ಪಿಎಫ್‌ಐ ನಿಷೇಧ: ತೀರ್ಪು ಕಾಯ್ದಿರಿಸಿದ ಕರ್ನಾಟಕ ಹೈಕೋರ್ಟ್

ಬೆಂಗಳೂರು, ನವೆಂಬರ್ 28; ಭಯೋತ್ಪಾದಕ ಸಂಘಟನೆಗಳ ಜೊತೆ ಸಂಪರ್ಕ ಹೊಂದಿದೆ ಎನ್ನಲಾದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆಯನ್ನು ಕೇಂದ್ರ ಸರ್ಕಾರ ನಿಷೇಧಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಸೋಮವಾರ ಪೂರ್ಣಗೊಳಿಸಿದೆ.

ಕರ್ನಾಟಕದ ಪಿಎಫ್‌ಐ ಅಧ್ಯಕ್ಷ ನಾಸಿರ್ ಅಲಿ ಸಲ್ಲಿಸಿದ್ದ ಅರ್ಜಿ ಕುರಿತಂತೆ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ಸೋಮವಾರ ಅರ್ಜಿದಾರರ ಹಾಗೂ ಕೇಂದ್ರ ಸರ್ಕಾರಿ ವಕೀಲರ ವಾದ ಆಲಿಸಿದ ಬಳಿಕ ವಿಚಾರಣೆ ಪೂರ್ಣಗೊಳಿಸಿ, ತೀರ್ಪು ಕಾಯ್ದಿರಿಸಿತು.

ಅರ್ಜಿದಾರರ ಪರ ವಾದಿಸಿದ ಹೈಕೋರ್ಟ್‌ನ ಹಿರಿಯ ನ್ಯಾಯವಾದಿ ದೇಶದ್ರೋಹ ಚಟುವಟಿಕೆಗಳ ನಿಯಂತ್ರಣ ಕಾಯ್ದೆ (ಯುಎಪಿಎ) ಅಡಿ ಪಿಎಫ್‌ಐ ನಿರ್ಬಂಧಿಸಿರುವುದು ಕಾನೂನು ಬಾಹಿರವಾಗಿದೆ. ಸಂಘಟನೆಯನ್ನು ಕಾನೂನುಬಾಹಿರ ಸಂಘಟನೆ ಎಂದು ಘೋಷಿಸಿರುವುದು ಸಂವಿಧಾನ ವಿರೋಧಿ ಕ್ರಮವಾಗಿದೆ. ಕಾನೂನುಬಾಹಿರ ಸಂಘಟನೆ ಎನ್ನಲು ಕಾರಣ ನೀಡಿಲ್ಲ ಮತ್ತು ತಕ್ಷಣದಿಂದಲೇ ಅನ್ವಯವಾಗುವಂತೆ ನಿಷೇಧಿಸಿರುವುದಕ್ಕೆ ಪ್ರತ್ಯೇಕ ಕಾರಣ ನೀಡಿಲ್ಲ ಎಂದರು.

PFI Ban Karnataka High Court Reserves Order

ಅಲ್ಲದೇ, ಪಿಎಫ್‌ಐ ತನ್ನ ವಾದಮಂಡನೆಗೆ ಕಾಲಾವಕಾಶ ನೀಡದೇ ಬ್ಯಾನ್ ಮಾಡಲಾಗಿದೆ. ಯುಎಪಿಎ ಕಾಯ್ದೆಗೆ ವಿರುದ್ಧವಾಗಿ ಆದೇಶ ಹೊರಡಿಸಲಾಗಿದೆ. ಹಾಗಾಗಿ ಸರ್ಕಾರದ ಆದೇಶ ರದ್ದುಗೊಳಿಸಬೇಕು ಎಂದು ಮನವಿ ಮಾಡಿದರು.

ದೇಶವಿರೋಧಿ ಚಟುವಟಿಕೆ: ಕೇಂದ್ರ ಸರ್ಕಾರಿ ವಕೀಲರು ವಾದ ಮಂಡಿಸಿ, ಪಿಎಫ್‌ಐ ಸಂಘಟನೆಯಿಂದ ದೇಶವಿರೋಧಿ ಚಟುವಟಿಕೆ ನಡೆಯುತ್ತಿದೆ. ಅದು ಭಯೋತ್ಪಾದಕ ಸಂಘಟನೆಗಳ ಜೊತೆ ಸೇರಿ ದೇಶದಲ್ಲಿ ಹಿಂಸಾತ್ಮಕ ಕೃತ್ಯಗಳನ್ನು ಎಸಗುತ್ತಿದ್ದಾರೆ. ಸಂಘಟನೆಯ ಸದಸ್ಯರಿಂದ ರಾಷ್ಟ್ರದಲ್ಲಿ ಭೀತಿಯ ವಾತಾವರಣ ಸೃಷ್ಟಿಯಾಗಿದೆ ಎಂದು ನಿಷೇಧವನ್ನು ಸಮರ್ಥಿಸಿಕೊಂಡರು.

ಅಷ್ಟೇ ಅಲ್ಲದೇ ಎಲ್ಲಾ ಆಧಾರಗಳನ್ನು ಸಂಗ್ರಹ ಮಾಡಿದ ನಂತರವೇ ಸಕಾರಣವಾಗಿಯೇ ಪಿಎಫ್‌ಐ ನಿರ್ಬಂಧಿಸಲಾಗಿದೆ. ಇದನ್ನು ನಿಯಮ ಬಾಹಿರ ಕ್ರಮವೇನೂ ಇಲ್ಲ. ಎಲ್ಲದಕ್ಕೂ ಸಾಕ್ಷಿ ಪುರಾವೆಗಳಿವೆ. ಅಗತ್ಯ ಬಿದ್ದಾಗ ಅವುಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದರು.

ದೇಶಾದ್ಯಂತ ದಾಳಿ: ಅಷ್ಟೇ ಅಲ್ಲದೇ ಪಾಕಿಸ್ತಾನ ಮೂಲದ ಹಲವು ಸಂಘಟನೆಗಳಲ್ಲದೇ, ಸ್ಟೂಡೆಂಟ್ ಇಸ್ಮಾಮಿಕ್ ಮೂವೆಂಟ್ ಆಫ್ ಇಂಡಿಯಾ -ಸಿಮಿ ಮತ್ತು ಜಮಾತ್ ಉಲ್ ಮುಜಾಹಿದ್ದೀನ್ ಬಾಂಗ್ಲಾದೇಶ್ (ಜೆಎಂಬಿ) ಸೇರಿ ಹಲವು ಸಂಘಟನೆಗಳ ಜೊತೆ ಪಿಎಫ್‌ಐ ನಿಕಟ ಸಂಪರ್ಕವಿದೆ ಎನ್ನಲಾಗಿದೆ.

ಕೇಂದ್ರ ಸರ್ಕಾರ ಕಳೆದ ಸೆಪ್ಟಂಬರ್‌ನಲ್ಲಿ ಪಿಐಫ್‌ಐ ನಿಷೇಧ ಮಾಡಿದ್ದೇ ಅಲ್ಲದೆ, ಇತ್ತೀಚೆಗೆ ಪಿಎಫ್‌ಐಗೆ ಸೇರಿದ ಕಚೇರಿಗಳು ಹಾಗೂ ಅವುಗಳ ಸದಸ್ಯರ ನಿವಾಸಗಳ ಮೇಲೆ ಎನ್‌ಐಎ ದಾಳಿ ನಡೆಸಿ ದಾಖಲೆ ಮತ್ತು ಮಹತ್ವದ ಸಾಕ್ಷಿಗಳನ್ನು ಸಂಗ್ರಹ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಜತೆಗೆ 250ಕ್ಕೂ ಅಧಿಕ ಸದಸ್ಯರನ್ನು ಬಂಧಿಸಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+