ಅಮೆರಿಕಾದಲ್ಲಿ ಮೋದಿ ಆಟ ನಡೆಯಲ್ಲ: ಟ್ರಂಪ್ ಸೋಲು ಖಚಿತ!
ಬೆಂಗಳೂರು, ನ. 04: ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಅಂತಿಮ ಫಲಿತಾಂಶ ಇನ್ನೂ ಪ್ರಕಟವಾಗಬೇಕಿದೆ. ಇದೇ ಸಂದರ್ಭದಲ್ಲಿ ಅಮರಿಕೆ ಅಧ್ಯಕ್ಷೀಯ ಚುನಾವಣೆಯ ಭವಿಷ್ಯವನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ಹೇಳಿದ್ದಾರೆ. ಈ ಬಗ್ಗೆ ಹೇಳಿಕೆ ಕೊಟ್ಟಿರುವ ಅವರು, ಅಮೆರಿಕಾದಲ್ಲಿ ಪ್ರಧಾನಿ ಮೋದಿ ಅವರ ಹೆಸರು ನಡೆಯುವುದಿಲ್ಲ. ಅರಿಕರಿದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಖಚಿತವಾಗಿ ಸೋಲು ಅನುಭವಿಸುತ್ತಾರೆ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಡೊನಾಲ್ಡ್ ಟ್ರಂಪ್ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು ಹೋಳಿಕೊಂಡು ಮತ ಕೇಳಿದ್ದರು. ಆದರೆ ಅಮೆರಿಕಾ ಚುನಾವಣೆಯೇ ಬೇರೆಯಾಗಿದೆ. ಅಲ್ಲಿನ ಜನರು ಮೋದಿ ನೋಡಿ ವೋಟು ಹಾಕಲ್ಲ. ಅನಿವಾಸಿ ಭಾರತೀಯರೂ ಸೇರಿದಂತೆ ಅಲ್ಲಿನ ಮತದಾರರು ಮೋದಿ ಮುಖ ನೋಡಿಕೊಂಡು ವೋಟು ಕೊಡಲ್ಲ. ಭಾರತದಲ್ಲಿಯೇ ಪ್ರಧಾನಿ ಮೋದಿ ವಿರುದ್ಧ ಜನಾಭಿಪ್ರಾಯ ಶುರುವಾಗಿದೆ ಎಂದು ಸಿದ್ದರಾಮಯ್ಯ ವಿವರಿಸಿದ್ದಾರೆ.

ದೇಶದ ಅರ್ಥ ವ್ಯವಸ್ಥೆಯನ್ನು ಅವರು ಹಾಳು ಮಾಡಿದ್ದಾರೆ. ರಾಷ್ಟ್ರೀಯ ತಲಾ ವರಮಾನ (ಜಿಡಿಪಿ) ಪಾತಾಳಕ್ಕೆ ಕುಸಿದಿದೆ. ಹೀಗಾಗಿ ದೇಶದ ಯುವ ಜನರು ಮೋದಿ ವಿರುದ್ಧ ಸಿಟ್ಟು ಹೊರ ಹಾಕುತ್ತಿದ್ದಾರೆ. ಹೀಗಾಗಿಯೇ ಉತ್ತರ ಪ್ರದೇಶ ಚುನಾವಣೆಯಲ್ಲಿ ಸಿಎಂ ನಿತೀಶ್ ಕುಮಾರ್ ಅವರ ಮೇಲೆ ಈರುಳ್ಳಿ ಎಸೆದಿದ್ದಾರೆ. ಮೈಸೂರಿನಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹೇಳಿಕೆ ಕೊಟ್ಟಿದ್ದಾರೆ. ಇದೇ ಶುಕ್ರವಾರ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಸಂಪೂರ್ಣ ಫಲಿತಾಂಶ ಬರುವ ಸಾಧ್ಯತೆಯಿದೆ.












Click it and Unblock the Notifications