Panipuri: ಬಾಯಿ ಚಪ್ಪರಿಸಿ ತಿನ್ನೋ ಪಾನಿಪುರಿ ಬ್ಯಾನ್‌..?

ರೋಡ್‌ ರೋಡಲ್ಲಿ ಜನ ಪಾನಿಪುರಿ (ಗೋಲ್‌ ಗಪ್ಪಾ) ಅಂಗಡಿಗಳ ಹತ್ರ ಗುಂಪು ಸೇರಿರುತ್ತಾರೆ. ಕೈಯಲ್ಲಿ ಪ್ಲೇಟ್‌ ಹಿಡಿದು ಒಂದಾದ ಮೇಲೊಂದರೆಂತೆ ಭಯ್ಯಾ..ಒನ್‌ ಮೋರ್‌ ಎನ್ನುತ್ತಾ ಮುಗಿಬಿದ್ದು ತಿನ್ನೋದು ಸಂಜೆ ಟೈಮಲ್ಲಿ ಕಾಮನ್‌. ಅಷ್ಟರಮಟ್ಟಿಗೆ ಪಾನಿ ಪುರಿ ಹಲವರ ದೋಸ್ತಿ ಗಿಟ್ಟಿಸಿಕೊಂಡಿದೆ.

ಆದರೆ, ಸದ್ಯ ಪಾನಿಪುರಿ ಪ್ರಿಯರಿಗೊಂದು ಆಘಾತಕಾರಿ ವಿಚಾರ ಹೊರಬಿದ್ದಿದೆ. ಶೀಘ್ರದಲ್ಲೇ ರಾಜ್ಯದಲ್ಲಿ ಪಾನಿಪುರಿ ಬ್ಯಾನ್‌ ಆಗಲಿದೆ ಎಂಬ ವಿಚಾರ ಎಲ್ಲೆಡೆ ಹರಿದಾಡುತ್ತಿದೆ. ಪಾನಿಪುರಿಯ ರುಚಿ ಹೆಚ್ಚಾಗಲು ಕೆಲವರು ಆರೋಗ್ಯಕ್ಕೆ ಮಾರಕವಾದ ಕೆಮಿಕಲ್‌ಗಳನ್ನು ಬಳಸುತ್ತಿದ್ದಾರೆ ಎನ್ನುವ ಆರೋಪವಿದೆ.

Panipuri Is Likely To Be Banned In Karnataka Soon

ಈ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲೂ ಕೆಲ ಫೋಟೋ, ವಿಡಿಯೋಗಳು ವೈರಲ್‌ ಆಗಿದ್ದವು. ಇದರ ಬೆನ್ನಲ್ಲೇ ಆಹಾರ ಇಲಾಖೆಯು ಪಾನಿಪುರಿ ಅಂಗಡಿಗಳು ಹಾಗೂ ಅವವುಗಳ ತಯಾರಕರ ಮೇಲೆ ನಿಗಾ ಇಟ್ಟಿದೆ ಎಂದು ಹೇಳಲಾಗುತ್ತಿದೆ.

ಅಲ್ಲದೆ ಆಹಾರ ಇಲಾಖೆ ಅಧಿಕಾರಿಗಳು ಪಾನಿಪುರಿ ಅಂಗಡಿಗಳ ಮೇಲೆ ದಾಳಿ ನಡೆಸಿ, ತಪಾಸಣೆ ಕೂಡ ನಡೆಸಲಾರಂಭಿಸಿದ್ದಾರೆ ಎನ್ನಲಾಗಿದೆ. ಮುಖ್ಯವಾಗಿ ಫುಟ್‌ಪಾತ್‌ಗಳಲ್ಲಿ ಮಾರುತ್ತಿರುವ ಪಾನಿಪುರಿ ಮೇಲೆ ಹದ್ದಿನಕಣ್ಣಿಟ್ಟಿದ್ದಾರೆ.

Panipuri Is Likely To Be Banned In Karnataka Soon

ಹಾಗಾಗಿ ಹೊರಗೆ ಮಾರಾಟವಾಗುತ್ತಿರುವ ಪಾನಿಪುರಿ ಮಾದರಿಗಳನ್ನು ಸಂಗ್ರಹಿಸಿ ಗುಣಮಟ್ಟ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಈಗಾಗಲೇ ರಾಜ್ಯಾದ್ಯಂತ ನೂರಾರು ಕಡೆ ಪಾನಿಪುರಿ ಸ್ಯಾಂಪಲ್‌ಗಳನ್ನು ಅಧಿಕಾರಿಗಳು ಕಲೆಕ್ಟ್‌ ಮಾಡಿದ್ದಾರೆ.

