ಮೇ 31ರ ಸುದ್ದಿ ಸಾರ: ಪಾರ್ವತಮ್ಮ ನಿಧನ ಸೇರಿ ಟಾಪ್ 10 ಸುದ್ದಿ
ಪಾರ್ವತಮ್ಮ ರಾಜ್ ಕುಮಾರ್ ಅವರ ನಿಧನ ಸುದ್ದಿಯ ಜತೆಗೆ ಹಲವಾರು ಸುದ್ದಿಗಳೂ ತಮ್ಮದೇ ಕಾರಣಗಳಿಗಾಗಿ ಮಹತ್ವ ಪಡೆದುಕೊಂಡವು.
ಮೇ ತಿಂಗಳ ಕೊನೆಯ ದಿನದ ಬೆಳಗಿನಿಂದಲೇ ಪಾರ್ವತಮ್ಮ ರಾಜ್ ಕುಮಾರ್ ಅವರ ನಿಧನದ ಸುದ್ದಿ ಬಹುತೇಕ ಎಲ್ಲಾ ಸುದ್ದಿ ಮನೆಗಳನ್ನು ಆವರಿಸಿತು. ಕರ್ನಾಟಕದ ಮಟ್ಟಿಗೆ ಅದೇ ಈ ದಿನದ ಬಿಗ್ ನ್ಯೂಸ್.
ಬುಧವಾರ ಬೆಳಗಾಗುತ್ತಲೇ ಜನರನ್ನು ಬಂದು ಅಪ್ಪಳಿಸಿದ ಈ ಸುದ್ದಿ ಸಂಜೆ ಪಾರ್ವತಮ್ಮ ಅವರ ಅಂತ್ಯಕ್ರಿಯೆಯಾಗುವವರೆಗೂ ಚಾಲ್ತಿಯಲ್ಲಿತ್ತು. ಅವರ ಸಾಧನೆಗಳು, ನೀಡಿದ ಚಿತ್ರಗಳು, ಅಮ್ಮನಾಗಿ, ನಿರ್ಮಾಪಕಿಯಾಗಿ, ಡಾ. ರಾಜ್ ಹಿಂದಿನ ಶಕ್ತಿಯಾಗಿ ಅವರು ನೀಡಿದ ಸೇವೆಯನ್ನು ಎಲ್ಲಾ ಮಾಧ್ಯಮಗಳೂ ಕೊಂಡಾಡಿದವು.
ಇದರ ನಡುವೆಯೇ ಕೆಲವಾರು ಸುದ್ದಿಗಳೂ ಗಮನ ಸೆಳೆದಿದ್ದುಂಟು. ದೆಹಲಿಯ ವಿಧಾನಸಭೆಯಲ್ಲಿ ಆಮ್ ಆದ್ಮಿ ಪಕ್ಷದ ಮಾಜಿ ನಾಯಕ ಕಪಿಲ್ ಮಿಶ್ರಾ ಅವರನ್ನು ಕಲಾಪದಿಂದ ಮಾರ್ಷಲ್ ಗಳು ಹೊರಹಾಕಿದ್ದು, ಕರ್ನಾಟಕ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಜಿ. ಪರಮೇಶ್ವರ್ ಅವರೇ ಮುಂದುವರಿದಿದ್ದು, ಯುಪಿಎಸ್ ಸಿಯಲ್ಲಿ ಕರ್ನಾಟಕದ ನಂದಿನಿಗೆ ಪ್ರಥಮ ಸ್ಥಾನ ಸಿಕ್ಕಿದ್ದು, ಚೆನ್ನೈನಲ್ಲಿ ಇಸ್ಫೋಸಿಸ್ ಶವ ಪತ್ತೆ... ಇವೇ ಮೊದಲಾದ ಸುದ್ದಿಗಳು ಗಮನ ಸೆಳೆದವು.
ದಿನದ ಜಂಜಾಟದಲ್ಲಿ ನಿಮ್ಮಿಂದ ಮಿಸ್ ಆಗಿರಬಹುದಾದ ಟಾಪ್ 10 ಸುದ್ದಿಗಳನ್ನು ತಂದು ಇಲ್ಲಿ ಗುಡ್ಡೆ ಹಾಕಲಾಗಿದೆ. ನಿಮ್ಮ ಬಿಡುವಿನ ಓದಿನ ಯಾನ ಇಲ್ಲಿಂದಲೇ ಶುರುವಾಗಲಿ.
1. ಕನ್ನಡ ಸಿನಿಮಾ ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ವಿಧಿವಶ

