ಜೈಲಲ್ಲಿ ತಟ್ಟೆ, ಲೋಟ, ಚಮಚಾಗಳನ್ನು ಬಿಟ್ಟು ಬೇರೆ ಜಗತ್ತು ನೋಡದ ಜನಾರ್ದನ ರೆಡ್ಡಿ: ಬಿ ಕೆ ಹರಿಪ್ರಸಾದ್ ವಾಗ್ದಾಳಿ
ಬೆಂಗಳೂರು: ಜೈಲಲ್ಲಿ ತಟ್ಟೆ, ಲೋಟ, ಚಮಚಾಗಳನ್ನು ಬಿಟ್ಟು ಬೇರೆ ಜಗತ್ತು ನೋಡದ ಜನಾರ್ದನ ರೆಡ್ಡಿಗೆ ರಾಜಕೀಯ ಜೀವನದಲ್ಲಿ "ಚಮಚಾಗಿರಿ" ಹೊರತುಪಡಿಸಿ ಬೇರೆ ಲೋಕದ ಪರಿಜ್ಞಾನವೇ ಗೊತ್ತಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಬಿ ಕೆ ಹರಿ ಪ್ರಸಾದ್ ವಾಗ್ದಾಳಿ ನಡೆಸಿದರು.
ಗುರುವಾರ ಸಾಮಾಜಿಕ ಜಾಲತಾಣ 'ಎಕ್'ನಲ್ಲಿ ಜನಾರ್ಧನಾ ರೆಡ್ಡಿಗೂ ನಮಗೂ ಸಂಬಂಧವಿಲ್ಲ ಎಂಬ ಅಮಿತ್ ಶಾ ಅವರ ಹೇಳಿಕೆ ಬಗ್ಗೆ ಬಿ ಕೆ ಹರಿ ಪ್ರಸಾದ್ ಕಿಡಿಕಾರಿದ್ದು, ತಲೆ ಮೇಲೆ ಕೈ ಇರಿಸಿಕೊಂಡಿದ್ದು ಸಾಲದೆಂಬಂತೆ ಕೇಂದ್ರದ ಮಾಜಿ ಸಚಿವೆ ಸುಷ್ಮಾ ಸ್ವರಾಜ್ ಅವರ ಪಾದ ಪೂಜೆ ಮಾಡಿ ನೀರು ಕುಡಿದು ರಾಜಕೀಯ ಲಾಭ ಗಿಟ್ಟಿಸಿಕೊಂಡ ರೆಡ್ಡಿಗೆ ಪಾದ ಪೂಜೆಯ ನೀರು ನೆತ್ತಿಗೇರಿರಬೇಕು. ಅದಕ್ಕೆ ಅಮಿತ್ ಶಾ ತಲೆ ಮೇಲೆ ಕುಟ್ಟಿ ಬಿಜೆಪಿಗೂ ಈ ಜೈಲುವಾಸಿ ರೆಡ್ಡಿಗೂ ಸಂಬಂಧ ಇಲ್ಲ ಅಂತಾ ಬಹಿರಂಗವಾಗಿ ತುಪಕ್ ಅಂತಾ ಉಗ್ದಿದ್ದನ್ನು ಮರೆತಂತಿದೆ.

ಒಮ್ಮೆ ಜೀವದ ಗೆಳೆಯ ಅನ್ನೋದು, ಇನ್ನೊಮ್ಮೆ ಶ್ರೀರಾಮುಲು ವಿರುದ್ದವೇ ಮಸಲತ್ತು ಮಾಡುವ ಜನಾರ್ಧನ ರೆಡ್ಡಿಯ ಊಸರವಳ್ಳಿ ಆಟ ರಾಜ್ಯದ ಜನ ಮರೆತಿಲ್ಲ. ಸಹೋದರರನ್ನೇ ರಾಜಕೀಯವಾಗಿ ಮುಗಿಸಲು ಹೊರಟ ಜನಾರ್ಧನ ರೆಡ್ಡಿಯ ಮೂರು ಕಾಸಿಗೂ ಕಿಮ್ಮತ್ತಿಲ್ಲದ ತಂತ್ರಗಾರಿಕೆ ಬಗ್ಗೆ ಶ್ರೀರಾಮುಲು ಆಡಿರುವ ಒಂದೊಂದು ಆಣಿಮುತ್ತುಗಳೇ ಸಾಕು ಸಾಧ್ಯವಾದ್ರೆ ಎಣಿಸಿಕೊಳ್ಳಲಿ ಎಂದು ಬಿ ಕೆ ಹರಿಪ್ರದಾಸ್ ಕಿಡಿಕಾರಿದ್ದಾರೆ.
