ಪೊಲೀಸ್ ಠಾಣೆಯಲ್ಲಿ ನಡೆಯಿತು ಕೋಳಿಗಳ ಹರಾಜು!

ಉಡುಪಿ, ಜುಲೈ 22 : ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಜನವೋ ಜನ. ಕೆಲವರು ಹರಾಜು ನೋಡಲು ಬಂದ್ದದ್ದರೆ, ಮತ್ತೆ ಕೆಲವರು ವಸ್ತುಗಳನ್ನು ಕೊಂಡಕೊಳ್ಳಲು ಬಂದಿದ್ದರು. ಇಷ್ಟಕ್ಕೂ ಪೊಲೀಸ್ ಠಾಣೆಯಲ್ಲಿ ನಡೆದಿದ್ದು ಕೋಳಿಗಳ ಹರಾಜು.

ಸೋಮವಾರ ಸಾಂತೂರು ಕೊಪ್ಲದಲ್ಲಿ ನಡೆಯುತ್ತಿದ್ದ ಕೋಳಿ ಅಂಕದ ಮೇಲೆ ದಾಳಿ ನಡೆಸಿದ್ದ ಪೊಲೀಸರು ಅಲ್ಲಿ ವಶಪಡಿಸಿಕೊಂಡಿದ್ದ ಕೋಳಿ (ಹುಂಜ)ಗಳನ್ನು ಮಂಗಳವಾರ ಪಡುಬಿದ್ರಿ ಪೊಲೀಸರು ಠಾಣೆಯ ಆವರಣದಲ್ಲಿ ಬಹಿರಂಗ ಹರಾಜು ಹಾಕಿದರು. [ಯುಪಿ ಪೊಲೀಸರಿಗೆ ಕೋಳಿ ಹಿಡಿಯುವ ಕಾಯಕ!]

udupi

ಪಡುಬಿದ್ರಿ ಪೊಲೀಸ್‌ ಠಾಣಾ ಪ್ರಭಾರಿ ಎಎಸ್‌ಐ ರಮೇಶ್‌ ಅವರ ನೇತೃತ್ವದಲ್ಲಿ ಮಂಗಳವಾರ ಸಂಜೆ 5 ಗಂಟೆಗೆ ಆರಂಭವಾದ 35 ಕೋಳಿಗಳ ಹರಾಜಯ ಪ್ರಕ್ರಿಯೆ ರಾತ್ರಿ 7 ಗಂಟೆಯವರೆಗೂ ನಡೆಯಿತು. ಕೋಳಿಗಳ ಹರಾಜಿನಿಂದ 1 ಲಕ್ಷಕ್ಕೂ ಅಧಿಕ ಹಣವನ್ನು ಸಂಗ್ರಹಣೆ ಮಾಡಲಾಗಿದೆ ಎಂಬ ಮಾಹಿತಿ ಇದೆ. [ಕೋಳಿ ಮೊದಲೋ ಮೊಟ್ಟೆ ಮೊದಲೋ : ಸಂಶೋಧನೆ]

ಪೊಲೀಸ್‌ ಠಾಣೆಯಲ್ಲಿ ಕೋಳಿ ಹರಾಜು ಹಾಕಲಾಗುತ್ತದೆ ಎಂಬ ಸುದ್ದಿ ಕೇಳಿಯೇ ನೂರಾರು ಮಂದಿ ಹರಾಜು ವೀಕ್ಷಿಸಲು ಆಗಮಿಸಿದ್ದರು. ಕೋಳಿ ಅಂಕಗಳಲ್ಲಿ ಭಾಗವಹಿಸಿದ್ದ ಈ ಕೋಳಿಗಳನ್ನು ಕೊಂಡುಕೊಂಡು ಪುನಃ ಅಂಕಕ್ಕೆ ಕಟ್ಟಲು ಹಲವರು ಆಗಮಿಸಿದ್ದರು.

ಮತ್ತೆ ಕೆಲವರು ಅಂಕದ ಕೋಳಿಗಳನ್ನು ಖರೀದಿಸಿ ಅದರ ರುಚಿ ಸವಿಯುವ ಉದ್ದೇಶದಿಂದ ಹರಾಜಿಗೆ ಆಗಮಿಸಿ ಕೋಳಿಗಳಿಗೆ ಬೆಲೆ ಕಟ್ಟುತ್ತಿದ್ದರು. ಸುಮಾರು ಎರಡು ಗಂಟೆ ನಡೆದ ಭಾರೀ ಪೈಪೋಟಿಯ ಬಳಿ ಎಲ್ಲಾ 35 ಕೋಳಿಗಳು ಜನರ ಪಾಲಾದವು.

ಬಂಧಿತರಿಗೆ ಜಾಮೀನು : ಸಾಂತೂರು ಕೊಪ್ಲದಲ್ಲಿ ನಡೆಯುತ್ತಿದ್ದ ಕೋಳಿ ಅಂಕದ ಮೇಲೆ ದಾಳಿ ನಡೆಸಿದ ಪೊಲೀಸರು 35 ಕೋಳಿಗಳನ್ನು ವಶಪಡಿಸಿಕೊಂಡು 37 ಜನರನ್ನು ಮತ್ತು 20 ವಾಹನಗಳನ್ನು ವಶಕ್ಕೆ ಪಡೆದಿದ್ದರು. ಬಂಧಿತರಿಗೆ ಪೊಲೀಸ್ ಠಾಣೆಯಲ್ಲೇ ಜಾಮೀನು ನೀಡಿ ಬಿಡುಗಡೆಗೊಳಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+