ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ವಿರುದ್ಧ ಆರ್‌ಎಸ್‌ಎಸ್‌ ಅಸಮಾಧಾನಗೊಂಡಿದ್ದೇಕೆ?

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 20: ರಾಜ್ಯ ಸಮ್ಮಿಶ್ರ ಸರ್ಕಾರ ಪತನಗೊಳಿಸಿ ಬಿಜೆಪಿ ಸರ್ಕಾರ ಸ್ಥಾಪಿಸಬೇಕೆಂಬ ರಾಜ್ಯ ಬಿಜೆಪಿ ನಾಯಕರ ಆಸೆಗೆ ತಣ್ಣೀರೆರೆಚಿರುವ ಆರ್‌ಎಸ್‌ಎಸ್ ಮುಖಂಡರು ಇಂತಹ ರಾಜಕೀಯ ಅಸ್ಥಿರತೆ ಉಂಟಾದರೆ ಭವಿಷ್ಯದಲ್ಲಿ ಪಕ್ಷಕ್ಕೆ ಮಾರಕವಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಸಮ್ಮಿಶ್ರ ಸರ್ಕಾರ ಪತನಗೊಳಿಸುವ ನೆಪದಲ್ಲಿ ದಿನಕ್ಕೊಂದು ಹೇಳಿಕೆ ನೀಡುತ್ತಾ ಯಾವುದೇ ಉದ್ದೇಶ ಈಡೇರದ ಪರಿಸ್ಥಿತಿ ನಿರ್ಮಾಣವಾಗಿದೆ, ಮಾಧ್ಯಮಗಳಲ್ಲಿ ಹಾಗೂ ಸಾರ್ವಜನಿಕವಾಗಿ ಬಿಜೆಪಿ ಮುಖಂಡರೇ ಹಣಕೊಟ್ಟು ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರನ್ನು ಖರೀದಿಸುತ್ತಿದ್ದಾರೆ ಎನ್ನುವ ಆರೋಪ ಬರುತ್ತಿದೆ.

ಎದುರಾಳಿ ಇಲ್ಲದೆ ಚೆಸ್ ಆಡೋದು ಹೇಗೆ? ಡಿಕೆಶಿಗೆ ಬಿಎಸ್ ವೈ ಪ್ರಶ್ನೆ ಎದುರಾಳಿ ಇಲ್ಲದೆ ಚೆಸ್ ಆಡೋದು ಹೇಗೆ? ಡಿಕೆಶಿಗೆ ಬಿಎಸ್ ವೈ ಪ್ರಶ್ನೆ

ಈ ರೀತಿ ಆರೋಪ ಮತ್ತು ಪ್ರತ್ಯಾರೋಪಗಳಿಗೆ ಅವಕಾಶ ಕೊಡದೆ ಸಾಧ್ಯವಾದಷ್ಟು ಗೌಪ್ಯತೆ ಕಾಯ್ದುಕೊಂಡು ಸುಗಮವಾಗಿ ಸರ್ಕಾರ ರಚನೆ ಮಾಡುವುದಾದರೆ ಮಾತ್ರ ಅಂತಹ ಪ್ರಯತ್ನಗಳಿಗೆ ಕೈಹಾಕಿ ಎಂದಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ 20 ಸೀಟುಗಳನ್ನು ಗೆಲ್ಲುವ ವಿಶ್ವಾಸವನ್ನು ಬಿಜೆಪಿ ಹೊಂದಿದೆ ಆದರೆ ಪಕ್ಷದ ಗೌಪ್ಯತೆ ಕಾಯ್ದುಕೊಳ್ಳದಿದ್ದರೆ ಪಕ್ಷದ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂದು ಸೂಚನೆ ನೀಡಿದ್ದಾರೆ.

ಈ ಕುರಿತು ರಾಜ್ಯ ಬಿಜೆಪಿ ಮುಖಂಡರನ್ನು ತರಾಟೆಗೆ ತೆಗೆದುಕೊಂಡಿರುವ ಆರ್‌ಎಸ್‌ಎಸ್‌ ನಾಯಕರು ಈ ಹಿಂದೆಯೇ ಆಪರೇಷನ್ ಕಮಲ ಹೆಸರಿನಲ್ಲಿ ಪಕ್ಷಕ್ಕೆ ಭಾರಿ ದಕ್ಕೆ ಉಂಟಾಗಿದೆ.

