Tulu controversy: ತಪ್ಪು ಕನ್ನಡ ಬೆಂಬಲಿಸಿದ್ದೇ ನಮ್ಮ ತಪ್ಪು ಎಂದ ಕನ್ನಡಿಗರು!
Tulu-kannada controversy: ಆಕೆ ವಿಡಿಯೋ ಮಾಡಿದ್ದು ಕನ್ನಡದಲ್ಲಿ. ಫೇಮಸ್ ಆಗಿದ್ದೂ ಕನ್ನಡದಲ್ಲಿ. ಆದರೆ, ಕನ್ನಡದ ಬಗ್ಗೆಯೇ ಆಕೆ ಮಾತನಾಡಿರುವ ಮಾತು ಇದೀಗ ಕನ್ನಡಿಗರನ್ನು ಕೆರಳಿಸಿದೆ. ಆಕೆಯ ತಪ್ಪುಗಳನ್ನು ಹೋಗ್ಲಿ ಬಿಡು, ಮೊದಲ ಪ್ರಯತ್ನ ಎಂದು ಕೈ ಹಿಡಿದಿದ್ದ ಕನ್ನಡಿಗರು ಅವಳ ಈ ವರ್ತನೆಯನ್ನು ನೋಡಿ, ಚೀ ಥೂ ಅಂತ ಬೈಯುತ್ತಿದ್ದಾರೆ. ಕನ್ನಡಿಗರು ಎಲ್ಲಾ ಭಾಷಿಕರೊಂದಿಗೂ ಸೌಹಾರ್ದಯುತವಾಗಿಯೇ ನಡೆದುಕೊಳ್ಳುತ್ತಾರೆ. ಕನ್ನಡಿಗರ ಮೇಲೆ ದಬ್ಬಾಳಿಕೆ ಮಾಡಲು ಬಂದರೆ ಮಾತ್ರ ಅವರು ಸಹಿಸಿಕೊಳ್ಳುವುದಿಲ್ಲ. ಕನ್ನಡಿಗರನ್ನು ಕೆಣಕುವ ಕೆಲಸವನ್ನು ಮಂಗಳೂರು ಮೂಲದ ಹುಡುಗಿಯೊಬ್ಬಳು ಮಾಡಿದ್ದಾಳೆ.
ತಪ್ಪು ಕನ್ನಡ ಬೆಂಬಲಿಸಿ ತಪ್ಪು ಮಾಡಿದ್ವಿ
ಆಕೆ ಯೂಟ್ಯೂಬ್‌ನಲ್ಲಿ ತಪ್ಪು ಕನ್ನಡವನ್ನು ಮಾತನಾಡಿಯೇ ಫೇಮಸ್ ಆಗಿದ್ದು. ಆಕೆಯ ಕಂಟೆಂಟ್‌ಗಳಲ್ಲಿ ವಿಷಯ ಇರುತ್ತಿರಲಿಲ್ಲ. ಆಕೆ ಟ್ರೋಲ್‌ಗೆ ಒಳಗಾಗಿಯೇ ಹೆಚ್ಚು ಮುನ್ನೆಲೆಗೆ ಬಂದಿದ್ದಳ್ಳು ಕನ್ನಡಿಗರು ಮೊದಲ ಮೊದಲು ಆಕೆಯ ತಪ್ಪುಗಳನ್ನು ಕ್ಷಮಿಸಿದ್ದರು. ನೀವು ಸಹ ಈ ಮಂಗಳೂರು ಮೂಲದ ಯೂಟ್ಯೂಬರ್ ತುಳುವೆದಿ ರಕ್ಷಿತಾಳ ವಿಡಿಯೋಗಳನ್ನು ನೋಡಿರಬಹುದು. ತಪ್ಪು ತಪ್ಪು ಕನ್ನಡ, ಅರ್ಥವಿಲ್ಲದ ಭಾಷೆಗಳಿಂದಲೇ ಈಕೆಯ ವಿಡಿಯೋಗಳು ವೈರಲ್ ಆಗುತ್ತಿದ್ದವು. ತಪ್ಪು ಕನ್ನಡವನ್ನು (ಉಚ್ಛಾರಣೆಯಿಂದ ಅಲ್ಲ ಅರ್ಥದಿಂದ) ಮಾತನಾಡಿ ವಿಡಿಯೋ ಮಾಡಿದರೂ, ಕರ್ನಾಟಕದ ಹಲವು ಕನ್ನಡಿಗರು ಇರಲಿ ಬಿಡಿ ಆಕೆ ಈಗಷ್ಟೇ ಕನ್ನಡ ಕಲಿಯುತ್ತಿದ್ದಾಳೆ. ಮುಂದಿನ ದಿನಗಳಲ್ಲಿ ಒಳ್ಳೆಯ ಕನ್ನಡ ಮಾತನಾಡುತ್ತಾಳೆ ಎಂದು ಬೆಂಬಲಿಸಿದ್ದರು. ಆದರೆ, ಕನ್ನಡಿಗರ ನಿರೀಕ್ಷೆಯನ್ನು ಈ ಹುಡುಗಿ ಸುಳ್ಳು ಮಾಡಿದ್ದು. ತಪ್ಪು ಕನ್ನಡವನ್ನು ಬೆಂಬಲಿಸಿದ ಕನ್ನಡಿಗರು ಈಗ ವಿಷಾದ ವ್ಯಕ್ತಪಡಿಸುತ್ತಿದ್ದಾರೆ.

