Ration: 'ರಾಜ್ಯದಲ್ಲಿ ಉಚಿತ ಅನ್ನಭಾಗ್ಯ, ಅನಾರೋಗ್ಯ ಖಚಿತ'
Ration: ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಪಂಚ ಗ್ಯಾರಂಟಿಗಳನ್ನು ಜಾರಿಗೊಳಿಸಿದ್ದು, ಇದರಲ್ಲಿ ಅನ್ನಭಾಗ್ಯ ಯೋಜನೆ ಕೂಡ ಒಂದಾಗಿದೆ. ಇದರಡಿಯಲ್ಲಿ ಉಚಿತ ಅಕ್ಕಿ, ರಾಗಿಯನ್ನು ವಿತರಣೆ ಮಾಡಲಾಗುತ್ತಿದೆ. ಆದರೆ, ನ್ಯಾಯಬೆಲೆ ಅಂಗಡಿಗಳಲ್ಲಿ ವಿತರಿಸುತ್ತಿರುವ ಆಹಾರ ಧಾನ್ಯ ತೀವ್ರ ಕಳಪೆ ಮಟ್ಟದಾಗಿದೆ ಎನ್ನುವ ಆರೋಪಗಳು ಕೇಳಿಬರುತ್ತಲಿವೆ. ಇದಕ್ಕೆ ಸಾಕ್ಷಿಯೆಂಬಂತೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.
ಸದ್ಯ ಇದೀಗ ರಾಜ್ಯದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಪಡೆದಂತಹ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸುವ ಕಾರ್ಯವನ್ನು ಸರ್ಕಾರ ಮುಂದುವರೆಸಿದೆ. ಬಳಿಕ ಅಂತಹವರನ್ನು ಎಪಿಎಲ್‌ಗೆ ವರ್ಗಾಹಿಸಲಾಗುತ್ತಿದೆ. ಮೊದಲಿನಿಂದಲೂ ಸಹ ಅನರ್ಹರು ಸಹ ಬಿಪಿಎಲ್ ಕಾರ್ಡ್‌ಗಳನ್ನು ಹೊಂದಿದ್ದಾರೆ ಎನ್ನುವ ಆರೋಪಗಳಿ ಕೇಳಿಬರುತ್ತಲಿದ್ದವು. ಇದೀಗ ರಾಜ್ಯ ಸರ್ಕಾರ ಸರ್ಕಾರ ಇದಕ್ಕೆ ಕಡಿವಾಣ ಹಾಕುವ ಕೆಲಸಕ್ಕೆ ಮುಂದಾಗಿದೆ.

ಸಾಮಾನ್ಯವಾಗಿ ಬಿಪಿಎಲ್ ಪಡಿತರ ಚೀಟಿಯನ್ನು ಬಡತನ ರೇಖೆಗಿಂತ ಕೆಳಗಿರು ಕುಟುಂಬಗಳಿಗೆ ನೀಡಲಾಗುತ್ತದೆ. ಆದರೆ, ಅನರ್ಹರು ಸಹ ನಕಲಿ ದಾಖಲೆಗಳ ಮೂಲಕ ಅನರ್ಹರು ಸಹರ ಬಿಪಿಎಲ್ ಕಾರ್ಡ್‌ಗಳನ್ನು ಹೊಂದಿದ್ದು, ಈ ಮೂಲಕ ಬಡವರ ಅನ್ನ ಹಾಗೂ ಅವರಿಗೆ ಸಿಗಬೇಕಾದ ಸೌಲಭ್ಯಗಳನ್ನು ಕಿತ್ತುಕೊಳ್ಳುತ್ತಿದ್ದರು. ಇದೀಗ ಇಂತಹವರ ವಿರುದ್ಧ ಸರ್ಕಾರ ಸಮರ ಸಾರಿದೆ.
ಈ ನಡುವೆಯೇ ರಾಜ್ಯದಲ್ಲಿ ಕೆಲ ನ್ಯಾಯಬೆಲೆ ಅಂಗಡಿಗಳಲ್ಲಿ ನೀಡಲಾಗುತ್ತಿರು ಪಡಿತರ ತೀವ್ರ ಕಳಪೆ ಮಟ್ಟದಿಂದ ಕೂಡಿದೆ. ಇದಕ್ಕೆ ಸಾಕ್ಷಿಯೆಂಬಂತೆ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದನ್ನು ಜೆಡಿಎಸ್ ಟ್ವೀಟ್‌ನಲ್ಲಿ ಶೇರ್ ಮಾಡಿಕೊಂಡಿದ್ದು, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದೆ.
ಮಹಿಳೆಯೊಬ್ಬರು ಅನ್ನಭಾಗ್ಯ ಯೋಜನೆಯಲ್ಲಿ ನೀಡಲಾದ ರಾಗಿಯನ್ನು ನೀರಿನಲ್ಲಿ ಸ್ವಚ್ಛ ಮಾಡುವಾಗ ಅದರಲ್ಲಿ ಬರೀ ಮಣ್ಣೇ ಕಂಡುಬಂದಿದೆ. ವಿಡಿಯೋದಲ್ಲಿ ಮಹಿಳೆಯು ನೋಡಿ ಸಾರ್, ಈ ರಾಗಿಯಲ್ಲ ಬರೀ ಮಣ್ಣೇ ಇದೆ. ಇದನ್ನು ತಿನ್ನುವುದಾದ್ರೂ ಹೇಗೆ? ಮಕ್ಕಳಿಗೆ ಇದನ್ನು ತಿನ್ನಿಸಿದ್ರೆ ಏನು ಗತಿ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದಕ್ಕೆ ಜೆಪಿಎಸ್ ಟ್ವೀಟ್ ಮಾಡಿದ್ದು, ರಾಜ್ಯ ಸರ್ಕಾರವನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದೆ.
ಉಚಿತ ಅನ್ನಭಾಗ್ಯ, ಅನಾರೋಗ್ಯ ಖಚಿತ !
— Janata Dal Secular (@JanataDal_S) October 14, 2025
ಸಿಎಂ @siddaramaiah, ಡಿಸಿಎಂ @DKShivakumar ಅವರೇ, ಗ್ಯಾರಂಟಿ ಕೊಡ್ತಿದ್ದೇವೆ ಎಂದು ಇಂತಹ ಕಳಪೆ ಪಡಿತರ ಕೊಟ್ಟರೆ ಯಾರು ತಿನ್ನುತ್ತಾರೆ?
ಕಲ್ಲು, ಮಣ್ಣು ಮಿಶ್ರಿತ ಅಕ್ಕಿ, ರಾಗಿಯನ್ನು ನಿಮ್ಮ ಮನೆಯಲ್ಲಿ ಬಳಸಿ ಕುಟುಂಬ ಸಮೇತ ಊಟ ಮಾಡಿ. ಆಗ ಅನ್ನಭಾಗ್ಯ ಫಲಾನುಭವಿಗಳು ಅನುಭವಿಸುತ್ತಿರುವ ಕಷ್ಟ… pic.twitter.com/TFfGIUK3s6
"ಉಚಿತ ಅನ್ನಭಾಗ್ಯ, ಅನಾರೋಗ್ಯ ಖಚಿತ. ಸಿಎಂ @siddaramaiah, ಡಿಸಿಎಂ @DKShivakumar ಅವರೇ, ಗ್ಯಾರಂಟಿ ಕೊಡುತ್ತಿದ್ದೇವೆ ಎಂದು ಇಂತಹ ಕಳಪೆ ಪಡಿತರ ಕೊಟ್ಟರೆ ಯಾರು ತಿನ್ನುತ್ತಾರೆ? ಕಲ್ಲು, ಮಣ್ಣು ಮಿಶ್ರಿತ ಅಕ್ಕಿ, ರಾಗಿಯನ್ನು ನಿಮ್ಮ ಮನೆಯಲ್ಲಿ ಬಳಸಿ ಕುಟುಂಬ ಸಮೇತ ಊಟ ಮಾಡಿ. ಆಗ ಅನ್ನಭಾಗ್ಯ ಫಲಾನುಭವಿಗಳು ಅನುಭವಿಸುತ್ತಿರುವ ಕಷ್ಟ ನಿಮ್ಮ ಅರಿವಿಗೂ ಬರಬಹುದು," ಎಂದು ಟ್ವೀಟ್‌ನಲ್ಲಿ ಬರೆದುಕೊಳ್ಳುವ ಮೂಲಕ ಆಕ್ರೋಶ ವ್ಯಕ್ತಪಡಿಸಿದೆ.
"ಅಲ್ಲದೆ, "ಆಹಾರ ಇಲಾಖೆ ಸಚಿವ @KHMuniyappaklr ಮುನಿಯಪ್ಪನವರೇ, ಜಾನುವಾರುಗಳು ಸಹ ತಿನ್ನಲು ಯೋಗ್ಯ ಅಲ್ಲದ ಇಂತಹ ಕಳಪೆ ರಾಗಿಯನ್ನು ಬಡವರಿಗೆ ನೀಡಲು ಮನಸ್ಸಾದರೂ ಹೇಗೆ ಬರುತ್ತದೆ? ಬಡವರು ಎಂದರೇ ಯಾಕಿಷ್ಟು ತಾತ್ಸರ? ಫ್ರೀ ಪ್ರೀ ಫ್ರೀ ಎಂದು ಗ್ಯಾರಂಟಿ ಆಸೆ ತೋರಿಸಿ ಇಂತಹ ಕಲಬೆರಕೆ ಪಡಿತರಗಳನ್ನು ನೀಡಿ, ಬಡ ಜನರ ಜೀವದ ಜೊತೆ ಚಲ್ಲಾಟವಾಡಬೇಡಿ. ನೊಂದವರ ಕಣ್ಣೀರಿನ ಶಾಪ ಸರ್ಕಾರಕ್ಕೆ ತಟ್ಟದೆ ಬಿಡುವುದಿಲ್ಲ" ಎಂದು ಸರ್ಕಾರದ ವಿರುದ್ಧ ಕಿಡಿಕಾರಿದೆ.












Click it and Unblock the Notifications