SBI: 5199 ಕ್ಲರ್ಕ್ ಅಸಿಸ್ಟಂಟ್ ಹುದ್ದೆಗಳು ಖಾಲಿ
ಬೆಂಗಳೂರು, ಜೂನ್ 4: ದೇಶದ ಅತಿ ದೊಡ್ಡ ಸರಕಾರಿ ಬ್ಯಾಂಕ್ ಎನಿಸಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 5199 ಅಸಿಸ್ಟಂಟ್ ಹುದ್ದೆಗಳು ಖಾಲಿ ಇವೆ. ಇವುಗಳನ್ನು ಭರ್ತಿ ಮಾಡಲು ಆನ್ ಲೈನ್ ಮೂಲಕ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಇದರಲ್ಲಿ ಕರ್ನಾಟಕದಲ್ಲಿ 259 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಪರೀಕ್ಷಾ ಕೇಂದ್ರಗಳು ಬೆಂಗಳೂರು, ಮೈಸೂರು, ಮಂಗಳೂರು, ಉಡುಪಿ, ಬೆಳಗಾವಿ, ಬೀದರ್, ಗುಲ್ಬರ್ಗ, ಹುಬ್ಬಳ್ಳಿ ಮತ್ತು ಶಿವಮೊಗ್ಗದಲ್ಲಿ ಇರುತ್ತವೆ.

ವಿದ್ಯಾರ್ಹತೆ : ಯಾವುದೇ ಪದವಿ
ವಯೋಮಿತಿ : ದಿನಾಂಕ 01-05-2014ಕ್ಕೆ ಅನ್ವಯಿಸುವಂತೆ ಕನಿಷ್ಟ 20 ವರ್ಷಗಳಾಗಿರಬೇಕು. ಗರಿಷ್ಟ 28 ವರ್ಷಗಳೊಳಗಿರಬೇಕು (ನಿಯಮಗಳನುಸಾರ ವಯೋಮಿತಿಯಲ್ಲಿ ಸಡಿಲಿಕೆಯಿರುತ್ತದೆ)
ಅರ್ಜಿ ಶುಲ್ಕ : ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ರೂ. 450 ಹಾಗೂ SC/ST ಅಭ್ಯರ್ಥಿಗಳಿಗೆ ರೂ. 100
ಅರ್ಜಿ ಸಲ್ಲಿಸುವ ವಿಧಾನ: ಅರ್ಹ ಅಭ್ಯರ್ಥಿಗಳು ದಿನಾಂಕ 14-06-2014ರ ವರೆಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು (ಒನ್ಇಂಡಿಯಾದಿಂದ ಉದ್ಯೋಗ ಹುಡುಕಾಟ ಸೇವೆ)
ಆಯ್ಕೆ ವಿಧಾನ : ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ. ಲಿಖಿತ ಪರಿಕ್ಷಾ ದಿನಾಂಕ : 2014ರ ಜುಲೈ ಅಥವಾ ಆಗಸ್ಟಿನಲ್ಲಿ
ಹೆಚ್ಚಿವ ವಿವರಗಳಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕೃತ ವೆಬ್ ಸೈಟ್ statebankofindia.com ಅನ್ನು ನೋಡಬಹುದು












Click it and Unblock the Notifications