ರೆಡ್ಡಿಗಾರು ನಾನು ವಾರ್ಡ್ ಚುನಾವಣೆ ಗೆದ್ದಿಲ್ಲ ನಿಜಾ ಆದ್ರೆ ಹಿಂಬಾಗಿಲೋ ಮುಂಬಾಗಿಲೋ ನಾನಂತೂ ರಾಜಾರೋಷವಾಗಿ ಬಂದಿದಿನಿ. ಚುನಾವಣೆಯ ಎರಡು ದಿನದ ಹಿಂದಿನ "ಕತ್ತಲೆ ರಾತ್ರಿಯ" ರಹಸ್ಯವಾಗಿಯಂತೂ ಬಂದಿಲ್ಲ ಬರುವುದೂ ಇಲ್ಲ. ಆದ್ರೆ 224 ವಿಧಾನಸಭಾ ಕ್ಷೇತ್ರದಲ್ಲಿ ಜಾತಿ, ಹಣ, ಇಲ್ಲದೆ ಚುನಾವಣೆ ಎದುರಿಸೋದಕ್ಕೆ ರೆಡಿ. ಧೈರ್ಯ ತಾಕತ್ತು ಇದ್ರೆ ಪ್ರಾಮಾಣಿಕವಾಗಿ ಚುನಾವಣೆ ನಡೆಸುವ ಕಿಂಚಿತ್ತಾದರೂ ಎದೆಗಾರಿಕೆ ಇದ್ರೆ ಮುಂದೆ ಬರಲಿ.
ನಮ್ಮ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ವಿರುದ್ಧ ಸುಳ್ಳು ಕೇಸ್ ಹಾಕಿರೋದಕ್ಕೆ ಹೈಕೋರ್ಟ್ ಕ್ಯಾಕರಿಸಿ ಮುಖಕ್ಕೆ ಉಗ್ದಿದ್ದು ಸಾಕಾಗಿಲ್ವಾ. ನ್ಯಾಯಾಧೀಶರನ್ನೇ ಹತ್ತು ಕೋಟಿ ಡೀಲ್ ಮಾಡಿ ಬೇಲ್ ತೆಗೆದುಕೊಂಡ ಹಾಗೇ ಅನ್ಕೊಂಡ್ರಾ? ನಮ್ಮ ನಾಯಕರು ಸುಳ್ಳು ಕೇಸ್ ಹಾಕಿಸಿಕೊಂಡು ಓಡಾಡ್ತಿರಬಹುದು ಆದ್ರೆ ಕೊಲೆ ಕೇಸ್ ಗಳಲ್ಲಿ ಸುಪ್ರೀಂಕೋರ್ಟ್ ಯಿಂದ ಗಡಿಪಾರಂತೂ ಆಗಿಲ್ಲ.
ಅವರಿವರ ಕೈ ಕಾಲು ಹಿಡಿದು ಬಿಜೆಪಿ ಸೇರಿ ನೆಲೆ ಇಲ್ಲದೆ ಬಿಲ ಹುಡುಕಾಡುವ ದಯನೀಯ ಸ್ಥಿತಿ ಜನಾರ್ಧನ ರೆಡ್ಡಿಗೆ ಬಂದಿದ್ರು, ಶೇಷ-ಅವಶೇಷಗಳ ಬಗ್ಗೆ ಮಾತಾಡೋದು ಹಾಸ್ಯಸ್ಪದ. ಇನ್ನೂ ಈಗಾಗಲೇ ಜೈಲು,ಡೀಲು,ಬೇಲುಗಳ ಬಗ್ಗೆ ಮಾತ್ರ ಮಾತಾಡಿದ್ದೆ, ಆದ್ರೆ ಇನ್ನೂ ಎಳೆ ಎಳೆಯಾಗಿ ಬಿಚ್ಚಿಡೋದಕ್ಕೆ ನಾನಂತೂ ರೆಡಿ ಎಂದು ವಿಧಾನ ಪರಿಷತ್ ಸದಸ್ಯ ಬಿ ಕೆ ಹರಿ ಪ್ರಸಾದ್ ವಾಗ್ದಾಳಿ ನಡೆಸಿದರು.