ಮುಂಬೈಯಿಂದ ಬಂದು ಕನ್ನಡ ಕಲಿತಿದ್ದಾಳೆ ಇರ್ಲಿ ಬಿಡಿ
ಆಕೆ ಮುಂಬೈನಿಂದ ಬಂದಿದ್ದಾಳೆ. ಮನೆಯಲ್ಲಿ ತುಳು ಮಾತನಾಡುತ್ತಾರೆ. ಈಗಷ್ಟೇ ಕನ್ನಡ ಕಲಿತಾ ಇದ್ದಾಳೆ ಎಂದು ಕೆಲವರು ಹೇಳುತ್ತಿದ್ದರು. ಆಕೆಯ ತಪ್ಪು ತಪ್ಪು ಕನ್ನಡದ ವಿಡಿಯೋಗಳಿಗೆ ಟ್ರೋಲ್ ಆದಾಗಲೂ ಜನ ಬೆಂಬಲಿಸಿದ್ದರು. ಆದರೆ, ಇದನ್ನು ನಾವು ಸಹಿಸಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ. ಆಕೆ ಈಚೆಗೆ ಮುದ್ದೆ ತಿನ್ನುವ ವಿಡಿಯೋವನ್ನು ವಿಚಿತ್ರವಾಗಿ ಪ್ರಯೋಗ ಮಾಡಿದ್ದಳು. ಇದನ್ನು ಡಿಜಿಟಲ್ ಕ್ರಿಯೇಟರ್ ಆಗಿರುವ ಕಿರಿಕ್ ರವಿ ಎನ್ನುವವರು ಕೊಂಟರ್ ವಿಡಿಯೋ ಮೂಲಕ ಪ್ರಶ್ನಿಸಿದ್ದರು. ಆಗಲೂ ಸಹ ಹಲವರು ಆಕೆಗೆ ಬೆಂಬಲ ಸೂಚಿಸಿದ್ದರು. ಇನ್ನೂ ಕೆಲವರು ರವಿ ಎನ್ನುವವರಿಗೆ ಬೆದರಿಕೆಯನ್ನೂ ಹಾಕಿದ್ರಂತೆ. ಇದೀಗ ವಿಡಿಯೋವೊಂದರ ಮೂಲಕ ರವಿ ಅವರೇ ಈ ವಿಷಯವನ್ನು ಬಹಿರಂಗಪಡಿಸಿದ್ದು. ಈಗ ನೀವೇ ಹೇಳಿ, ಆಕೆಯ ಕನ್ನಡ ಅಭಿಮಾನಕ್ಕೆ ರಿಯಾಕ್ಟ್ ಮಾಡಿ ಎಂದಿದ್ದಾರೆ.
ಆಕೆ ವಿಡಿಯೋದಲ್ಲಿ ಹೇಳಿರುವುದೇನು?
ಕರ್ನಾಟಕದಲ್ಲಿ ಕನ್ನಡ ಮಾತ್ರ ಮಾತೃ ಭಾಷೆ. ಆದರೆ, ಮಂಗಳೂರಿನಲ್ಲಿ ತುಳು ಮಾತೃ ಭಾಷೆ ಗೊತ್ತಾಯ್ತಾ ಎಂದು ತುಳುವೆದಿ ರಕ್ಷಿತಾ ಹೇಳೀದ್ದಾಳೆ. ಇದಕ್ಕೆ ಕನ್ನಡಿಗರಿಂದ ಆಕ್ರೋಶ ವ್ಯಕ್ತವಾಗಿದೆ. ಈಕೆ ಇಲ್ಲಿಯವರೆಗೂ ವಿಡಿಯೋ ಮಾಡಿ ಫೇಮಸ್ ಆಗಿದ್ದೇ ಕನ್ನಡದಿಂದ ಈಗ ಕನ್ನಡದ ಬಗ್ಗೆಯೇ ಕೊಂಡು ನುಡಿದಿದ್ದಾಳೆ. ಮಂಗಳೂರಿನಲ್ಲಿ ಎಲ್ಲಾ ತುಳು ಮಾತಾಡುತ್ತಾರೆ. ಮಂಗಳೂರು, ಉಡುಪಿಯಲ್ಲಿ ಯಾರೂ ಕನ್ನಡ ಮಾತನಾಡಲ್ಲ. ಎಲ್ಲರೂ ತುಳು ಮಾತಾಡ್ತಾರೆ ಗೊತ್ತಾಯಿತಾ? ಎಂದು ಆಟೋ ಚಾಲಕರೊಬ್ಬರಿಗೆ ಹೇಳಿರುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ನೋಡಿದ ಮೇಲೆ ಜನ ತಪ್ಪು ಮಾಡಿ ಬಿಟ್ವಿ. ಆಕೆ ತಪ್ಪು ಕನ್ನಡ ಮಾತನಾಡಿದಾಗಲೇ ನಾವು ತಿದಿದ್ದರೆ, ಇಂದು ಆಕೆ ಕನ್ನಡದ ಬಗ್ಗೆಯೇ ಈ ರೀತಿ ವ್ಯಂಗ್ಯವಾಗಿ ಮಾತನಾಡುತ್ತಿರಲಿಲ್ಲ ಎಂದು ಹೇಳಿದ್ದಾರೆ.












Click it and Unblock the Notifications