ಹಿಂಸಾಚಾರಕ್ಕೆ ತಿರುಗಿದ ಬೀದರ್ ಬಂದ್, ಲಾಠಿ ಚಾರ್ಜ್‌

Posted By:
Subscribe to Oneindia Kannada

ಬೀದರ್, ಜನವರಿ 09: ಭೀಮ ಕೊರೆಗಾಂವ್ ನಲ್ಲಿ ದಲಿತರ ಮೇಲೆ ನಡೆದ ಹಿಂಸಾಚಾರ ಖಂಡಿಸಿ ದಲಿತ ಸಂಘಟನೆಗಳು ಕರೆ ನಿಡಿದ್ದ ಬೀದರ್ ಬಂದ್ ಹಿಂಸಾಚಾರಕ್ಕೆ ತಿರುಗಿದ್ದು, ಪೊಲೀಸರು ಪ್ರತಿಭಟನಾಕಾರರ ಮೇಲೆ ಲಾಠಿ ಬೀಸಿದ್ದಾರೆ.

ಬೀದರ್‌ನಲ್ಲಿ ದಲಿತ ಸಂಘಟನೆಗಳ ಪ್ರತಿಭಟನಾಕಾರರು ಬಲವಂತದಿಂದ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲು ಪ್ರಯತ್ನಿಸಿದ ವೇಳೆ ವಾಗ್ವಾದ ಪ್ರಾರಂಭವಾಗಿದ್ದು, ವಾಗ್ವಾದ ತಾರಕ್ಕೆ ಏರಿ ಹಿಂಸಾಚಾರ ರೂಪ ತಳೆದಿದೆ. ಪ್ರತಿಭಟನಾಕಾರರು ವಾಹನಗಳನ್ನು ಜಖಂ ಗೊಳಿಸಲು ಮುಂದಾದಾಗ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.

ಕೋರೆಗಾಂವ್ ವಿಜಯೋತ್ಸವಕ್ಕೆ ಕಲ್ಲು, ಬೀದಿಗಿಳಿದ ದಲಿತ ಸಂಘಟನೆಗಳು

ಹಿಂಸಾಚಾರದಲ್ಲಿ ತೊಡಗಿದ್ದ ಪ್ರತಿಭಟನಾಕಾರರನ್ನು ಚದುರಿಸಲು ಲಾಠಿ ಪ್ರಹಾರ ನಡೆಸಿದ ಪೊಲೀಸರು ಕೆಲವರನ್ನು ಬಂಧಿಸಿದ್ದಾರೆ. ಪ್ರತಿಭಟನಾಕಾರರ ದಾಳಿಗೆ ಸಿಕ್ಕು ಕೆಲವು ವಾಹನಗಳು ಜಖಂಗೊಂಡಿವೆ.

Police opens Lathi charge on Dalith protesters in Bidar.

ಚಿಕ್ಕೋಡಿ ಕೂಡಾ ಬಂದ್
ನಿನ್ನೆ ಕೊರೆಗಾಂವ್ ಗಲಭೆ ವಿರೋಧಿಸಿ ದಲಿತ ಸಂಘಟನೆಗಳು ಚಿಕ್ಕೋಡಿ ಬಂದ್ ಗೆ ಕರೆ ನಿಡಿದ್ದವು, ಇಂದು ಚಿಕ್ಕೋಡಿಯ, ಮಾಂಜರಿ ಹಾಗೂ ಅಥಣಿ ಹಾಗೂ ಶಿರಗುಪ್ಪಿ ಗ್ರಾಮಗಳಲ್ಲಿ ಇದೇ ಬಂದ್ ಆಚರಿಸಲಾಗುತ್ತಿದೆ.

Police opens Lathi charge on Dalith protesters in Bidar.

ವಿವಿಧ ದಲಿತಪರ ಸಂಘಟನೆಗಳಿಂದ ಬಂದ್‌ಗೆ ಕರೆ ನೀಡಿದ್ದು, ಬೆಳಗ್ಗೆ 11 ಗಂಟೆಗೆ ಪ್ರತಿಭಟನಾ ರ‌್ಯಾಲಿ ಹೊರಡಲಿರುವ ದಲಿತ ಸಂಘಟನೆಗಳು ಬೆಳಗಾವಿ - ಮಿರಜ ರಸ್ತೆ ಬಂದ್ ಮಾಡಿ ಪ್ರತಿಭಟನೆ ಮಾಡುವ ಸಾಧ್ಯತೆ ಇದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Protest against Koregaon riots in Bidar turned to violence. some protester forcefully closing the shops and damaging the vehicles. Police open lathi charge on protesters.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