Tour Package: ಹುಬ್ಬಳ್ಳಿ-ಜೋಗಫಾಲ್ಸ್‌ಗೆ ವಿಶೇಷ ಬಸ್ ಕಾರ್ಯಾಚರಣೆ: ಟಿಕೆಟ್ ದರ, ವೇಳಾಪಟ್ಟಿ
Jog Falls Tour Package: ಉತ್ತರ ಕರ್ನಾಟಕದ ಜಿಲ್ಲೆಗಳು ಸೇರಿದಂತೆ ಅನೇಕ ಭಾಗಗಳಲ್ಲಿ ಸಾರಿಗೆ ಸೇವೆ ನೀಡುತ್ತಿರುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ವತಿಯಿಂದ ವಿಶೇಷ ಪ್ರವಾಸ ಪ್ಯಾಕೇಜ್ ಘೋಷಣೆ ಆಗಿದೆ. ಪ್ರತಿ ಭಾನುವಾರ ಹಾಗೂ ರಜೆ ದಿನಗಳಂದು ವಿಶೇಷ ಸಾರಿಗೆ ಸೌಲಭ್ಯ ಇರಲಿದ್ದು, ಸಾರ್ವಜನಿಕ ಪ್ರಯಾಣಿಕರು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಎಲ್ಲಿಂದ, ಸಮಯ ಮತ್ತು ವೇಳಾಪಟ್ಟಿ ಪೂರ್ಣ ವಿವರ ಇಲ್ಲಿದೆ.
ರಾಜ್ಯದ ವಾಣಿಜ್ಯ ನಗರಿ ಹುಬ್ಬಳ್ಳಿಯಿಂದ ಶಿವಮೊಗ್ಗ ಜಿಲ್ಲೆಯ ವಿಶ್ವ ವಿಖ್ಯಾತ ಜೋಗ ಜಲಪಾತಕ್ಕೆ NWKRTC ವತಿಯಿಂದ ವಿಶೇಷ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ಮುಂಗಾರು ಮಳೆ ಆಗುತ್ತಿದ್ದಂತೆ ದಟ್ಟ ಹಸಿರ ಹೊದಿಕೆ ಮಧ್ಯ ಹಾಲಿನ ನೊರೆಯಂತೆ ಧುಮ್ಮಿಕ್ಕುವ ಜೋಗ ಜಲಪಾತ ನೋಡುವುದು ಬಲು ಸೊಬಲು. ಇಂತಹ ಪಕೃತಿ ಸೌಂದರ್ಯ ಸವಿಯಲು ನಾನಾ ಮೂಲೆಗಳಿಂದ ಜನರು ಬರುತ್ತಾರೆ. ಉತ್ತರ ಕರ್ನಾಟಕದವರು ಮುಂಗಾರು ಮಳೆಗಾಲದಲ್ಲಿ ತೆರಳುತ್ತಾರೆ.

ವೇಗಧೂತ ಮತ್ತು ರಾಜಹಂಸ ಬಸ್ ವ್ಯವಸ್ಥೆ
ಹುಬ್ಬಳ್ಳಿ, ಧಾರವಾಡ, ಗದಗ ಸೇರಿದಂತೆ ಸುತ್ತಮುತ್ತಲಿನ ಪ್ರಯಾಣಿಕರಿಗೆ (ಪ್ರವಾಸಿಗರಿಗೆ) ಅನುಕೂಲ ಆಗುವಂತೆ ನೇರ ಮಾರ್ಗದ 'ವೇಗಧೂತ ಸಾರಿಗೆ' ಹಾಗೂ 'ರಾಜಹಂಸ' ಬಸ್‌ಗಳನ್ನು ಕಾರ್ಯಾಚರಣೆ ಮಾಡಲಾಗುತ್ತದೆ. ಶಿರಸಿಯ ಶ್ರೀ ಮಾರಿಕಾಂಬ ದೇವಸ್ಥಾನ ದೇವಿ ದರ್ಶನ ಮಾಡಿಸಿ ಮುಂದೆ ಜೋಗಕ್ಕೆ ಪ್ರಯಾಣಿಕರನ್ನು ಕರೆದೊಯ್ಯಲಾಗುತ್ತದೆ.
