ವಿದ್ಯುತ್ ಉತ್ಪಾದನೆ ಕುಸಿತ, ಲೋಡ್ ಶೆಡ್ಡಿಂಗ್ ಇಲ್ಲ

ಬೆಂಗಳೂರು, ಆಗಸ್ಟ್ 17 : ರಾಜ್ಯದಲ್ಲಿ ಮುಂಗಾರು ಮಳೆ ಕೈ ಕೊಟ್ಟಿದೆ, ವಿದ್ಯುತ್ ಉತ್ಪಾದನೆ ಕುಸಿತಗೊಂಡಿದೆ. ಆದರೆ, ಲೋಡ್ ಶೆಡ್ಡಿಂಗ್ ಮಾಡುವುದಿಲ್ಲ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಖಾಸಗಿಯವರಿಂದ ವಿದ್ಯುತ್ ಖರೀದಿ ಮಾಡಲು ಸರ್ಕಾರ ಮುಂದಾಗಿದೆ ಎಂದು ಅವರು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಇಂಧನ ಇಲಾಖೆ ಅಧಿಕಾರಿಗಳ ಸಭೆ ನಡೆಸಿರುವ ಸಚಿವ ಡಿ.ಕೆ.ಶಿವಕುಮಾರ್ ಅವರು, ರಾಜ್ಯದಲ್ಲಿ ಪ್ರತಿ ದಿನ ಸರಾಸರಿ 3,020 ಮೆಗಾವಾಟ್‌ ನಷ್ಟು ವಿದ್ಯುತ್‌ ಉತ್ಪಾದನೆ ಕಡಿಮೆ ಆಗಿದೆ. ಆದರೆ, ನಿಗದಿತ ಲೋಡ್‌ ಶೆಡ್ಡಿಂಗ್‌ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಸ್ಪಷ್ಟಪಡಿಸಿದರು. [ಕರ್ನಾಟಕದಲ್ಲಿ ಮತ್ತೊಂದು ಪರಮಾಣು ಸ್ಥಾವರ ನಿರ್ಮಾಣ?]

dk shivakumar

ವಿದ್ಯುತ್ ಕೊರತೆಯನ್ನು ಕಡಿಮೆ ಮಾಡಲು ಖಾಸಗಿಯಾವರಿಂದ ವಿದ್ಯುತ್ ಖರೀದಿ ಮಾಡಲಾಗುತ್ತದೆ. 750 ಮೆಗಾ ವಾಟ್‌ ವಿದ್ಯುತ್‌ ಖರೀದಿ ಮಾಡಲು ಚಿಂತನೆ ನಡೆಸಲಾಗಿದೆ. ಸರ್ಕಾರ ಸೆಪ್ಟೆಂಬರ್ 15ರ ನಂತರ ವಿದ್ಯುತ್ ಖರೀದಿ ಮಾಡಲು ಯೋಜನೆ ಹಾಕಿಕೊಂಡಿತ್ತು. ಆದರೆ, ಈಗ ಆಗಸ್ಟ್ 20ರಿಂದಲೇ ಖರೀದಿ ಮಾಡಬೇಕಾಗಿದೆ ಎಂದು ಹೇಳಿದರು. [ಕರ್ನಾಟಕದಲ್ಲಿ 750 ಮೆ.ವ್ಯಾಟ್ ಬೃಹತ್ ಸೌರಶಕ್ತಿ ಪಾರ್ಕ್]

ರಾಜ್ಯ ಪ್ರತಿದಿನ 10,189 ಮೆಗಾವಾಟ್‌ ವಿದ್ಯುತ್‌ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಒಂದು ವಾರದಿಂದ ವಿದ್ಯುತ್ ಉತ್ಪಾದನೆ ಕುಸಿತವಾಗಿದ್ದು, 6,600ರಿಂದ 7,300 ಮೆಗಾವಾಟ್‌ನಷ್ಟು ವಿದ್ಯುತ್‌ ಮಾತ್ರ ಲಭ್ಯವಾಗುತ್ತಿದೆ ಎಂದು ಸಚಿವರು ವಿವರಣೆ ನೀಡಿದರು.

ಸರ್ಕಾರ ಖಾಸಗಿಯವರಿಂದ ಪ್ರತಿ ಯೂನಿಟ್‌ಗೆ 5.08 ದರದಂತೆ 750 ಮೆಗಾವಾಟ್‌ ವಿದ್ಯುತ್‌ ಖರೀದಿಸಲು ಮುಂದಾಗಿದೆ. 2016ರ ಮೇ ವರೆಗೆ ವಿದ್ಯುತ್‌ ಖರೀದಿಸಲು 3,078 ಕೋಟಿ ಬೇಕಾಗುತ್ತದೆ. ಟೆಂಡರ್‌ ಮೂಲಕವೇ ವಿದ್ಯುತ್‌ ಖರೀದಿಸುತ್ತೇವೆ ಎಂದು ಸಚಿವರು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+