ಅರ್ಧ ಶತಕ ಬಾರಿಸಿದ ಈರುಳ್ಳಿ, ಟೊಮೆಟೋ ಬೆಲೆ!
ಬೆಂಗಳೂರು, ನವೆಂಬರ್ 17 : ಅಡುಗೆ ಮನೆಯಲ್ಲಿ ಸದಾ ಕಾಣಿಸಿಕೊಳ್ಳುವ ತರಕಾರಿ ಈರುಳ್ಳಿ, ಟೊಮೆಟೋ. ಆದರೆ, ಈಗ ಈ ಎರಡೂ ತರಕಾರಿಗಳು ಜನರಿಂದ ದೂರವಾಗುತ್ತಿವೆ. ಅದಕ್ಕೆ ಕಾರಣ ದರ ಏರಿಕೆ.
ಈರುಳ್ಳಿ ಮತ್ತು ಟೊಮೆಟೋ ದರಗಳು ಅರ್ಧ ಶತಕವನ್ನು ದಾಟಿವೆ. ಬೆಲೆಗಳು ಏರಿಕೆಯಾಗುತ್ತಲೇ ಇದ್ದು, ಮಾರುಕಟ್ಟೆಯಲ್ಲಿ ಅತ್ಯಧಿಕ ಬೇಡಿಕೆಯಲ್ಲಿವೆ. ತರಕಾರಿಗಳ ಪೂರೈಕೆಯಲ್ಲಿ ಆಗಿರುವ ವ್ಯತ್ಯಾಸವೇ ಇದಕ್ಕೆ ಕಾರಣವಾಗಿದೆ.

ಬೆಂಗಳೂರಿನಲ್ಲಿನ ಹಾಪ್ ಕಾಮ್ಸ್‌ಗಳಲ್ಲಿ ಇಂದಿನ ಈರುಳ್ಳಿ ದರ ಕೆಜಿಗೆ 56 ರೂ., ಟೊಮೆಟೋ 58 ರೂ.. ಮಹಾರಾಷ್ಟ್ರ ಮತ್ತು ಉತ್ತರ ಕರ್ನಾಟಕ ಭಾಗದಿಂದ ಈರುಳ್ಳಿ ಮಾರುಕಟ್ಟೆಗೆ ಬರುತ್ತಿಲ್ಲ. ಆದ್ದರಿಂದ, ದರ ಅರ್ಧ ಶತಕ ದಾಟಿದೆ.

ಮೈಸೂರು ನಗರದಲ್ಲಿ ಸಾಮಾನ್ಯ ದರ್ಜೆಯ ಈರುಳ್ಳಿ ಬೆಲೆ 52 ರಿಂದ 60 ರೂ. ಇದೆ. ದೊಡ್ಡ ಗಾತ್ರದ ಈರುಳ್ಳಿ ಬೆಲೆ 56 ರಿಂದ 62ರ ತನಕವಿದೆ. ಹೈಬ್ರಿಡ್ ಟೊಮೆಟೋ 55, ನಾಟಿ ಟೊಮೆಟೋ ಬೆಲೆ 40 ರಿಂದ 45 ಇದೆ.












Click it and Unblock the Notifications