ಕೋವಿಡ್ ಪರೀಕ್ಷೆಯ ವರದಿ ಆನ್‌ಲೈನ್‌ನಲ್ಲೇ ಲಭ್ಯ

ಬೆಂಗಳೂರು, ಆಗಸ್ಟ್ 19 : ಕೋವಿಡ್ ಪರೀಕ್ಷೆ ಮಾಡಿಸಿಕೊಂಡ ಜನರು ವರದಿ ಬರುವ ತನಕ ಕಾಯಬೇಕಾಗಿಲ್ಲ. ಜನರಿಗೆ ಆನ್‌ಲೈನ್‌ನಲ್ಲೇ ವರದಿ ನೀಡುವ ವ್ಯವಸ್ಥೆಯನ್ನು ಕರ್ನಾಟಕದ ಆರೋಗ್ಯ ಇಲಾಖೆ ಮಾಡಿದೆ.

Recommended Video

      ಸರ್ಕಾರಿ ಶಾಲೆಯಲ್ಲೊಬ್ಬ 3D ಶಿಕ್ಷಕ | Oneindia Kannada

      ಆರೋಗ್ಯ ಸಚಿವ ಬಿ. ಶ್ರೀರಾಮುಲು ಈ ಕುರಿತು ಟ್ವೀಟ್ ಮಾಡಿದ್ದಾರೆ. ಕೋವಿಡ್ ಪರೀಕ್ಷೆಗೆ ಒಳಗಾಗಿರುವ ಸಾರ್ವಜನಿಕರ ಅನುಕೂಲಕ್ಕಾಗಿ ವರದಿಯನ್ನು ಆನ್‌ಲೈನ್ ಮೂಲಕ ಪಡೆಯುವ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದ್ದಾರೆ.

      ಕೋವಿಡ್ ವರದಿ ಆನ್‌ಲೈನ್‌ನಲ್ಲೇ ಸಿಗುವುದರಿಂದ ತುರ್ತು ಚಿಕಿತ್ಸೆ ಅಗತ್ಯ ಇರುವ ರೋಗಿಗಳಿಗೆ ಸಹಾಯಕವಾಗಲಿದೆ. ಖಾಸಗಿ ಆಸ್ಪತ್ರೆಗಳು ಯಾವುದೇ ರೋಗಿಯನ್ನು ದಾಖಲು ಮಾಡಿಕೊಳ್ಳುವ ಮುನ್ನ ಕೋವಿಡ್ ವರದಿಯನ್ನು ಕೇಳುತ್ತಿವೆ.

      Now COVID 19 Report Available In Online

      ಕೋವಿಡ್ ಪರೀಕ್ಷೆ ಮಾಡಿಸಿಕೊಂಡ ಜನರು ತಮ್ಮ SRF ಐಡಿ ಬಳಸಿ ಪರೀಕ್ಷಾ ವರದಿ ಪಡೆದುಕೊಳ್ಳಬಹುದು. ವೆಬ್‌ಸೈಟ್‌ನಲ್ಲಿ ವರದಿಯನ್ನು ಅಪ್‌ಲೋಡ್ ಮಾಡಲಾಗುತ್ತದೆ. ಮೊಬೈಲ್ ಮೂಲಕವೂ ವರದಿ ನೋಡಬಹುದಾಗಿದೆ.

      ಯಾವುದೇ ವ್ಯಕ್ತಿ ಕೋವಿಡ್ ಪರೀಕ್ಷೆಗೆ ಹೋದಾಗ Specimen Referral Form (SRF) ಐಡಿಯನ್ನು ನೀಡಲಾಗುತ್ತದೆ. ಈ ಐಡಿ ಸಹಾಯದಿಂದಲೇ ವೆಬ್ ಸೈಟ್‌ಗೆ ಭೇಟಿ ನೀಡಿ ವರದಿಯನ್ನು ಪಡೆಯಬಹುದಾಗಿದೆ.

      ಕರ್ನಾಟಕದಲ್ಲಿ ಒಂದೇ ದಿನ ದಾಖಲೆಯ 59,088 ಮಾದರಿಗಳ ಪರೀಕ್ಷೆ ನಡೆಸಲಾಗಿದೆ. ಒಂದೇ ದಿನ 28,867 antigen ಪರೀಕ್ಷೆ ಮಾಡಲಾಗಿದೆ. ಕರ್ನಾಟಕದಲ್ಲಿ ಒಟ್ಟು ಕೋವಿಡ್‌ ಸೋಂಕಿತರ ಸಂಖ್ಯೆ 2,40,948ಕ್ಕೆ ಏರಿಕೆಯಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+