DIG BNS Reddyಗೆ 4 ಪ್ರಶಸ್ತಿಗಳ ಸರಮಾಲೆ

ಬೆಂಗಳೂರು, ಫೆ.8: ಪೊಲೀಸರ ದೈಹಿಕ ಸಾಮರ್ಥ್ಯವೆಲ್ಲಾ ಹೆಚ್ಚಾಗಿ ಪೊಲೀಸ್ ಸೇವೆಯಲ್ಲೇ ಕರಗಿ ಹೋಗುತ್ತದೆ. ಇಲಾಖೆಯ ಆಚೆಗೂ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿ, ಸೈ ಎನಿಸಿಕೊಳ್ಳುವವರು ಕಡಿಮೆಯೇ! ಆದರೆ ಹಿರಿಯ ಪೊಲೀಸ್ ಅಧಿಕಾರಿ ಬಿಎನ್ಎಸ್ ರೆಡ್ಡಿ ಹಾಗಲ್ಲ. ಪೊಲೀಸ್ ಕೆಲಸದ ಒತ್ತಡದ ನಡುವೆಯೂ ಕ್ರೀಡಾ ಕ್ಷೇತ್ದಲ್ಲಿ ಗಮನ ಸೆಳೆಯುತ್ತಾರೆ.

ಹೌದು ಉಪ ಪೊಲೀಸ್ ಮಹಾ ನಿರ್ದೇಶಕ ಹಾಗೂ ಕೆಎಸ್ಎಆರ್ ಟಿಸಿ ಸಂಸ್ಥೆಯ ಜಾಗೃತ ದಳ ನಿರ್ದೇಶಕ ಬಿಎನ್ಎಸ್ ರೆಡ್ಡಿ ಪೊಲೀಸರಿಗೆಂದೇ ನಡೆದ ಕ್ರೀಡಾಕೂಟದಲ್ಲಿ ನಾಲ್ಕು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

Karnataka Police Sports Meet 2014 B N S Reddy Deputy Inspector General of Police wins 4 titles,
ಫೆಬ್ರವರಿ 4ರಿಂದ 6ರವರೆಗೂ ನಡೆದ ಪೊಲೀಸ್ ಕ್ರೀಡಾಕೂಟದಲ್ಲಿ BNS Reddy ಅವರು ಈ ಸಾಧನೆ ಮಾಡಿದ್ದಾರೆ.

ಟೆನಿಸ್ ಓಪನ್ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಕೆಎಸ್ಆರ್ ಪಿ ಡಿಐಜಿ ಮನೀಷ್ ಕರ್ಬೀಕರ್ ವಿರುದ್ಧ ಬಿಎನ್ಎಸ್ ರೆಡ್ಡಿ ಅವರು 9-0 ಅಂತರದಿಂದ ಗೆಲವು ಸಾಧಿಸಿ, 26ನೇ ಬಾರಿಗೆ ಪ್ರಶಸ್ತಿಗೆ ಗೆದ್ದರು.

ಇನ್ನು, ಓಪನ್ ಡಬಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಚಿಕ್ಕಬಳ್ಳಾಪುರದ ಡಿವೈಎಸ್ಪಿ ಚಿನ್ನಸ್ವಾಮಿ ಜತೆಗೂಡಿ ಚಾಮರಾಜನಗರದ ಎಸ್ಪಿ ರಾಜೇಂದ್ರ ಪ್ರಸಾದ್ ಹಾಗೂ ಹೋಮ್ ಗಾರ್ಡ್ ಡೆಪ್ಯುಟಿ ಕಮಾಂಡರ್ ಕೆಟಿ ಬಾಲಕೃಷ್ಣ ಜೋಡಿಯ ವಿರುದ್ಧ 9-4 ಅಂತರದಿಂದ ಜಯ ಸಾಧಿಸಿದರು.

ಹಾಗೆಯೇ, ಬಿಲಿಯರ್ಡ್ಸ್ ನಲ್ಲಿ ಬಿಎನ್ಎಸ್ ರೆಡ್ಡಿ ಅವರು 100-26 ಅಂತರದಿಂದ ಕೆಎಸ್ಆರ್ ಪಿ ಕಮಾಂಡೆಂಟ್ ನಟರಾಜ್ ವಿರುದ್ಧ ಗೆದ್ದರೆ, ಸ್ನೂಕರ್ ಫೈನಲ್ಸ್ ನಲ್ಲಿ ನಟರಾಜ್ ಅವರ ವಿರುದ್ಧವೇ 3-1 ಅಂತರದಿಂದ ಜಯ ದಾಖಲಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+