ಪಾನಿಪುರಿಗೆ ಬಳಕೆ ಮಾಡುವ ಪುರಿಯನ್ನು ಹೇಗೆ ತಯಾರು ಮಾಡಲಾಗುತ್ತಿದೆ? ಅದಕ್ಕೆ ಏನೆಲ್ಲ ಬಳಕೆ ಮಾಡಲಾಗುತ್ತಿದೆ? ಇದು ಆರೋಗ್ಯಕ್ಕೆ ಒಳ್ಳೆಯದಾ? ಅಥವಾ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಾ? ಎಂಬ ಬಗ್ಗೆ ಗುಣಮಟ್ಟ ಪರೀಕ್ಷೆಗೆ ಒಳಪಡಿಸುತ್ತಿದ್ದಾರಂತೆ.

Panipuri Is Likely To Be Banned In Karnataka Soon

ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಆಹಾರ ಇಲಾಖೆಯು ಪಾನಿಪುರಿ ತಯಾರಿಕಾ ಘಟಕಗಳ ಮೇಲೆ ಸಮರ ಸಾರಿದೆ. ಒಂದು ವೇಳೆ ಗುಣಮಟ್ಟ ಪರೀಕ್ಷೆಯಲ್ಲಿ ಮಾರಕ ಅಂಶಗಳು ಪತ್ತೆಯಾದಲ್ಲಿ, ರಾಜ್ಯದಲ್ಲಿ ಪಾನಿಪುರಿ ನಿಷೇಧಿಸಲು ಸಹ ನಿರ್ಧರಿಸುವುದಾಗಿ ತಿಳಿದುಬಂದಿದೆ.

ಪಾನಿಪುರಿ ರುಚಿ ಮತ್ತಷ್ಟು ಹೆಚ್ಚಾಗಲಿ ಎಂದು ಅದಕ್ಕೆ ಯೂರಿಯಾ, ಹಾರ್ಪಿಕ್‌ ಸೇರಿದಂತೆ ಹಲವು ರಾಸಾಯನಿಕಗಳನ್ನು ಬಳಸುತ್ತಿದ್ದಾರೆ ಎಂಬ ಆರೋಪವಿದ್ದು, ಇದನ್ನು ಬಾಯಿ ಚಪ್ಪರಿಸಿ ತಿನ್ನುವ ಆಹಾರಪ್ರಿಯರು ದೀರ್ಘಕಾಲದ ಅನಾರೋಗ್ಯಕ್ಕೆ ತುತ್ತಾಗುತ್ತಾರೆ ಎಂದು ಹೇಳಲಾಗಿದೆ.

ಬೇರೆ ರಾಜ್ಯಗಳಲ್ಲಿ ಈಗಾಗಲೇ ಪಾನಿಪುರಿ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದೇ ಹೇಳಲಾಗಿದೆ. ಕೆಲವೆಡೆ ಕೆಮಿಕಲ್‌ ಬಳಸಿರುವುದು ಕೂಡ ಪತ್ತೆಯಾಗಿದೆ. ಇದರ ಬೆನ್ನಲ್ಲೇ ರಾಜ್ಯದಲ್ಲೂ ಆಹಾರ ಇಲಾಖೆ ಪಾನಿಪುರಿ ಮೇಲೆ ನಿಗಾ ಇಟ್ಟಿದೆ. ಪಾನಿಪುರಿಯ ಗುಣಮಟ್ಟ ಪರಿಶೀಲಿಸಿ ಮುಂದಿನ ಕ್ರಮ ತೆಗೆದುಕೊಳ್ಳಲು ನಿರ್ಧರಿಸಿದೆ.

ಈಗಾಗಲೇ ಗೋಬಿ ಮಂಚೂರಿ ಹಾಗೂ ಕಬಾಬ್‌ನಲ್ಲಿ ಕೃತಕ ಬಣ್ಣ ಬಳಕೆ ಮಾಡಲಾಗುತ್ತಿದೆ ಎಂದು ಆಹಾರ ಇಲಾಖೆ ಮಹತ್ವದ ನಿರ್ಧಾರ ತೆಗೆದುಕೊಂಡಿತ್ತು. ಅದರಂತೆ ರಾಜ್ಯದಲ್ಲಿ ಕಬಾಬ್‌ ಹಾಗೂ ಗೋಬಿ ಮಂಚೂರಿಯಲ್ಲಿ ಮಾರಕ ಬಣ್ಣ ಬಳಸಬಾರದು ಎಂದು ಖಡಕ್‌ ಆದೇಶ ಕೂಡ ಹೊರಡಿಸಿತ್ತು. ಇದರಿಂದ ರಾಜ್ಯದಲ್ಲಿ ಕಬಾಬ್‌ ಹಾಗೂ ಗೋಬಿ ಮಂಚೂರಿ ಬಣ್ಣಗಳು ಕೂಡ ಬದಲಾಗಿವೆ. ಈಗ ಪಾನಿಪುರಿ ಕೂಡ ಇದೇ ಸಾಲಿಗೆ ಬರುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+