ. ನನಗೆ ಮೂರು ದಿನಗಳ ಹಿಂದೆ ಡಿಸಿಎಂ ಡಿ.ಕೆ ಶಿವಕುಮಾರ್ ಕರೆ ಮಾಡಿದ್ದರು. ಲೋಕಸಭೆ ಚುನಾವಣೆ ಮುಗಿದ ಮೇಲೆ ನನಗೆ ಕ್ಯಾಬಿನೇಟ್ ರೇಂಜ್ ಆಫರ್ ಕೊಟ್ಟಿದ್ದಾರೆ, ಅಲ್ಲದೇ 2 ಗಂಟೆ 37ನಿಮಿಷ ಆಡಿಯೋ ಇದೆ ಎಂದು ದೇವರಾಜೇಗೌಡ ಸ್ಪೋಟಕ ಆರೋಪ ಮಾಡಿದ್ದಾರೆ.
ಈ ಕುರಿತು ಸುದ್ದಿಗೋಷ್ಟಿಯಲ್ಲಿ ಬಿಜೆಪಿ ನಾಯಕ ದೇವರಾಜೇಗೌಡ ಅವರು ಮಾತನಾಡಿ, ಕಾರ್ತಿಕ್ ಬಿಡುಗಡೆ ಮಾಡಿರೋ ವೀಡಿಯೋದಲ್ಲಿ ಮಹಾನ್ ನಾಯಕನ ಹೆಸರು ಹೇಳಿದ್ದಾನೆ. ಮಹಾನ್ ನಾಯಕ ಎಲ್ಲಿ.?

ಪುಟ್ಟಿ ಅಲಿಯಾಸ್ ಪುಟ್ಟರಾಜು ಇದ್ದಾರೆ. ಈ ಪೆನ್ ಡ್ರೈವ್ ಎಲ್ಲಿದೆ. ನನಗೆ ಸದಾಶಿವ ನಗರಕ್ಕೆ ಬರುವಂತೆ ಸೂಚಿಸಿರೋ ಆಡಿಯೋವೂ ಇದೆ. ಈ ಪ್ರಕರಣವನ್ನ CBI ಗೆ ಕೊಡಬೇಕು. ನಮಗೆ ಎಸ್.ಐ.ಟಿ ಮೇಲೆ ನಂಬಿಕೆ ಇಲ್ಲ ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಪೊಲೀಸರ ಜೊತೆ ಗೌಪ್ಯ ಸಭೆ ನಡೆಸಿದ್ದಾರೆ. ಯಾರನ್ನು ಆರೋಪಿ ಮಾಡಬೇಕೆಂದು ಸೂಚಿಸಿದ್ದಾರೆ. ಹಾಸನ ಪ್ರಭಾವಿ ರಾಜಕಾರಣಿ ವಿರುದ್ದ ನನ್ನ ಹೋರಾಟ. ನನ್ನ ಹೋರಾಟವನ್ನ ವಾಮಮಾರ್ಗದಲ್ಲಿ ಬಳಸಿದ್ದಾರೆ ಎಂದರು. ಎಲ್.ಆರ್ ಶಿವರಾಮೇಗೌಡ ಸರ್ಕಾರವನ್ನ ಸಿಗಾಕಿಸಬೇಡ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಹೆಸರನ್ನ ಹೇಳಬೇಡ ಎಂದ ಶಿವರಾಮೇಗೌಡ ಆಡಿಯೋ ಬಿಡುಗಡೆ ಮಾಡಿದ ದೇವರಾಜೇಗೌಡ.