ಸುಮಾರು 16 ದಿನಗಳಿಂದ ನಗರದ ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೊಳಗಾಗಿದ್ದ ಅವರು, ಬುಧವಾರ (ಮೇ 31) ಬೆಳಗಿನ ಜಾವ 4:40ರ ಸುಮಾರಿಗೆ ಇಹಲೋಕ ತ್ಯಜಿಸಿದರು. (ಮುಂದೆ ಓದಿ...)
2. ಪಾರ್ವತಮ್ಮ-ಚಿತ್ರರಂಗದ ತಾಯಿ, ಇನ್ನೂ ಬದುಕಬೇಕಿತ್ತು: ಲೀಲಾವತಿ

ಬೆಂಗಳೂರಿನ ಸದಾಶಿವ ನಗರದಲ್ಲಿ ಅಂತಿಮ ದರ್ಶನಕ್ಕಾಗಿ ಇಡಲಾಗಿದ್ದ ಪಾರ್ವತಮ್ಮ ಅವರ ಪಾರ್ಥೀವ ಶರೀರಕ್ಕೆ ನಮನ ಸಲ್ಲಿಸಿದ ಹಿರಿಯ ನಟಿ ಲೀಲಾವತಿ, ಪಾರ್ವತಮ್ಮ ಅವರ ಗುಣಗಾನ ಮಾಡಿದರು. (ಮುಂದೆ ಓದಿ...)
3. ಪಾರ್ವತಮ್ಮ ನಿಧನ: ಚಿತ್ರಮಂದಿರಗಳು ಬಂದ್, ಹಲವು ಶಾಲೆಗಳಿಗೆ ರಜೆ

ಹಿರಿಯ ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಅವರ ನಿಧನದ ಹಿನ್ನೆಲೆಯಲ್ಲಿ, ಮೇ 31ರಂದು ರಾಜ್ಯಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಹಿರಿಯರ ನಿಧನದ ಶೋಕದ ಹಿನ್ನೆಲೆಯಲ್ಲಿ ಕನ್ನಡ ಚಿತ್ರರಂಗ ಸಂಪೂರ್ಣ ಸ್ತಬ್ಧವಾಗಿತ್ತು. ಚಿತ್ರ ಮಂದಿರಗಳೂ ಮುಚ್ಚಲ್ಪಟ್ಟಿದ್ದವು. (ಮುಂದೆ ಓದಿ...)
4. ಕುಂಬ್ಳೆ-ಕೊಹ್ಲಿ ಕಲಹ ನಿನ್ನೆ ಮೊನ್ನೆಯದ್ದಲ್ಲ, ತುಂಬಾ ಹಳೆ ಕಿರಿಕ್!

ಇತ್ತೀಚೆಗಷ್ಟೇ, ಟೀಂ ಇಂಡಿಯಾ ಆಟಗಾರರಿಂದ ಕೋಚ್ ಕುಂಬ್ಳೆ ವಿರುದ್ಧ ಬಿಸಿಸಿಐಗೆ ದೂರು ಎಂಬ ಸುದ್ದಿ ಎಲ್ಲರ ಹುಬ್ಬೇರಿಸಿತ್ತು. ಅದರ ಬೆನ್ನಲ್ಲೇ ಕೊಹ್ಲಿ, ಕುಂಬ್ಳೆ ನಡುವೆ ಭಿನ್ನಾಭಿಪ್ರಾಯಗಳಿವೆ ಎಂದೂ ಹೇಳಲಾಯಿತು. ಈಗ, ಕೊಹ್ಲಿ-ಕುಂಬ್ಳೆ ಭಿನ್ನಾಭಿಪ್ರಾಯ ವಿಚಾರ ಹೊಸತೇನಲ್ಲ ಎಂಬ ವಿಚಾರವೂ ಬಹಿರಂಗಗೊಂಡಿದೆ. (ಮುಂದೆ ಓದಿ...)
5. ಮೋದಿ, ಟ್ರಂಪ್ ಗಿಂತ ಪವರ್ ಫುಲ್ ಎಂದ ಸ್ಪೇನ್ ಜನತೆ!

ತಮ್ಮ ನಾಲ್ಕು ರಾಷ್ಟ್ರಗಳ ಪ್ರವಾಸದ ಹಿನ್ನೆಲೆಯಲ್ಲಿ ಇದೀಗ ಸ್ಪೇನ್ ಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಅಲ್ಲಿನ ಜನತೆ ಹೇಗೆ ಗುರುತಿಸಿದರು, ಮೋದಿ ಬಗ್ಗೆ ಆ ಜನರ ಅಭಿಪ್ರಾಯವೇನು ಎಂಬುದರ ಕುತೂಹಲ ಸುದ್ದಿಯಿದು. (ಮುಂದೆ ಓದಿ...)
6. ಚೆನ್ನೈನಲ್ಲಿ ಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಯಿತು ಇನ್ ಫೋಸಿಸ್ ಉದ್ಯೋಗಿ ಶವ

