ಪ್ರೀತಿಸಿದ ಹುಡುಗಿಗಾಗಿ ಹಿಂದೂ ಧರ್ಮಕ್ಕೆ ಮತಾಂತರವಾದ ಮುಸ್ಲಿಂ ಯುವಕ
ಯಲ್ಲಾಪುರ, ಮೇ 31: ಪ್ರೀತಿಸಿದ ಯುವತಿಯನ್ನು ಮದುವೆಯಾಗುವ ಸಲುವಾಗಿ ಮುಸ್ಲಿಂ ಯುವಕನೊಬ್ಬ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಯಲ್ಲಾಪುರ ಪಟ್ಟಣ ನೂತನ ನಗರದ ಹಸನ್ ರಹೀಮ್ ಖಾನ್ ಎಂಬಾತ ನಾಲ್ಕು ವರ್ಷಗಳಿಂದ ಯಶೋದಾಳನ್ನು ಪ್ರೀತಿಸುತ್ತಿದ್ದ. ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದರು.
ಮತಾಂತರ ಆದ ನಂತರ ರಾಹುಲ್ ಆರ್ಯ ಎಂದು ಹೆಸರು ಬದಲಾಯಿಸಿಕೊಂಡಿರುವ ಆತ, ಬುಧವಾರ ಇಲ್ಲಿನ ಈಶ್ವರ ದೇವಾಲಯದಲ್ಲಿ ಶಾಸ್ತ್ರೋಕ್ತವಾಗಿ ಯಶೋದಾಳನ್ನು ಮದುವೆಯಾಗಿದ್ದಾನೆ. ಮದುವೆ ಕಾರ್ಯಕ್ರಮದಲ್ಲಿ ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್, ಭಜರಂಗದಳದ ಮಂಗೇಶ್ ಕೈಸರೆ ಮತ್ತು ಯಶೋದಾಳ ಪೋಷಕರು ಹಾಜರಿದ್ದರು.[ಹಿಂದೂಗೆ ಮತಾಂತರವಾಗುತ್ತೇನೆ ಎಂದ ಮುಸ್ಲಿಂ ಮಹಿಳೆ]

ಇನ್ನು ಮಾಧ್ಯಮದ ಜತೆಗೆ ಮಾತನಾಡಿದ ರಾಹುಲ್ ಆರ್ಯ, ನಾವಿಬ್ಬರು ನಾಲ್ಕು ವರ್ಷದಿಂದ ಪರಸ್ಪರ ಪ್ರೀತಿ ಮಾಡುತ್ತಿದ್ದೆವು. ನನ್ನ ಪೋಷಕರ ಒಪ್ಪಿಗೆಯನ್ನು ಪಡೆದೇ ಸ್ವಂತ ಇಚ್ಛೆಯಿಂದ ಮತಾಂತರ ಆಗಿದ್ದೇನೆ. ಈ ವಿಚಾರದಲ್ಲಿ ನನಗೆ ಯಾವುದೇ ಒತ್ತಡ ಇರಲಿಲ್ಲ. ಈ ವಿಚಾರವಾಗಿ ಮುಂದೆ ಎದುರಾಗಬಹುದಾದ ಯಾವ ಸವಾಲನ್ನಾದರೂ ಎದುರಿಸುತ್ತೇನೆ ಎಂದಿದ್ದಾರೆ.
ಪ್ರೀತಿ ಸಲುವಾಗಿ ಎಷ್ಟೆಲ್ಲ ತ್ಯಾಗಗಳನ್ನು ನೋಡುತ್ತಿದ್ದೇವೆ! ಇವರಿಬ್ಬರ ಬದುಕು ಚೆನ್ನಾಗಿರಲಿ ಎಂದು ನಿಮ್ಮದೊಂದು ಹಾರೈಕೆಯಿರಲಿ.












Click it and Unblock the Notifications