ಅವರೇ ನನ್ನ ಜೊತೆ ಮತನಾಡಿದ್ದು.ಪೆನ್ ಡ್ರೈವ್ ವಿಚಾರವಾಗಿ ಕೂಡ ಮಾತಾಡಿದ್ದಾರೆ. ಪೆನ್ ಡ್ರೈವ್ ಕೊಟ್ಟವರನ್ನ ಹಿಡಿಯಲಿಲ್ಲ, ಸರ್ಕಾರ ಹೇಗೆ ನಡೆಯುತ್ತಿದೆ ಅನ್ನೋದಕ್ಕೆ ಇದು ಸಾಕ್ಷಿ, ನಿನ್ನೆ ಸಂಜೆ ಇಂದ ಸಂಧಾನ ಆಯ್ತು. ಸಂಧಾನಕ್ಕೆ ನಾನು ಒಪ್ಪಲಿಲ್ಲ.ಆಗ ಪೊಲೀಸ್ ಅಧಿಕಾರಿಗಳ ಜೊತೆ ಸಿಎಂ, ಡಿಸಿಎಂ ಸಭೆ ಮಾಡಿದ್ರು. ಅವರಿಗೆ ರೇವಣ್ಣ ಗುರಿ ಅಲ್ಲ. ಜೆಡಿಎಸ್ ಬಿಜೆಪಿ ಜೊತೆ ಮೈತ್ರಿಯಾಗಿದೆ. ಮೋದಿ ಇವರ ಜೊತೆ ಕೈ ಜೋಡಿಸಿದ್ದಾರೆ.
ಮೋದಿಗೆ ಕೆಟ್ಟ ಹೆಸರು ತರಬೇಕು ಅನ್ನೋದು ಅವರ ಉದ್ದೇಶ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಮೋದಿಗೆ ಕಪ್ಪು ಮಸಿ ಬಳಿಯಬೇಕು. ನೀನು ನಮ್ಮ ಪಕ್ಷಕ್ಕೆ ಬಾ, ಎಲ್ಲಾ ರೀತಿ ಸಹಕಾರ ನೀಡೋದಾಗಿ ಹೇಳಿದ್ರು. ನನ್ನ ಮೇಲೆ ಮಾನನಷ್ಟ ಮೊಕದ್ದಮೆ ಹಾಕಬಹುದು. ನನ್ನ ವಿಳಾಸ ಗೊತ್ತಿಲ್ಲ ಅಂದ್ರೆ ಕೊಡ್ತೀನಿ.
ನಾನು ಕೋರ್ಟಲ್ಲಿ ಹೆದರಿಸ್ತೀನಿ. ನಾನು ಡಿಕೆ ಶಿವಕುಮಾರ್ ಗರಡಿಯಲ್ಲೇ ಬೆಳೆದವನು, ಅಧಿಕಾರಿಗಳು, ರಾಜಕಾರಣಿಗಳ ಫೋನ್ ಬರ್ತಿದೆ. ಬಇದನ್ನ ತನಿಖೆ ನಡೆಸಲಾಗದಿದ್ರೆ, CBI ತನಿಖೆ ಕೊಡಿ ಎಂದು ಒತ್ತಾಯಿಸಿದರು.
ಒಂದೊಂದು ಸಮಯದಲ್ಲಿ, ಒಂದೊಂದು ರೀತಿ ಮಾತಾಡಿದ್ದಾರೆ, ಅವರು ಯಾರನ್ನ ಕೇಸಲ್ಲಿ ಸಿಗಾಕಿಸಬೇಕು ಅಂತಿದ್ದಾರೆ. ನಾನು ಈ ಸಾಕ್ಷಿಯನ್ನ SITಗೆ ಕೊಟ್ರೆ ಉಳಿಯಲ್ಲ. ಹಾಗಾಗಿ ನಾನು CBI ಗೆ ಮಾತ್ರ ಕೊಡ್ತೀನಿ. ಪ್ರಕರಣದ ದಿಕ್ಕನ್ನೇ ಬದಲಿಸಲು ಹೊರಟಿದ್ದಾರೆ, ನನ್ನನ್ನ ಸಿಲುಕಿಸಿ, ಪ್ರಕರಣವನ್ನ ಮುಚ್ಚಿಹಾಕಲು ಹೊರಟಿದ್ದಾರೆ ಎಂದು ಹೇಳಿದರು.
