ಶಶಿಧರ್ ಬಂಧನದಿಂದ ಪೊಲೀಸರ ಪ್ರತಿಭಟನೆಗೆ ಹಿನ್ನಡೆ?

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಜೂನ್ 02 : ಅಖಿಲ ಕರ್ನಾಟಕ ಪೊಲೀಸ್ ಮಹಾಸಂಘ ಕರೆ ನೀಡಿರುವ ಜೂನ್ 4ರ ಪ್ರತಿಭಟನೆಗೆ ಹಿನ್ನಡೆ ಉಂಟಾಗಿದೆ. ರಾಜದ್ರೋದ ಆರೋಪದಡಿ ಮಹಾಸಂಘದ ಅಧ್ಯಕ್ಷ ಶಶಿಧರ್ ವೇಣುಗೋಪಾಲ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಈಗಾಗಲೇ ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಕರ್ತವ್ಯಕ್ಕೆ ರಜೆ ಹಾಕಿ ಪ್ರತಿಭಟನೆ ನಡೆಸದಂತೆ ಪೊಲೀಸರಿಗೆ ಎಚ್ಚರಿಕೆ ನೀಡಿದ್ದಾರೆ. ಇದರಿಂದಾಗಿ ರಜೆ ಹಾಕಿ ಪ್ರತಿಭಟನೆಗೆ ಮುಂದಾಗಿದ್ದ ಪೊಲೀಸರಿಗೆ ಹಿನ್ನಡೆ ಉಂಟಾಗಿದೆ. [ಪೊಲೀಸರ ಪ್ರತಿಭಟನೆ : ಶಶಿಧರ್ ವೇಣುಗೋಪಾಲ್ ಬಂಧನ]

police

ಸಿದ್ದರಾಮಯ್ಯ ನೇತೃತ್ವದಲ್ಲಿ ಬುಧವಾರ ಸಂಜೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಶಶಿಧರ್ ವೇಣುಗೋಪಾಲ್ ಅವರನ್ನು ಬಂಧಿಸುವ ಕುರಿತು ನಿರ್ಧಾರ ತೆಗೆದುಕೊಳ್ಳಲಾಗಿತ್ತು. ರಾತ್ರಿ 12.30ರ ಸುಮಾರಿಗೆ ಯಲಹಂಕದಲ್ಲಿರುವ ಅವರ ಮನೆಯಲ್ಲಿ ಶಶಿಧರ್ ಬಂಧಿಸಲಾಗಿದ್ದು, ಅವರನ್ನು ಜೂನ್ 16ರ ತನಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. [ನಯವಾದ ಮಾತಿಗೆ ಬಗ್ಗದ ಪೊಲೀಸರು ಕವನಕ್ಕೆ ಬಗ್ಗುವರೆ?]

ವಾರೆಂಟ್ ಇಲ್ಲದೆ ಬಂಧನ : ಶಶಿಧರ್ ವೇಣುಗೋಪಾಲ್ ಅವರ ವಿರುದ್ಧ ಐಪಿಸಿ ಸೆಕ್ಷನ್ 124 (ಎ) ಅಡಿ ರಾಜದ್ರೋಹ, ಅಗತ್ಯವಸ್ತುಗಳ ಸೇವಾ ಕಾಯ್ದೆ ( ಎಸ್ಮಾ ) ಯಡಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಎಸ್ಮಾ ಅಡಿ ಪ್ರಕರಣ ದಾಖಲಾಗಿರುವುದರಿಂದ ಪೊಲೀಸರು ವಾರೆಂಟ್ ಇಲ್ಲದೆ ಅವರನ್ನು ಬಂಧಿಸಿದ್ದಾರೆ. [ಪ್ರತಿಭಟನೆಗೆ ಮುಂದಾದ ಪೊಲೀಸರ 31 ಬೇಡಿಕೆಗಳು]

ಎಸ್ಮಾ ಕಾಯ್ದೆಯನ್ನು ಅಗತ್ಯ ಸೇವೆಗಳಾದ ವೈದ್ಯರು, ಪೊಲೀಸರ ವಿರುದ್ಧ ಪ್ರಯೋಗಿಸಬಹುದಾಗಿದ್ದು, ಇದನ್ನು ಉಲ್ಲಂಘನೆ ಮಾಡಿದರೆ ಆರು ತಿಂಗಳ ಕಾಲ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಪೊಲೀಸರ ಬೇಡಿಕೆಗಳನ್ನು ಸರ್ಕಾರ ಪರಿಗಣಿಸಲಿದೆ ಎಂದು ಸರ್ಕಾರ ಈಗಾಗಲೇ ಭರವಸೆ ನೀಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The mass protest organized by the police constables in Karnataka scheduled for June 4 has hit a road block with their association leader being booked under sedition charges.
Please Wait while comments are loading...