NWKRTC: ಬೆಳಗಾವಿಯಿಂದ ರಾಜ್ಯದ ಈ 3 ಪ್ರಮುಖ ನಗರಗಳಿಗೆ ಪಲ್ಲಕ್ಕಿ ಎಸಿ ಬಸ್ ಸವಾರಿ: ಟಿಕೆಟ್ ದರ, ವೇಳಾಪಟ್ಟಿ

ಬೆಂಗಳೂರು: ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಸಂಚಾರ ಜೀವನಾಡಿ ವಾಯುವ್ಯ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (NWKRTC) ವತಿಯಿಂದ ಬೆಳಗಾವಿಯಿಂದ ಎರಡು ಮಹಾನಗರ ಮತ್ತು ಒಂದು ಧಾರ್ಮಿಕ ಕ್ಷೇತ್ರ ಸೇರಿದಂತೆ ಮೂರು ಕಡೆಗಳಲ್ಲಿ 3 ನೂತನ ಪಲ್ಲಕ್ಕಿ ನಾನ್-ಎಸಿ ಸ್ಲಿಪರ್ ಸಾರಿಗೆ ಸೇವೆ ಆರಂಭಿಸಲಾಗಿದೆ. ದೀರ್ಘ ಪ್ರಯಾಣದ ಜನರಿಗೆ ಆರಾಮದಾಯಕ ಪ್ರಯಾಣ ಸೇವೆ ನೀಡಲಿದೆ. ಎಲ್ಲೆಲ್ಲಿಗೆ ಹೊಸ ಸೇವೆ, ವೇಳಾಪಟ್ಟಿ, ಸಂಚಾರ ಮಾರ್ಗ, ಸಮಯದ ಮಾಹಿತಿ ಮುಂದಿದೆ.

ಈ ಮೂರು ಪಲ್ಲಕ್ಕಿ ನಾನ್-ಎಸಿ ಸ್ಲಿಪರ್ ಬಸ್‌ಗಳು ಉತ್ತರ ಕರ್ನಾಟಕದ ಬೆಳಗಾವಿ- ಧರ್ಮಸ್ಥಳ, ಬೆಳಗಾವಿ- ಬೆಂಗಳೂರು ಮತ್ತು ಬೆಳಗಾವಿ- ಮೈಸೂರು ನಗರಕ್ಕೆ ಸಂಪರ್ಕ ಒದಗಿಸಲಿವೆ. ಪ್ರಮುಖ ಜಿಲ್ಲೆ, ತಾಲೂಕು ಮಾರ್ಗವಾಗಿ ಗಮ್ಯ ಸ್ಥಳ ತಲುಪಲಿದ್ದು, ಇದರಿಂದ ಆಯಾ ಮಾರ್ಗದ ನೂರಾರು ಪ್ರಯಾಣಿಕರಿಗೆ, ಭಕ್ತರಿಗೆ ಅನುಕೂಲವಾಗಲಿದೆ. ವಾರದ ಏಳು ದಿನವು ಈ ಸಾರಿಗೆ ಸೇವೆ ಲಭ್ಯವಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

NWKRTC

* ಬೆಳಗಾವಿ-ಧರ್ಮಸ್ಥಳ ಪಲ್ಲಕ್ಕಿ ಸೇವೆ

ಬೆಳಗಾವಿಯಿಂದ ನೂತನ ಎಸಿ ಪಲ್ಲಕ್ಕಿ ಬಸ್ ರಾತ್ರಿ 8.30ಗಂಟೆಗೆ ಹೊರಟು ಮಾರನೇ ದಿನ ಬೆಳಗ್ಗೆ 7ಕ್ಕೆ ಧರ್ಮಸ್ಥಳ ತಲುಪುತ್ತದೆ. ಮರಳಿ ಅದೇ ದಿಕ್ಕಿನಲ್ಲಿ ಧರ್ಮಸ್ಥಳದಿಂದ ಅದೇ ದಿನ ರಾತ್ರಿ 8.30ಗಂಟೆಗೆ ಹೊರಟು ಮಾರನೇ ದಿನ ಬೆಳಗ್ಗೆ 7 ಗಂಟೆಗೆ ಬೆಳಗಾವಿಗೆ ನಿಲ್ದಾಣಕ್ಕೆ ಬರಲಿದೆ.

ಮಾರ್ಗ ಮತ್ತು ಟಿಕೆಟ್ ದರ

ಬೆಳಗಾವಿಯಿಂದ ಹುಬ್ಬಳ್ಳಿ, ಅಂಕೋಲಾ, ಭಟ್ಕಳ, ಕುಂದಾಪುರ, ಉಡುಪಿ, ಮೂಡಬಿದರಿ ಮೂಲಕ ಧರ್ಮಸ್ಥಳಕ್ಕೆ ಸಾಗಲಿದೆ. ಈ ಮೇಲಿನ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ. ಈ ಬಸ್‌ನಲ್ಲಿ ಪ್ರಯಾಣಿಸುವ ತಲಾ ಒಬ್ಬರಿಗೆ ಟಿಕೆಟ್ ದರ 1,150 ರೂಪಾಯಿ ನಿಗದಿಪಡಿಸಲಾಗಿದೆ ಎಂದು NWKRTC ವಿಭಾಗೀಯ ನಿಯಂತ್ರಣಾಧಿಕಾರಿ ರಾಮನಗೌಡರ ಮಾಹಿತಿ ನೀಡಿದರು.

* ಬೆಳಗಾವಿ-ಬೆಂಗಳೂರು ಪಲ್ಲಕ್ಕಿ ಬಸ್

ಬೆಳಗಾವಿಯಿಂದ ನೂತನ ಎಸಿ ಪಲ್ಲಕ್ಕಿ ಬಸ್ ರಾತ್ರಿ 8.01ಕ್ಕೆ ಹೊರಟು ಮಾರನೇ ದಿನ ಬೆಳಗ್ಗೆ 6 ಗಂಟೆಗೆ ರಾಜಧಾನಿ ಬೆಂಗಳೂರು ಮೆಜೆಸ್ಟಿಕ್ ನಿಲ್ದಾಣ ತಲುಪುತ್ತದೆ. ಮರಳಿ ಅದೇ ದಿಕ್ಕಿನಲ್ಲಿ ಬೆಂಗಳೂರಿನಿಂದ ರಾತ್ರಿ 09.30ಕ್ಕೆ ಪ್ರಯಾಣ ಆರಂಭಿಸಿ ಮರುದಿನ ಬೆಳಗ್ಗೆ 7ಕ್ಕೆ ಬೆಳಗಾವಿ ತಲುಪುತ್ತದೆ.

ಸಂಚಾರ ಮಾರ್ಗ, ಟಿಕೆಟ್ ಬೆಲೆ

ಈ ಬಸ್ ಹುಬ್ಬಳ್ಳಿ, ಧಾರವಾಡ ಮೂಲಕ ಪ್ರಮುಖ ಪ್ರದೇಶಗಳ ಮಾರ್ಗವಾಗಿ ಸಾಗಲಿದೆ. ಒಬ್ಬರಿಗೆ ಟಿಕೆಟ್ ಬೆಲೆ 1150 ರೂಪಾಯಿ ನಿಗದಿಪಡಿಸಲಾಗಿದೆ.

* ಬೆಳಗಾವಿ-ಮೈಸೂರು ಪಲ್ಲಕ್ಕಿ ಬಸ್

ಬೆಳಗಾವಿಯಿಂದ ಪಲ್ಲಕ್ಕಿ ಬಸ್ ರಾತ್ರಿ 8.01ಕ್ಕೆ ಹೊರಟು ಮಾರನೇ ದಿನ ಬೆಳಗ್ಗೆ 6 ಗಂಟೆಗೆ ಸಾಂಸ್ಕೃತಿಕ ರಾಜಧಾನಿ ಮಯಸೂರು ತಲುಪುತ್ತದೆ. ಮರಳಿ ಅದೇ ದಿಕ್ಕಿನಲ್ಲಿ ಮೈಸೂರಿನಿಂದ ರಾತ್ರಿ 09.30ಕ್ಕೆ ಪ್ರಯಾಣ ಆರಂಭಿಸಿ ಮರುದಿನ ಬೆಳಗ್ಗೆ 7ಗಂಟೆಗೆ ಬೆಳಗಾವಿಗೆ ಆಗಮಿಸುತ್ತದೆ.

ಈ ಬಸ್‌ ಧಾರವಾಡ, ಹುಬ್ಬಳ್ಳಿ ಹಾಗೂ ಇತರ ಪ್ರಮುಖ ನಗರಗಳ ಮೂಲಕ ಕಾರ್ಯಾರಣೆ ನಡೆಸಲಿದೆ. ಒಬ್ಬರಿಗೆ ಟಿಕೆಟ್ ದರ 1150 ರೂಪಾಯಿ ದರ ನಿಗದಿಪಡಿಸಲಾಗಿದೆ.

ಟಿಕೆಟ್ ಬುಕಿಂಗ್ ಹೇಗೆ?

ಪ್ರಯಾಣಿಕರಿಗೆ ಆನ್‌ಲೈನ್ ಮೂಲಕ ಟಿಕೆಟ್ ಬುಕ್ಕಿಂಗ್‌ ಗೆ ಅವಕಾಸ ಇದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಅಧಿಕೃತ ವೆಬ್‌ಸೈಟ್ http://ksrtc.in ಗೆ ಭೇಟಿ ನೀಡಿ ಬುಕ್ ಮಾಡಬಹುದು. ಹೆಚ್ಚಿನ ಮಾಹಿತಿಗೆ 77609 91635 ಅಥವಾ 77609 91625 ಗೆ ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+