ಆಪರೇಷನ್ ಕಮಲ ಬಿಜೆಪಿ ಹರಡಿಸುತ್ತಿರುವ ವೈರಸ್!
ಬೆಂಗಳೂರು, ಜುಲೈ 14 : 'ಆಪರೇಷನ್ ಕಮಲ' ಎಂಬ ಹೆಸರು ಕೇಳುತ್ತಿದ್ದಂತೆ ನೆನೆಪಿಗೆ ಬರುವುದು ಕರ್ನಾಟಕದ ರಾಜಕೀಯ. ಈಗ ಇದು ಬೇರೆ ರಾಜ್ಯಗಳಿಗೆ ಹಬ್ಬಿದೆ. 'ಇಂತಹ ವೈರಸ್ ಹರಡುತ್ತಿರುವುದು ಬಿಜೆಪಿಯಿಂದ' ಎಂದು ಕಾಂಗ್ರೆಸ್ ಆರೋಪಿಸಿದೆ.
ಕರ್ನಾಟಕ ಕಾಂಗ್ರೆಸ್ ಭಾನುವಾರ ಟ್ವೀಟ್ ಮಾಡಿದ್ದು 'ಆಪರೇಷನ್ ಕಮಲ'ದ ವಿರುದ್ಧ ಟೀಕೆ ಮಾಡಿದೆ. 'ಈ ರೋಗ ದೇಶವನ್ನು ನಾಶ ಮಾಡುವ ಮುನ್ನ ಅದನ್ನು ತೊಲಗಿಸಬೇಕಿದೆ' ಎಂದು ಹೇಳಿದೆ.
'ಆಪರೇಷನ್ ಕಮಲ ಇದು ಅರುಣಾಚಲ ಪ್ರದೇಶದಿಂದ ಕರ್ನಾಟಕಕ್ಕೆ ಹರಡಿ ಅಲ್ಲಿಂದ ಗೋವಾ, ಬಂಗಾಳಕ್ಕೂ ವಿಸ್ತರಿಸಿದೆ' ಎಂದು ಕಾಂಗ್ರೆಸ್ ಟ್ವೀಟ್‌ನಲ್ಲಿ ದೂರಿದೆ.

ಕಾಂಗ್ರೆಸ್ ಟ್ವೀಟ್ ಏನು? :
ಆಪರೇಷನ್ ಕಮಲ ಎಂಬುದು @BJP4India ಎಂಬ ವೈರಸ್ ನಿಂದ ಹರಡಿ ಪ್ರಜಾಪ್ರಭುತ್ವವನ್ನು ಹಾಳು ಮಾಡುತ್ತಿರುವ ಒಂದು ಗಂಭೀರವಾದ ಸಾಂಕ್ರಾಮಿಕ ರೋಗ. ಇದು ಅರುಣಾಚಲ ಪ್ರದೇಶದಿಂದ ಕರ್ನಾಟಕಕ್ಕೆ ಹರಡಿ ಅಲ್ಲಿಂದ ಗೋವಾ, ಬಂಗಾಳಕ್ಕೂ ವಿಸ್ತರಿಸಿದೆ. ಈ ರೋಗವು ಪೂರ್ಣವಾಗಿ ವ್ಯಾಪಿಸಿ ಈ ದೇಶವನ್ನು ನಾಶ ಮಾಡುವ ಮುನ್ನ ಅದನ್ನು ತೊಲಗಿಸಲೇಬೇಕಿದೆ !













Click it and Unblock the Notifications