ಡಿಕೆ ಸುರೇಶ್ ಬಿಡುಗಡೆ ಮಾಡಿದ್ದ ಬಿಎಸ್ ವೈ ಹೆಸರಿನ ಪತ್ರ ನಕಲಿ:ಬಿಜೆಪಿ ಡಿಕೆ ಸುರೇಶ್ ಬಿಡುಗಡೆ ಮಾಡಿದ್ದ ಬಿಎಸ್ ವೈ ಹೆಸರಿನ ಪತ್ರ ನಕಲಿ:ಬಿಜೆಪಿ

ಅದೇ ಕಾರಣಕ್ಕಾಗಿ ಐದು ವರ್ಷಗಳಲ್ಲಿ ಮೂರು ಮುಖ್ಯಮಂತ್ರಿಗಳನ್ನು ಬಿಜೆಪಿ ಸರ್ಕಾರ ಕಂಡಿತ್ತು, ಈಗಲೂ ಕೂಡ ಅದೇ ರೀತಿ ಆಪರೇಷನ್ ಕಮಲ ನಡೆಸಿ ರಾಜಕೀಯ ಅಸ್ಥಿರತೆ ಉಂಟುಮಾಡಿ ಅಧಿಕಾರದ ಗದ್ದುಗೆ ಹಿಡಿದರೆ ಮತ್ತೆ ಅದೇ ರೀತಿಯ ರಾಜಕೀಯ ದೊಂಬರಾಟ ಉಂಟಾಗಲಿದೆ. ಇದರಿಂದ ಭವಿಷ್ಯದಲ್ಲಿ ಪಕ್ಷವನ್ನು ಸಂಘಟಿಸುವುದಕ್ಕೆ ತೊಡಕಾಗಲಿದೆ.

ಹೊರಗಿನಿಂದ ಬಂದ ಶಾಸಕರು ಪಕ್ಷದಲ್ಲಿ ಬಂದು ಅಧಿಕಾರ ಹಿಡಿದು ಪಕ್ಷದ ಕಾರ್ಯಕರ್ತರ ಮೇಲೆ ಸವಾರಿ ಮಾಡುತ್ತಾರೆ ಹಾಗೆ ಪಕ್ಷಕ್ಕೆ ಬದ್ಧವಾಗಿ ನಡೆದುಕೊಳ್ಳುವುದಿಲ್ಲ, ಈ ರೀತಿಯ ರಾಜಕೀಯ ಅವಕಾಶವಾದಿ ತನ ಪ್ರದರ್ಶಿಸಿದರೆ ಮುಂದೊಂದು ದಿನ ರಾಜ್ಯದ ಜನತೆ ತಿರಸ್ಕರಿಸಬಹುದು.

ಕಾಂಗ್ರೆಸ್ ಅನ್ನು ಹಾಡಿ ಹೊಗಳಿದ ಆರೆಸ್ಸೆಸ್ ಮುಖ್ಯಸ್ಥ ಭಾಗವತ್ಕಾಂಗ್ರೆಸ್ ಅನ್ನು ಹಾಡಿ ಹೊಗಳಿದ ಆರೆಸ್ಸೆಸ್ ಮುಖ್ಯಸ್ಥ ಭಾಗವತ್

ಈ ನಿಟ್ಟಿನಲ್ಲಿ ಸಮ್ಮಿಶ್ರ ಸರ್ಕಾರ ತಾನಾಗಿಯೇ ಪತನ ಆಗುವ ವರೆಗೂ ಸಂಯಮದಿಂದ ಕಾಯುವುದು ಒಳಿತು ಎಂದು ಸಲಹೆ ಮಾಡಿದ್ದಾರೆ ಎನ್ನಲಾಗಿದೆ.

ಇನ್ನೂ ಮಾಯವಾಗದ ಆಪರೇಷನ್ ಗಾಯ, ಹೀಗೆ ಆದರೆ ಪಕ್ಷ ಮಾಯ

ಇನ್ನೂ ಮಾಯವಾಗದ ಆಪರೇಷನ್ ಗಾಯ, ಹೀಗೆ ಆದರೆ ಪಕ್ಷ ಮಾಯ

2008ರಲ್ಲಿ ಆಪಮರೇಷನ್ ಕಮಲ ನಡೆಸಿ ಜನರ ಕಣ್ಣಲ್ಲಿ ಕೀಳು ಭಾವನೆ ಮೂಡಲು ಕಾರಣವಾಯಿತು, ಈಗಲೂ ಅದನ್ನು ಬಿಡದೆ ಮುಂದುವರೆಸಿದರೆ ಮುಂದೊಂದು ದಿನ ಬಿಜೆಪಿ ಪಕ್ಷವೇ ಮಾಯವಾಗುತ್ತದೆ, ಹಾಗಾಗಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾದ ಅಗತ್ಯವಿದೆ ಎಂದು ಹೇಳಿದ್ದಾರೆ.

