ಬೆಂಗಳೂರು-ಹಾಸನ ಹೆದ್ದಾರಿ ಟೋಲ್ ಶುಲ್ಕ ಏರಿಕೆ

ಬೆಂಗಳೂರು, ಆಗಸ್ಟ್ 24: ಬೆಂಗಳೂರು- ಹಾಸನ ನಡುವೆ ಸಂಚಾರ ನಡೆಸುವ ವಾಹನ ಸವಾರರ ಜೇಬಿಗೆ ಕತ್ತರಿ ಬೀಳಲಿದೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಟೋಲ್ ಶುಲ್ಕ ಹೆಚ್ಚಳ ಮಾಡಲು ಅನುಮತಿ ನೀಡಿದೆ. ಸೆಪ್ಟೆಂಬರ್ 1ರಿಂದ ಹೊಸ ಶುಲ್ಕ ಜಾರಿಗೆ ಬರಲಿದೆ.

Recommended Video

      Congress ನಲ್ಲಿ ಹೆಚ್ಚಿದ ಆಂತರಿಕ ಬಿರುಕು , Kapil Sibal ಗರಂ | Oneindia Kannada

      ರಾಷ್ಟ್ರೀಯ ಹೆದ್ದಾರಿ 75 ಬೆಂಗಳೂರು-ಹಾಸನ ನಡುವೆ ಸಂಪರ್ಕ ಕಲ್ಪಿಸುತ್ತದೆ. ಟೋಲ್ ಶುಲ್ಕ ಹೆಚ್ಚಳ ಮಾಡಲು ಎನ್‌ಎಚ್‌ಎಐ ಅನುಮತಿ ನೀಡಿದೆ. ಈ ಮಾರ್ಗದಲ್ಲಿ ಒಟ್ಟು ಮೂರು ಟೋಲ್‌ ಪ್ಲಾಜಾಗಳಿವೆ.

      ಕಾರುಗಳಲ್ಲಿ ಎರಡೂ ಕಡೆ ಸಂಚಾರ ನಡೆಸುವವರು 5 ರೂ. ಶುಲ್ಕವನ್ನು ಹೆಚ್ಚು ಪಾವತಿ ಮಾಡಬೇಕು. ಮಾಸಿಕ ಪಾಸುಗಳ ದರಗಳನ್ನು 20 ರೂ. ಹೆಚ್ಚಳ ಮಾಡಲಾಗಿದೆ. ಸೆಪ್ಟೆಂಬರ್ 1ರಿಂದ ನೂತನ ದರಪಟ್ಟಿ ಜಾರಿಯಾಗಲಿದೆ.

      Pay More For Bengaluru Hassan Toll From September 1

      ಎಲ್‌ಸಿವಿ ವಾಹನಗಳ ಮಾಸಿಕ ಪಾಸಿನ ದರವನ್ನು 40 ರೂ. ಏರಿಕೆ ಮಾಡಲಾಗಿದೆ. ಬಸ್, ಲಾರಿ 5 ರೂ. ಶುಲ್ಕವನ್ನು ಹೆಚ್ಚು ನೀಡಬೇಕಿದೆ. ಮಾಸಿಕ ಪಾಸುಗಳ ದರ 4725 ರಿಂದ 4800ಕ್ಕೆ ಏರಿಕೆಯಾಗಿದೆ.

      ಕಾರುಗಳ ಏಕ ಮುಖ ಸಂಚಾರಕ್ಕೆ ಇದ್ದ ದರವನ್ನು ಹೆಚ್ಚಳ ಮಾಡಿಲ್ಲ. ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ಕೆಲವು ವಾಹನಗಳ ಶುಲ್ಕವನ್ನು ಹೆಚ್ಚಳ ಮಾಡಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

      ಕೋವಿಡ್ ಪರಿಸ್ಥಿತಿ ಕಾರಣದಿಂದಾಗಿ ಜನರ ಸಂಚಾರ ಕಡಿಮೆಯಾಗಿದೆ. ವಾರಂತ್ಯದಲ್ಲಿ ಸುಮಾರು 10 ಲಕ್ಷ ಟೋಲ್ ಸಂಗ್ರಹವಾಗುತ್ತಿತ್ತು. ಆದರೆ, ಈಗ ಅದರ ಅರ್ಧದಷ್ಟು ಸಹ ಸಂಗ್ರಹವಾಗಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+