• search

ಪರಿಷತ್ ಚುನಾವಣೆ ಮುಗಿವವರೆಗೆ ಸಂಪುಟ ವಿಸ್ತರಣೆ ಇಲ್ಲ, ನಿಜ ಕಾರಣವೇನು?

Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಕಾರವಾರ, ಸೆಪ್ಟೆಂಬರ್ 22: ಯೂರೋಪ್ ಪ್ರವಾಸಕ್ಕೆ ತೆರಳಿದ್ದ ಸಿದ್ದರಾಮಯ್ಯ ವಾಪಸ್ ಬಂದ ಕೂಡಲೇ ಸಂಪುಟ ವಿಸ್ತರಣೆ ಮಾಡಲಾಗುತ್ತದೆ ಎಂದು ಹೇಳಿದ್ದ ಕಾಂಗ್ರೆಸ್ ಈಗ ಮತ್ತೆ ಸಂಪುಟ ವಿಸ್ತರಣೆಯನ್ನು ಮುಂದೂಡಿದೆ.

  'ವಿಧಾನ ಪರಿಷತ್ ಚುನಾವಣೆ ಮುಗಿಯುವವರೆಗೆ ಸಂಪುಟ ವಿಸ್ತರಣೆ ಮಾಡುವುದಿಲ್ಲ' ಎಂದು ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಮಾಧ್ಯಮಗಳಿಗೆ ಹೇಳಿದ್ದಾರೆ. ಕಾರವಾರಕ್ಕೆ ಭೇಟಿ ನೀಡಿದ್ದ ಅವರು, ಸುದ್ದಿಗಾರರೊಂದಿಗೆ ಮಾತನಾಡಿ ಈ ವಿಷಯವನ್ನು ಹೇಳಿದರು.

  ಸಂಪುಟಕ್ಕೆ ಮೇಜರ್ ಸರ್ಜರಿ? ಪರಮೇಶ್ವರ್, ಡಿಕೆಶಿ ಖಾತೆ ಬದಲಾವಣೆ?

  ಕಾಂಗ್ರೆಸ್‌ನಲ್ಲಿ ಅತೃಪ್ತ ಶಾಸಕರನ್ನು ನಿಯಂತ್ರಿಸಲು ಕಷ್ಟವಾಗುತ್ತಿರುವ ಕಾರಣ ಸಂಪುಟ ವಿಸ್ತರಣೆ ