ಕರ್ನಾಟಕದಲ್ಲಿ ಕೊವಿಡ್ ನೆಗೆಟಿವ್ ಬಂದವರಲ್ಲೂ ಮತ್ತೆ ಸೋಂಕಿನ ಲಕ್ಷಣ
ಬೆಂಗಳೂರು, ಆಗಸ್ಟ್ 17: ಕರ್ನಾಟಕದಲ್ಲಿ ನಿತ್ಯ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ದಿನವೂ 7 ಸಾವಿರಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗುತ್ತಿವೆ.
Recommended Video
ಆದರೆ ಅದಕ್ಕಿಂತಲೂ ಆತಂಕದ ಸಂಗತಿಯೆಂದರೆ ಕೊರೊನಾ ನೆಗೆಟಿವ್ ಬಂದವರಿಗೂ ಸ್ವಲ್ಪ ದಿನಗಳ ನಂತರ ಮತ್ತೆ ಸೋಂಕು ಕಾಣಿಸಿಕೊಳ್ಳುತ್ತಿದೆ.
ಕೊವಿಡ್-19 ಸಮಯದಲ್ಲಿ ರೋಗಿಯ ಅನಾರೋಗ್ಯದ ತೀವ್ರತೆಯ ಮಟ್ಟವನ್ನು ಅನುಸರಿಸಿ ಅವರು ಗುಣಮುಖರಾದ ನಂತರ ಮತ್ತೆ ಅನಾರೋಗ್ಯ ಕಂಡುಬರುವ ಸಾಧ್ಯತೆಯಿದೆ.
ಫಾಲೋ ಅಪ್ ವೇಳೆ ರೋಗಿಯಲ್ಲಿ ಆತಂಕ, ಖಿನ್ನತೆ ಕಂಡುಬಂದರೆ ಮಾನಸಿಕ ತಜ್ಞರಲ್ಲಿ ಸಮಾಲೋಚನೆ ಪಡೆದುಕೊಳ್ಳುವಂತೆ ಸೂಚಿಸಲಾಗುತ್ತದೆ ಎಂದು ಫೋರ್ಟಿಸ್ ಆಸ್ಪತ್ರೆಯ ನಿರ್ದೇಶಕ ಡಾ ವಿವೇಕಾನಂದ ಪಡೆಗಲ್ ತಿಳಿಸಿದ್ದಾರೆ.

ಚಿಕಿತ್ಸೆ ಪಡೆದು ವಾಪಸ್ಸಾದವರಿಗೆ ಸೋಂಕು
ಕೊವಿಡ್-19 ರೋಗ ಕಾಣಿಸಿಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವಾಪಸ್ಸಾದ ಬಳಿಕವೂ ಮಹಿಳೆ ಆಕೆಯ ಪತಿ ಮತ್ತು ಮಗುವಿಗೆ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿವೆ.

ಸುಸ್ತು, ಮೈಕೈ ನೋವು ಇತರೆ ಲಕ್ಷಣಗಳು
ಸಣ್ಣ ಕೊರೊನಾ ಲಕ್ಷಣ ಇರುವವರು ಗುಣಮುಖರಾದ ಮೇಲೆ ಮತ್ತೆ ಸುಸ್ತು, ಮೈಕೈ ನೋವು, ಬಳಲಿಕೆ, ಅನಾಸಕ್ತಿಯಂತಹ ಲಕ್ಷಣಗಳನ್ನು 8-10 ದಿನ ಅನುಭವಿಸುತ್ತಿರುತ್ತಾರೆ. ಆದರೆ ಅವರಿಗೆ ಔಷಧಿಗಳು ಬೇಕಾಗುವುದಿಲ್ಲ ಎಂದು ಅಪೊಲೋ ಆಸ್ಪತ್ರೆಯ ಡಾ ರವೀಂದ್ರ ಮೆಹ್ತಾ ಹೇಳುತ್ತಾರೆ.

ಮಹಿಳೆಗೆ ಮತ್ತೆ ಕೊರೊನಾ ಲಕ್ಷಣ
ಮಹಿಳೆಗೆ ಮತ್ತೆ ಕೊರೊನಾ ಲಕ್ಷಣ ಕಂಡುಬಂದಿದ್ದು ವೈದ್ಯರು ಎರಡು ವಾರಗಳ ವೈದ್ಯಕೀಯ ನಿಗಾ ಸೂಚಿಸಿದ್ದಾರೆ. ನೆಗೆಟಿವ್ ಎಂದು ಬಂದರೂ ಮತ್ತೆ 20 ದಿನಗಳ ಕಾಲ ನನಗೆ ಸುಸ್ತಾಗುತ್ತಿತ್ತು. ನನ್ನ ಪತಿಗೆ ಗಂಟಲು ಕಿರಿಕಿರಿಯಾಗುತ್ತಿತ್ತು. ನನ್ನ ಮಗಳು ಮೊದಲಿನಂತಾಗಲು 10 ದಿನ ಬೇಕಾಯಿತು ಎನ್ನುತ್ತಾರೆ ಮಹಿಳೆ.

ಉಸಿರಾಟದ ತೊಂದರೆ ಕೂಡ ಕಾಣಿಸಿಕೊಳ್ಳಬಹುದು
ಶ್ವಾಸಕೋಶದ ತೊಂದರೆಯಿದ್ದರೆ, ಐಸಿಯು, ವೆಂಟಿಲೇಟರ್ ನಲ್ಲಿದ್ದು ಬಂದಿದ್ದರೆ ಅಂತವರಿಗೆ ಉಸಿರಾಟದ ತೊಂದರೆ, ಶ್ವಾಸಕೋಶದ ಸಮಸ್ಯೆ ಮತ್ತೆ ಕೂಡ ಕಾಣಿಸಿಕೊಳ್ಳಬಹುದು ಎನ್ನುತ್ತಾರೆ ಡಾ ರವೀಂದ್ರ. ಕೊವಿಡ್ ನಂತರ ನೆಗೆಟಿವ್ ವರದಿ ಬಂದ ಮೇಲೆ ಸಹ ನಾವು ಗುಣಮುಖ ಹೊಂದಿದವರ ಆರೋಗ್ಯವನ್ನು ಮತ್ತೆ ಒಂದು ತಿಂಗಳವರೆಗೆ ವಿಚಾರಿಸುತ್ತಿರುತ್ತೇವೆ. ಗಂಭೀರ ಕೊವಿಡ್-19 ಬಂದು ಗುಣಮುಖರಾದವರಲ್ಲಿ ಸುಸ್ತು, ಬಳಲಿಕೆ ಹೆಚ್ಚಾಗಿರುತ್ತೆ.












Click it and Unblock the Notifications