2016ನೇ ಸಾಲಿನ UPSC ಫಲಿತಾಂಶ ಪ್ರಕಟ, ಕರ್ನಾಟಕದ ನಂದಿನಿ ಪ್ರಥಮ
ನವದೆಹಲಿ, ಮೇ 31 : 2016ನೇ ಸಾಲಿನ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ ಸಿ) ಅಂತಿಮ ಪರೀಕ್ಷೆಯ ಫಲಿತಾಂಶ ಬುಧವಾರ ಪ್ರಕಟವಾಗಿದೆ.
ಒಟ್ಟು 1099 ಅಭ್ಯರ್ಥಿಗಳು ಆಯ್ಕೆಯಾಗಿದ್ದು ಈ ಪೈಕಿ ಕರ್ನಾಟಕದ ನಂದಿನಿ ಕೆ ಆರ್ ಅವರು ಮೊದಲ ಸ್ಥಾನ ಪಡೆದಿದ್ದಾರೆ. ಇನ್ನು ಅನ್ಮೋಲ್ ಶೆರ್ ಸಿಂಗ್ ಬೇಡಿ ಎರಡನೇ ಸ್ಥಾನ ಹಾಗೂ ಗೋಪಾಲಕೃಷ್ಣ ರೋನಂಕಿ ಅವರು ಮೂರನೇ ಸ್ಥಾನ ಪಡೆದಿದ್ದಾರೆ.

ಒಟ್ಟು 1099 ಅಭ್ಯರ್ಥಿಗಳಲ್ಲಿ ಸಾಮಾನ್ಯ ವರ್ಗದಲ್ಲಿ 500, ಹಿಂದೂಳಿದ ವರ್ಗದಲ್ಲಿ 347 ಹಾಗೂ 163 ಪರಿಶಿಷ್ಟ ಜಾತಿ 89 ಪರಿಶಿಷ್ಟ ಪಂಗಡದಲ್ಲಿ ತೇರ್ಗಡೆಯಾಗಿದ್ದಾರೆ.
ದೇಶದ ಅತ್ಯುನ್ನತ ನಾಗರಿಕ ಸೇವೆಗಳಾದ ಐಎಎಸ್, ಐಎಫ್ಎಸ್ ಮತ್ತು ಐಪಿಎಸ್ ಸೇರಿದಂತೆ ಒಟ್ಟು 1099 ಹುದ್ದೆಗಳಿಗೆ ಯುಪಿಎಸ್ ಸಿ ಮೂರು ಹಂತಗಳ ಪರೀಕ್ಷೆ ನಡೆಸಿತ್ತು.












Click it and Unblock the Notifications