ಜೈಲು,ಬೇಲು,ಡೀಲು,ಅಕ್ರಮದಂತ ಪದಗಳನ್ನೇ ಕೇಳಿ ರಾಜಕೀಯದಲ್ಲಿ ಆಶ್ರಯ ಪಡೆದುಕೊಂಡಿರುವ ಜನಾರ್ದನ ರೆಡ್ಡಿಗೆ ಸಂವಿಧಾನ, ಸಂಸತ್ತು-ಸದನ, ವಿಧಾನಸಭೆಯ ಕಾರ್ಯಕಲಾಪ, ಪ್ರಜಾಪ್ರಭುತ್ವ ಪ್ರಕ್ರಿಯೆಗಳ ಬಗ್ಗೆ ಕಿಂಚಿತ್ತಾದರೂ ತಿಳುವಳಿಕೆ ಇದೆಯೇ? ಅಷ್ಟಕ್ಕೂ ಜನಾರ್ಧನ ರೆಡ್ಡಿ "ಕರ್ನಾಟಕದಲ್ಲಿ ರೌಡಿಗಳ ದರ್ಬಾರೋ" ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಯಾವ ಕರ್ನಾಟಕದ ಬಗ್ಗೆ ರೆಡ್ಡಿ ಆತಂಕವಾಗಿದ್ದಾರೆ ಎಂದು ಸ್ಪಷ್ಟಪಡಿಸಬೇಕಿತ್ತು. ಕರ್ನಾಟಕದ ಗಡಿಯನ್ನು ತಾವೇ ಕಿತ್ತು ಅಕ್ರಮ ಗಣಿಗಾರಿಕೆ ಮಾಡಿದ ಕರ್ನಾಟಕ ರಾಜ್ಯದ ಬಗ್ಗೆಯೋ? ಅಥವಾ ಬಳ್ಳಾರಿ ಜಿಲ್ಲೆಯನ್ನು "ರಿಪಬ್ಲಿಕ್" ಮಾಡಿಕೊಂಡು ಗೂಂಡಾಗಿರಿ ನಡೆಸಿದ ಕಾಲದ ಕರ್ನಾಟಕದ ಬಗ್ಗೆಯೋ? ಎಂದು ಪ್ರಶ್ನಿಸಿದರು.
ಬಗೆದಷ್ಟು ಬಯಲಾಗುವ ಈ ಜನಾರ್ಧನ ರೆಡ್ಡಿ ಎಲ್ಲಿಯೂ ಸಲ್ಲದ ಪಾಪದ ಕೂಸು. ಬಿಜೆಪಿ ಪಕ್ಷದಲ್ಲಿದ್ದೇನೆ ಎಂದು ಭಾವಿಸಿರುವ ರೆಡ್ಡಿ, ಒಮ್ಮೆ ಬಿಜೆಪಿ ಪಕ್ಷದ ಮಾಜಿ ಸಂಸದ ಪ್ರತಾಪ ಸಿಂಹ ಬರೆದಿರುವ "ಮೈನಿಂಗ್ ಮಾಫಿಯಾ" ಪುಸ್ತಕದಲ್ಲಿ ಹಾಡಿ ಹೊಗಳಿದ್ದಾರೆ ಒಮ್ಮೆ ಬಿಡುವು ಮಾಡಿಕೊಂಡಿ ಓದಲಿ. ಅದೂ ಸರಿಯೇ ಪುಸ್ತಕ ಓದುವ ಸಮಯ ಜನಾರ್ಧನ ರೆಡ್ಡಿಗೆ ಎಲ್ಲಿ ಸಿಗಬೇಕು. ಸಾವಿರಾರು ಪುಟಗಳ ಚಾರ್ಜ್ ಶೀಟ್, ಕೇಸ್, ಕೋರ್ಟ್, ಬೇಲು-ಡೀಲುಗಳ ಪ್ರತಿಗಳನ್ನೇ ಓದುವುದಕ್ಕೇ ಸಮಯ ಸಾಲುತ್ತಿಲ್ಲ ಎಂದರು.












Click it and Unblock the Notifications