ಸಿದ್ದರಾಮಯ್ಯ ಅವರು ತನಿಖಾ ತಂಡ ರಚನೆ ಮಾಡಿದ್ದಾರೆ. ಪೆನ್ ಡ್ರೈವ್ ಕಾಂಗ್ರೆಸ್ ಅವರೇ ಮಾಡಿರೋ ಪಕ್ಕಾ ಪ್ಲಾನ್ ಇದು, ಡಿಕೆಶಿ ನೇತೃತ್ವದಲ್ಲಿ ಪೆನ್ ಡ್ರೈವ್ ಬಿಟ್ಟಿದ್ದಾರೆ. ಕಾಂಗ್ರೆಸ್ ಪ್ರಾಯೋಜಿತ ಪ್ರಕರಣ ಇದು.
ಸಿದ್ದರಾಮಯ್ಯ ಅವಾಗ ಮಾಡಿದ್ರು, ಇವಾಗ ಮಾಡಿದ್ರು ಅನ್ನೋದಲ್ಲ. ದೇಶಕ್ಕೆ ಕಪ್ಪು ಮಸಿ ಬಳಿಯುವ ಕೆಲಸ ಕರ್ನಾಟಕದಿಂದ ಶುರುಮಾಡಿದ್ದಾರೆ, ಕಾರ್ತಿಕ್ ಎಲ್ಲಿದ್ದಾನೆ ಅಂತ SIT ತಂಡ ಹುಡುಕಬೇಕು.
ಆರೋಪಿ ಅಂತ ಇವರೇ ಹೇಳಿದ ಮೇಲೆ ಹುಡುಕಿ ಕರೆತರಬೇಕು. SIT ರಬ್ಬರ್ ಸ್ಟಾಂಪ್ ರೀತಿ ತನಿಖೆ ಮಾಡ್ತಿದ್ದಾರೆ. ರೇವಣ್ಣ ಮೇಲೆ ಹಾಕಿರೋ ಕೇಸ್ ಸತ್ಯಾಸತ್ಯವಾಗಿದೆಯಾ.? ಬಿಜೆಪಿ-ಜೆಡಿಎಸ್ ಮೈತ್ರಿ ಮೇಲೆ ಕಳಂಕ ತರಲು ಹೀಗೆ ಮಾಡಿದ್ದಾರೆ. ದೇವರಾಜೇಗೌಡ ದಿಟ್ಟತನದಿಂದ ಬಂದು ಸತ್ಯಾಸತ್ಯತೆ ಇಂದ ಮಾಹಿತಿ ನೀಡಿದ್ದಾರೆ.
ಮೋದಿ ಅವರಿಗೆ ಇಡೀ ರಾಷ್ಟ್ರದಲ್ಲಿ ಈ ರೀತಿ ಮಾಡಿದ್ದಾರೆ ಅಂತ ಕಳಂಕ ತರುವ ಕೆಲಸ ಮಾಡ್ತಿದ್ದಾರೆ. SIT ರಿಮೋಟ್ ಕಂಟ್ರೋಲ್ ಮಾಡಿಕೊಂಡಿದ್ದಾರೆ. CBI ಗೆ ಕೊಡಿ.ಇಲ್ಲ ಕೋರ್ಟ್ ಸೂಚಿಸುವ ಜಡ್ಜ್ ನೇತೃತ್ವದಲ್ಲಿ ತನಿಖೆ ಕೊಡಿ. ರಾಜಕೀಯವಾಗಿ ಡ್ಯಾಮೇಜ್ ಮಾಡಿದ ಮೇಲೆ ಸರಿಹೋಗಲ್ಲ. ಸರ್ಕಾರ ಸ್ಪಷ್ಟವಾಗಿ ಮಾಡಿದ್ರೆ, ಯಾರೂ ಪ್ರಶ್ನೆ ಮಾಡೋಕೆ ಬರಲ್ಲ. ಸಾಕ್ಷಿಗಳನ್ನ ಸೃಷ್ಟಿ ಮಾಡಿಕೊಂಡು ತನಿಖೆ ಮಾಡುವುದು ಸರಿಯಲ್ಲ. ಪ್ರಜ್ವಲ್ ರೇವಣ್ಣ ಘಟನೆ ನಡೆದಿದ್ರೆ ಅದಕ್ಕೆ ಶಿಕ್ಷೆ ಅನುಭವಿಸುತ್ತಾರೆ ಎಂದು ಹೇಳಿದರು.












Click it and Unblock the Notifications