ಲೋಕಸಭೆಯಲ್ಲಿ 20 ಸೀಟು ಗೆಲ್ಲಲೇ ಬೇಕು!ಅಲ್ಲಿಯವರೆಗೆ ಸುಮ್ಮನಿರಬೇಕು

ಲೋಕಸಭೆಯಲ್ಲಿ 20 ಸೀಟು ಗೆಲ್ಲಲೇ ಬೇಕು!ಅಲ್ಲಿಯವರೆಗೆ ಸುಮ್ಮನಿರಬೇಕು

ಲೋಕಸಭೆಯಲ್ಲಿ 20 ಸೀಟು ಗೆಲ್ಲಲೇ ಬೇಕು ಎನ್ನುವ ವಿಶ್ವಾಸದಲ್ಲಿ ಬಿಜೆಪಿ ಇದೆ, ಆದರೆ ಸಾರ್ವಜನಿಕವಾಗಿ ಹೇಳಿಕೆಗಳನ್ನು ನೀಡುತ್ತಾ, ಪಕ್ಷದ ಗುಟ್ಟನ್ನು ಬಿಟ್ಟುಕೊಡಬಾರದು, ಮಾಧ್ಯಮಗಳಲ್ಲಿ ಹಾಗೂ ಸಾರ್ವಜನಿಕವಾಗಿ ಬಿಜೆಪಿ ಮುಖಂಡರೇ ಹಣಕೊಟ್ಟು ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರನ್ನು ಖರೀದಿಸುತ್ತಿದ್ದಾರೆ ಎನ್ನುವ ಆರೋಪ ಬರುತ್ತಿದೆ. ಇಂತಹ ಆರೋಪಗಳು ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ಆರ್‌ಎಸ್‌ಎಸ್ ನಾಯಕರು ಬುದ್ಧಿವಾದ ಹೇಳಿದ್ದಾರೆ.

ಅಧಿಕಾರಕ್ಕಾಗಿ ಬಂದವರು ಅತಿಥಿಗಳೇ, ಅವಕಾಶವಾದಿ ರಾಜಕಾರಣ ಅನಿವಾರ್ಯವೇ

ಅಧಿಕಾರಕ್ಕಾಗಿ ಬಂದವರು ಅತಿಥಿಗಳೇ, ಅವಕಾಶವಾದಿ ರಾಜಕಾರಣ ಅನಿವಾರ್ಯವೇ

ಅಧಿಕಾರಕ್ಕಾಗಿ ಪಕ್ಷಕ್ಕೆ ಬಂದು ಸೇರಿಕೊಳ್ಳುವವರು ಎಂದಿಗೂ ಪಕ್ಷದ ನಿಷ್ಠ ಕಾರ್ಯಕರ್ತರಾಗಲು ಸಾಧ್ಯವಿಲ್ಲ ಅವರು ಎಂದಿಗೂ ಅತಿಥಿಗಳಾಗಿರುತ್ತಾರೆ, ಹಾಗಿದ್ದಾಗ ಅವರಿಂದ ಯಾವ ಅಭಿವೃದ್ಧಿಯನ್ನು ನಾವು ಅಪೇಕ್ಷಿಸಲು ಸಾಧ್ಯ, ಇಂತಹ ಅವಕಾಶವಾದಿ ರಾಜಕಾರಣ ಅನಿವಾರ್ಯವೇ ಎಂದು ಆರ್‌ಎಸ್‌ಎಸ್ ಪ್ರಶ್ನಿಸಿದೆ.

ಸರ್ಕಾರ ಆಗದಿದ್ದರೂ ಸಮಾಧಾನವಿರಲಿ

ಸರ್ಕಾರ ಆಗದಿದ್ದರೂ ಸಮಾಧಾನವಿರಲಿ

ಸಮ್ಮಿಶ್ರ ಸರ್ಕಾರ ತಾನಾಗಿಯೇ ಪತನ ಆಗುವ ವರೆಗೂ ಸಂಯಮದಿಂದ ಕಾಯುವುದು ಒಳಿತು ಎಂದು ಸಲಹೆ ಮಾಡಿದ್ದಾರೆ ಎನ್ನಲಾಗಿದೆ. ಒಂದೊಮ್ಮೆ ಅಧಿಕಾರ ಸಿಗದಿದ್ದರೂ ಸಂಯಮದಿಂದ ವರ್ತಿಸಿ ಎಂದು ಹೇಳಿದ್ದಾರೆ.

English summary
Efforts on formation of Bjp government in Karnataka was made RSS leaders unhappy as Bjp leaders were failed to keep confidential on affairs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X