ಪೊಲೀಸರಿಗೆ ರಜೆ ಭತ್ಯೆ ಹೆಚ್ಚಳದ ಭಾಗ್ಯ
ಬೆಂಗಳೂರು, ಆಗಸ್ಟ್ 21 : ಸರ್ಕಾರಿ ರಜೆ ದಿನದಂದು ಕೆಲಸ ಮಾಡುವ ಪೊಲೀಸರ ಭತ್ಯೆಯನ್ನು ಹೆಚ್ಚಿಸಲಾಗುತ್ತದೆ ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ. ಗೃಹರಕ್ಷಕ ದಳದ ಸಿಬ್ಬಂದಿಯ ಭತ್ಯೆಯನ್ನು ಹೆಚ್ಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ಕೆ.ಜೆ.ಜಾರ್ಜ್ ಅವರು, 'ಪೊಲೀಸರು ಸರ್ಕಾರಿ ರಜೆ ದಿನ ಕೆಲಸ ಮಾಡಿದರೆ ನೀಡುತ್ತಿದ್ದ ಭತ್ಯೆಯನ್ನು ನಮ್ಮ ಸರ್ಕಾರ ಹಿಂದೆ 200 ರೂ.ಗಳಿಗೆ ಹೆಚ್ಚಿಸಿತ್ತು. ಸದ್ಯ, ಭತ್ಯೆಯನ್ನು 400 ರೂ.ಗಳಿಗೆ ಹೆಚ್ಚಿಸಲು ಹಣಕಾಸು ಇಲಾಖೆ ಅನುಮತಿ ನೀಡಿದೆ' ಎಂದು ಹೇಳಿದರು. [ಮಾನವೀಯತೆ ಮೆರೆದ ಪೊಲೀಸರಿಗೆ ಸೆಲ್ಯೂಟ್]

'ಪೊಲೀಸರ ಜೊತೆ ಗೃಹ ರಕ್ಷಕ ದಳದ ಸಿಬ್ಬಂದಿಯ ಭತ್ಯೆಯನ್ನು ಹೆಚ್ಚಳ ಮಾಡಲಾಗಿದೆ. ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುವ ಹೋಂಗಾರ್ಡ್ಗಳಿಗೆ ದಿನಕ್ಕೆ 400 ರೂ. ಮತ್ತು ಇತರ ಜಿಲ್ಲೆಗಳಲ್ಲಿ ಕೆಲಸ ಮಾಡುವವರಿಗೆ 325 ರೂ. ಭತ್ಯೆ ಪಡೆಯಲಿದ್ದಾರೆ ಎಂದು ಸಚಿವರು ತಿಳಿಸಿದರು. [ಮರಳು ಗುಡಿಸುವ ಜಾಲಹಳ್ಳಿ ಪೊಲೀಸ್ ಗೊಂದು ಸಲಾಂ]
8,500 ಸಿಬ್ಬಂದಿ ನೇಮಕ : ಇಲಾಖೆಯಲ್ಲಿ ಪ್ರತಿ ವರ್ಷ 4 ಸಾವಿರ ಸಿಬ್ಬಂದಿ ನಿವೃತ್ತಿಯಾಗುತ್ತಾರೆ. ಈ ವರ್ಷ 8,500 ಪೊಲೀಸ್ ಸಿಬ್ಬಂದಿಯ ನೇಮಕ ಪ್ರಕ್ರಿಯೆ ಮುಗಿದಿದ್ದು, ಅವರಿಗೆ ತರಬೇತಿ ನೀಡಲಾಗುತ್ತಿದೆ. ಇದಲ್ಲದೇ ಖಾಲಿ ಇರುವ 8500 ಹುದ್ದೆಗಳ ಭರ್ತಿಗೆ ಹಣಕಾಸು ಇಲಾಖೆ ಒಪ್ಪಿಗೆ ಸೂಚಿಸಿದೆ ಎಂದು ಸಚಿವರು ಹೇಳಿದರು.


Click it and Unblock the Notifications