ಪ್ರಯಾಣ ಸಮಯ, ಟಿಕೆಟ್ ಶುಲ್ಕ
ಪ್ರತಿ ಭಾನುವಾರ ವೇಗಧೂತ ಸಾರಿಗೆ ಹುಬ್ಬಳ್ಳಿ ಬಸ್ ನಿಲ್ದಾಣಗಳಿಂದ ಬೆಳಗ್ಗೆ 7.30 ಗಂಟೆಗೆ ಬಸ್ ಸಂಚಾರ ಆರಂಭಿಸುತ್ತದೆ. ಜೋಗಕ್ಕೆ ಮಧ್ಯಾಹ್ನ 12.30 ಗಂಟೆಗೆ ತಲುಪುತ್ತದೆ. ನಂತರ ಅಲ್ಲಿಂದ ಸಂಜೆ 17 ಗಂಟೆಗೆ (5pm) ಹೊರಟು ರಾತ್ರಿ 22 ಗಂಟೆಗೆ (10pm) ಗೆ ಹುಬ್ಬಳ್ಳಿಗೆ ಮರಳಿ ಬಂದು ಸೇರುತ್ತದೆ.
ಇನ್ನೂ ರಾಜಹಂಸ ಸಾರಿಗೆ ಬಸ್ ಹುಬ್ಬಳ್ಳಿ ಬಸ್ ನಿಲ್ದಾಣಗಳಿಂದ ಬೆಳಗ್ಗೆ 7.35 ಗಂಟೆಗೆ ಬಸ್ ಸಂಚಾರ ಆರಂಭಿಸುತ್ತದೆ. ಜೋಗಕ್ಕೆ ಮಧ್ಯಾಹ್ನ 12.30 ಗಂಟೆಗೆ ತಲುಪುತ್ತದೆ. ನಂತರ ಅಲ್ಲಿಂದ ಸಂಜೆ 17.05 ಗಂಟೆಗೆ (5.05pm) ಹೊರಟು ರಾತ್ರಿ 22 ಗಂಟೆಗೆ (10pm) ಗೆ ಹುಬ್ಬಳ್ಳಿಗೆ ಆಗಮಿಸಲಿದೆ.

ವೇಗಧೂತ ಬಸ್ ಪ್ರಯಾಣಿಕರಿಗೆ ತಲಾ ಒಬ್ಬರಿಗೆ ಟಿಕೆಟ್ ದರ 500 ರೂಪಾಯಿ ಹಾಗೂ ರಾಜಹಂಸ ಪ್ರಯಾಣಕ್ಕೆ ಒಬ್ಬರಿಗೆ 600 ರೂಪಾಯಿ ಟಿಕೆಟ್ ನಿಗದಿ ಮಾಡಲಾಗಿದೆ. ನೀವು ಮುಂಗಡ ಆಸಕ ಕಾಯ್ದಿರಿಸಲು ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆ ಇದೆ. ಅದಕ್ಕಾಗಿ ನೀವು KSRTC ಅಧಿಕೃತ ಜಾಲತಾಣ www.ksrtc.in ಗೆ ಭೇಟಿ ನೀಡುವಂತೆ NWKRTC ವಿಭಾಗೀಯ ಅಧಿಕಾರಿಗಳು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಜೋಗ ಮತ್ತು ಗೋಕಾಕ್‌ಗೆ ಬಸ್ ವ್ಯವಸ್ಥೆ
ಇತ್ತೀಚೆಗೆ ಹಾವೇರಿ ಜಿಲ್ಲೆ ಹಾಗೂ ರಾಣಿಬೆನ್ನೂರಿನಿಂದ ಜೋಗ ಜಲಾಪಾತಕ್ಕೆ ಬಸ್ ಸೇವೆ ಆರಂಭಿಸಲಾಗಿದೆ. ಬೆಳಗಾವಿಯ ನಿಪ್ಪಾಣಿ ಮತ್ತು ಸಂಕೇಶ್ವರದಿಂದ ಗೋಕಾಕ್ ಪ್ರಸಿದ್ಧವಾದ ಗೋಕಾಕ್ ಜಲಪಾತಕ್ಕೆ ಸಾರಿಗೆ ಬಸ್ ವ್ಯವಸ್ಥೆ ಮಾಡಲಾಗಿದೆ. ಈ ಎಲ್ಲ ಟೂರ್ ಪ್ಯಾಕೇಜ್‌ಗಳು ಒಂದು ದಿನದ ಪ್ರವಾಸವಾಗಿದೆ. ಮುಖ್ಯ ವಿಷಯವೇನೆಂದರೆ, ಈ ವಿಶೇಷ ಬಸ್‌ಗಳಲ್ಲಿ ಶಕ್ತಿ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಉಚಿತ ಸಂಚಾರಕ್ಕೆ ಅವಕಾಶ ಇರುವುದಿಲ್ಲ. ಇದನ್ನು ಗಮನಿಸುವಂತೆ ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications