Poll Of Poll Survey: ಕರ್ನಾಟಕ ಚುನಾವಣೆ 2023, ಅತಂತ್ರ ಫಲಿತಾಂಶ, ಯಾರು ಕಿಂಗ್ ಮೇಕರ್?
ಬೆಂಗಳೂರು,ಮಾರ್ಚ್29: 2023ರ ವಿಧಾನಸಭಾ ಚುನಾವಣೆ ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿದೆ. ಈ ಬಾರಿ ಅಧಿಕಾರದ ಗದ್ದುಗೆ ಹಿಡಿಯಲು ರಾಜಕೀಯ ಪಕ್ಷಗಳು ಹಲವು ಸಮೀಕ್ಷಗಳ ಜೊತೆಗೆ ಹಲವು ತಂತ್ರಗಾರಿಕೆಯನ್ನ ಚುರುಕುಗೊಳಿಸಿವೆ.
ಹೌದು, ಈಗಾಗಲೇ ಗೆಲ್ಲುವ ತಂತ್ರಗಾರಿಕೆಯ ಜೊತೆಗೆ ಹಲವು ಸಮೀಕ್ಷೆಗಳನ್ನ ನಡೆಸಿರುವ ಪಕ್ಷಗಳು ಯಾವ ಕ್ಷೇತ್ರದಲ್ಲಿ ಸೋಲು ಉಂಟಾಗಿದಿಯೋ ಆ ಕ್ಷೇತ್ರದ ಮೇಲೆ ಹೆಚ್ಚಿನ ಒತ್ತುಕೊಡುವ ನಿಟ್ಟಿನಲ್ಲಿ ಹಲವು ರಾಜಕೀಯ ಲೆಕ್ಕಾಚಾರಗಳು ಶುರುವಾಗಿದೆ.

ಇನ್ನೂ ಆಡಳಿತರೂಢ ಬಿಜೆಪಿ ಮಿಷನ್ 150 ಟರ್ಗೆಟ್ ಇಟ್ಟುಕೊಂಡಿದರೆ, ಇತ್ತ ಕಾಂಗ್ರೆಸ್ ಹಲವು ಗ್ಯಾರಂಟಿ ಘೋಷಣೆಗಳ ಮೂಲಕ ಜನಮನ ಗೆಲ್ಲಲು ಮುಂದಾಗಿದೆ. ಇತ್ತ ಜೆಡಿಎಸ್ ಸಹ ಪಂಚರತ್ನ ರಥಯಾತ್ರೆ ಮೂಲಕ 123 ಸ್ಥಾನಗಳನ್ನ ಗೆಲ್ಲುವ ವಿಶ್ವಾಸವನ್ನ ಇಟ್ಟುಕೊಂಡಿದ್ದು, ಇದೀಗ ಪೋಲ್ ಆಫ್ ಪೋಲ್ ಸಮೀಕ್ಷೆ ಪ್ರಕಟಗೊಂಡಿದ್ದು, ರಾಜ್ಯ ನಾಯಕರಿಗೆ ಅಘಾತ ಉಂಟು ಮಾಡಿದೆ.
2023ರ ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬರಲಿದೆ ಎಂದು ಪೋಲ್ ಆಫ್ ಪೋಲ್ ಸಮೀಕ್ಷೆ ಹೇಳಿದೆ. ಇದರಿಂದಾಗಿ ಆಡಳಿತರೂಢ ಬಿಜೆಪಿಗೆ ಆಘಾತವಾಗುವ ಸಾಧ್ಯತೆಯಿದೆ. ಪೋಲ್ ಆಫ್ ಪೋಲ್ ಸಮೀಕ್ಷೆಯ ಪ್ರಕಾರ ಕಾಂಗ್ರೆಸ್ 100 ರಿಂದ 108 ಸ್ಥಾನಗಳು ಸಿಗಬಹುದು ಎಂದು ಅಂದಾಜಿಸಲಾಗಿದ್ದು, ಈ ಸಮೀಕ್ಷೆಯನ್ನು ಆಧರಿಸಿಯೇ ಕಾಂಗ್ರೆಸ್ ಚುನಾವಣಾ ತಂತ್ರಗಾರಿಕೆಯನ್ನ ರೂಪಿಸುತ್ತಿದೆ ಎಂದು ಹೇಳಲಾಗಿದೆ.

ಇನ್ನೂ ಆಡಳಿತರೂಢ ಬಿಜೆಪಿ ಪಕ್ಷ 140 ಕ್ಕೂ ಸ್ಥಾನಗಳನ್ನ ಗೆಲ್ಲುವ ವಿಶ್ವಾಸ ಇಟ್ಟುಕೊಂಡಿರುವ ಬಿಜೆಪಿಗೆ ಪೋಲ್ ಆಫ್ ಪೋಲ್ ಸಮೀಕ್ಷೆಯಿಂದ ಭಾರೀ ಆಘಾತ ಉಂಟು ಮಾಡಿದೆ. ಇನ್ನೂ ಬಿಜೆಪಿಗೆ 81 ರಿಂದ 89 ಸ್ಥಾನಗಳು ಸಿಕ್ಕರೆ, ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಗೆ 27 ರಿಂದ 35 ಸ್ಥಾನಗಳು ಸಿಗಬಹುದು ಎಂದು ಸರ್ವೆಯಿಂದ ತಿಳಿದು ಬಂದಿದೆ.












Click it and Unblock the Notifications