'ರಾಜಕೀಯ ವ್ಯಭಿಚಾರಿ ನಾನು': ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲಿ ಡಿಕೆಶಿ ವಿರುದ್ಧ ಪೋಸ್ಟರ್
ಬೆಂಗಳೂರು, ಮೇ 07: ಹಾಸನ ಮೈತ್ರಿ ಅಭ್ಯರ್ಥಿ ಹಾಗೂ ಹಾಸನ ಸಂಸದರಾದ ಪುಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದ ಹಿಂದೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೈವಾಡಿವೆ ಎಂದು ವಕೀಲ, ಬಿಜೆಪಿ ಮುಖಂಡ ದೇವರಾಜೇಗೌಡ ಗಂಭೀರ ಆರೋಪ ಮಾಡಿದ್ದಾರೆ. ಇತ್ತ ಡಿ ಕೆ ಶಿವಕುಮಾರ್ ವಿರುದ್ಧ ರಾತ್ರೋರಾತ್ರಿ ಬೆಂಗಳೂರಿನ ವಿವಿಧೆಡೆ ಅನಾಮಿಕ ವ್ಯಕ್ತಿಗಳು ಪೋಸ್ಟರ್ ಅಂಟಿಸಲಾಗಿದೆ.
ಹೌದು, ಪುಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ವೈರಲ್ ವಿಚಾರ ರಾಜಕೀಯ ತಿರುವು ಪಡೆದುಕೊಂಡಿದ್ದು, ಆದಳಿತ ಹಾಗೂ ವಿಪಕ್ಷಗಳ ಕೆಸರೆರಚಾಟಕ್ಕೆ ಜೋರಾಗಿದೆ. ಪೆನ್ ಡ್ರೈವ್ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್ ಪಾತ್ರವಿದೆ ಎಂದು ಆರೋಪಿಸಿರುವ ಬೆನ್ನಲ್ಲೇ ರಾಜಧಾನಿ ಬೆಂಗಳೂರಿನ ವಿವಿಧೆಡೆ ಡಿಸಿಎಂ ವಿರುದ್ಧ ಪೋಸ್ಟರ್ ಅಂಟಿಸಿದ್ದಾರೆ. ಬೆಂಗಳೂರು ನಗರದ ವಿವಿಧ ಸ್ಥಳಗಳಲ್ಲಿ ರಾತ್ರಿ ಬೆಳಗಾಗುವಷ್ಟರಲ್ಲಿ ಡಿ.ಕೆ.ಶಿವಕುಮಾರ್ ವಿರುದ್ಧ ಪೋಸ್ಟರ್ ಗಳು ಪ್ರತ್ಯಕ್ಷವಾಗಿವೆ. ಲುಲು ಮಾಲ್, ಕೆಪಿಸಿಸಿ ಕಚೇರಿ ಸೇರಿದಂತೆ ಬೆಂಗಳೂರಿನ ವಿವಿಧೆಡೆಗಳಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಸಿಎಂ ಸಿದ್ಧರಾಮಯ್ಯ ವಿರುದ್ದ ಪೋಸ್ಟರ್ ಗಳನ್ನು ಅಂಟಿಸಲಾಗಿದೆ.

ಪೋಸ್ಟರ್ ನಲ್ಲಿ ಏನಿದೆ?
ಹೆಣ್ಣು ಮಕ್ಕಳ ವೀಡಿಯೋ ಬಳಸಿಕೊಂಡು ರಾಜಕೀಯ ಮಾಡೋ ವ್ಯಭಿಚಾರಿ ಡಿ ಕೆ ಶಿವಕುಮಾರ. ಹೆಣ್ಣು ಮಕ್ಕಳ ವಿಡಿಯೋ ಬಳಸಿಕೊಂಡು ರಾಜಕೀಯ ಮಾಡೋ ಬೋಸ್ ಡಿಕೆ ನಾನು. ರಾಜಕೀಯಕೋಸ್ಕರ ಹೆಣ್ಣು ಮಕ್ಕಳ ಫೋಟೋವನ್ನೇ ಮಾರಾಟಕ್ಕಿಟ್ಟ ಲುಲು ಕುಮಾರ್ ಎಂದು ಬೆಂಗಳೂರಿನ ಹಲವು ಸ್ಥಳಗಳಲ್ಲಿ ಪೋಸ್ಟರ್ ರಾರಾಜಿಸುತ್ತಿವೆ.
ಇನ್ನೂ ಹುಡುಗಿಯರನ್ನು ಸಪ್ಲೆ ಮಾಡುವವನು ಪಿಂಪ್. ಹುಡುಗಿಯರ ವ್ಯಾಪಾರ ಮಾಡುವವನು ಪಿಂಪ್.. ಹುಡುಗಿಯರ ಕಳುಹಿಸಿ ಹನಿಟ್ರಾಪ್ ಮಾಡುವವನು .. ಇವರೆಲ್ಲಾ ಪಿಂಪ್ ಆದ್ಮೇಲೆ ಹುಡುಗಿಯರ ವೀಡಿಯೋವನ್ನು ಸ್ವಾರ್ಥಕ್ಕೆ ಬಳಸಿಕೊಳ್ಳುವವನು ಏನು ಅವನು ಪಿಂಪ್ ಅಷ್ಟೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಇರುವ ಫೋಟೋವನ್ನ ಹಾಕಿ ಅನಾಮಿಕ ವ್ಯಕ್ತಿಗಳು ಬೆಂಗಳೂರಿನ ಹಲವು ಕಡೆಗಳಲ್ಲಿ ಪೋಸ್ಟರ್ ಅಂಟಿಸಿದ್ದಾರೆ.












Click it and Unblock the Notifications