ಜೈನ ಮುನಿ ಹತ್ಯೆ; ಈ ಪ್ರಕರಣ ಸಿಬಿಐ ಗೆ ವಹಿಸಲ್ಲ: ನಮ್ಮ ಪೋಲಿಸರು ಸಮರ್ಥರು: ಡಾ. ಜಿ ಪರಮೇಶ್ವರ್‌

ಹುಬ್ಬಳ್ಳಿ, ಜುಲೈ 10: ಜೈನ್ ಮುನಿಗಳ ಹತ್ಯೆಯಂತಹ ಘಟನೆ ನಡೆದಾಗ ಯಾರು ಕೂಡ ತಾರತಮ್ಯ ಮಾಡುವುದಕ್ಕೆ ಆಗುವುದಿಲ್ಲ. ಈ ಪ್ರಕರಣವನ್ನ ಸಿಬಿಐ ಅಥವಾ ಯಾವುದಕ್ಕೂ ಕೊಡುವ ಅಗತ್ಯ ಇಲ್ಲ. ನಮ್ಮ ಪೋಲಿಸರು ಸಮರ್ಥರಿದ್ದಾರೆ ಎಂದು ಗೃಹ ಸಚಿ ಡಾ. ಜಿ ಪರಮೇಶ್ವರ್‌ ಹೇಳಿದ್ದಾರೆ.

ಹುಬ್ಬಳ್ಳಿ ತಾಲೂಕಿನ ವರೂರಿನಲ್ಲಿ ಜೈನಮುನಿ ಗುಣಧರನಂದಿ‌ ಮಹಾರಾಜರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಅವರು, ಹತ್ಯೆಯ ಅಪರಾಧಿಗಳನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವ ಕೆಲಸ ಪೊಲೀಸರು ಮಾಡುತ್ತಾರೆ. ಜೈನ ಮುನಿ ಕಾಮಕುಮಾರ ನಂದಿ ಮಹಾರಾಜ ಹತ್ಯ ತನಿಖೆಯಲ್ಲಿ ತಾರತಮ್ಯದ ಆರೋಪ ವಿಚಾರ ನನಗೂ ಬೇಜಾರು ತಂದಿದ್ದು, ಅದರಲ್ಲಿ ತಾರತಮ್ಯದ ಪ್ರಶ್ನೆ ಬರುವುದಿಲ್ಲ. ಘಟನೆ ನಡೆದ ಮೇಲೆ ಪೊಲೀಸರಿಗೆ ವಿಚಾರ ಗೊತ್ತಾಗಿ ಕಂಪ್ಲೇಂಟ್ ಆದ ಮೇಲೆ ತಕ್ಷಣ ಕಾರ್ಯಪ್ರವೃತ್ತರಾಗಿದ್ದರೂ, ಬೋರ್ವೆಲ್ ನಲ್ಲಿ ಹಾಕಿದಂತ ದೇಹವನ್ನು ತೆಗೆಸಿ ಕ್ರಮ ತೆಗೆದುಕೊಂಡಿದ್ದಾರೆ ಇದು ಅತ್ಯಂತ ವೇಗವಾಗಿ ನಡೆದಿದ್ದು, ನಮ್ಮ ಇಲಾಖೆಗೆ ಅಭಿನಂದನೆ ಹೇಳ್ತೇನೆ ಅವರು ಶೀಘ್ರವಾಗಿ ಮಾಡಿದ್ದಾರೆ.

Home Minister G Parameshwar

ಇನ್ನು ಹುಬ್ಬಳ್ಳಿಯಲ್ಲಿನ ಜೈನ ಮುನಿಗಳು ಉಪವಾಸ ಮಾಡಿದ್ರು. ಅವರೊಂದಿಗೆ ನಿನ್ನೆ ನಾನು ಸಹ ಮಾತನಾಡಿದ್ದೇನೆ, ಅವರ ಬೇಡಿಕೆಯನ್ನು ಕೇಳಿ ಭರವಸೆ ಕೊಡೋಕೆ ಬಂದಿದ್ದೇವೆ ಎಂದ ಅವರು,
ಸಿಬಿಐ ತನಿಖೆಗೆ ಕೊಡಿ ಎಂದ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ನಮ್ಮ ಪೊಲೀಸ್ ಇಲಾಖೆಯವರು ಸಮರ್ಥರಿದ್ದಾರೆ ಆರೋಪಗಳನ್ನು ಬಂಧಿಸಿದ್ದಾರೆ. ತನಿಖೆ ಆರಂಭ ಆಗಿದೆ, ಸಿಬಿಐ ಅಥವಾ ಯಾವುದಕ್ಕೂ ಕೊಡುವ ಅಗತ್ಯ ಇಲ್ಲ ಎಂದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಮ್ಮ ಇಲಾಖೆ ತನಿಖೆ ಮುಗಿದ ಮೇಲೆ ಸತ್ಯಾಸತ್ಯತೆ ತಿಳಿದು ಬರುತ್ತೆ. ಸುಮ್ನೆ ಆಪಧನೆ ಮಾಡುವುದು ಸರಿಯಿಲ್ಲ. ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಪೊಲೀಸರು ಪಕ್ಷಾತೀತವಾಗಿ ಪ್ರೆಶರ್ ಇಲ್ಲದೇ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಇನ್ನೂ ವಿರೋಧ ಪಕ್ಷದ ನಾಯಕ ಆಯ್ಕೆ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿಯಲ್ಲಿ ಒಳಜಗಳ ಇದೆ. ಇನ್ನೂ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡುವುದಕ್ಕೆ ಆಗ್ತಾ ಇಲ್ಲ. ವಿಧಾನಸಭೆ ಸದನ ಆರಂಭವಾಗಿ ಒಂದು ವಾರ ಕಳೆದಿದೆ. ವಿರೋಧ ಪಕ್ಷದ ನಾಯಕ ಇಲ್ಲದೇ ಸದನ ನಡೆಸುತ್ತಾ ಇದೆ. ಇನ್ನೂ ವಿರೋಧ ಪಕ್ಷದ ನಾಯಕರ ಆಯ್ಕೆಯಾಗದೇ ಇರುವುದು ಅವರ ಆಂತರಿಕ ಒಳ ಜಗಳ ತೋರಿಸುತ್ತೆ. ಅವರಿಗೆ ಎಷ್ಟು ಜವಾಬ್ದಾರಿ ಇದೆ ಎನ್ನುವುದು ತೋರಿಸುತ್ತದೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+