ಇಳಯರಾಜ ಅರುಣಾಚಲಂ ಎಂಬ ಮೂವತ್ತು ವರ್ಷದ ಇನ್ ಫೋಸಿಸ್ ಉದ್ಯೋಗಿಯ ಶವ ಇಲ್ಲಿನ ಮಹೀಂದ್ರಾ ವರ್ಲ್ಡ್ ನಲ್ಲಿರುವ ಇನ್ ಫೋಸಿಸ್ ಕಚೇರಿಯಲ್ಲಿ ಪತ್ತೆಯಾಗಿದೆ. ವಾಷ್ ರೂಮ್ ನಲ್ಲಿ ಶವ ಪತ್ತೆಯಾಗಿರುವುದಾಗಿ ವರದಿ ಆಗಿದ್ದು ಕೊಂಚ ಆಘಾತ ತಂದಿತು. (ಮುಂದೆ ಓದಿ...)
7. ಚಾಂಪಿಯನ್ಸ್ ಟ್ರೋಫಿ 2017: ಟೀಂ ಇಂಡಿಯಾ ಪಂದ್ಯಗಳಿಗೆ ಫುಲ್ ಗೈಡ್

ಜೂನ್ 1ರಿಂದ ಲಂಡನ್ ನಲ್ಲಿ ಶುರುವಾಗಲಿರುವ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ ತಂಡ ಆಡಲಿರುವ ಎಲ್ಲಾ ಪಂದ್ಯಗಳ ಸಂಪೂರ್ಣ ಮಾಹಿತಿ ಇಲ್ಲಿ ನಿಮಗಾಗಿ. (ಮುಂದೆ ಓದಿ...)
8. ಪರಂಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ, ಸಿದ್ದುಗೆ ಚುನಾವಣೆ ನೇತೃತ್ವ

2018ರ ಕರ್ನಾಟಕ ವಿಧಾನಸಭೆ ಚುನಾವಣೆಗಾಗಿ ತಂತ್ರಗಾರಿಕೆ ರಚಿಸಿರುವ ರಾಷ್ಟ್ರೀಯ ಕಾಂಗ್ರೆಸ್, ಕೆಪಿಸಿಸಿ ಅಧ್ಯಕ್ಷಗಿರಿಯಲ್ಲಿ ಪರಮೇಶ್ವರ್ ಅವರನ್ನು ಮುಂದುವರಿಸಲು ನಿಶ್ಚಯಿಸಿದೆ. (ಮುಂದೆ ಓದಿ...)
9. 2016ನೇ ಸಾಲಿನ UPSC ಫಲಿತಾಂಶ ಪ್ರಕಟ, ಕರ್ನಾಟಕದ ನಂದಿನಿ ಪ್ರಥಮ

2016ನೇ ಸಾಲಿನ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ ಸಿ) ಅಂತಿಮ ಪರೀಕ್ಷೆಯ ಫಲಿತಾಂಶ ಬುಧವಾರ ಪ್ರಕಟವಾಗಿದ್ದು, ಅದರಲ್ಲಿ ಕರ್ನಾಟಕದ ನಂದಿನಿ ಎಂಬುವರು ಪ್ರಥಮ ಸ್ಥಾನ ಗಳಿಸಿದ್ದು ಕನ್ನಡಿಗರಿಗೆ ನಿಜವಾಗಿಯೂ ಖುಷಿ ಮತ್ತು ಕುತೂಹಲಗಳನ್ನು ಏಕಕಾಲಕ್ಕೆ ತಂದುಕೊಟ್ಟ ಸುದ್ದಿ. (ಮುಂದೆ ಓದಿ...)
10. ಪ್ರೀತಿಸಿದ ಹುಡುಗಿಗಾಗಿ ಹಿಂದೂ ಧರ್ಮಕ್ಕೆ ಮತಾಂತರವಾದ ಮುಸ್ಲಿಂ ಯುವಕ

ಪ್ರೀತಿಸಿದ ಯುವತಿ ಯಶೋದ ಅವರನ್ನು ಮದುವೆಯಾಗುವ ಸಲುವಾಗಿ ಯಲ್ಲಾಪುರ ಪಟ್ಟಣ ನೂತನ ನಗರದ ಹಸನ್ ರಹೀಮ್ ಖಾನ್ ಎಂಬಾತ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಎಂಬ ವರದಿ ಎಲ್ಲರಲ್ಲೂ ಕುತೂಹಲ ಹುಟ್ಟಿಸಿತು. (ಮುಂದೆ ಓದಿ...)












Click it and Unblock the Notifications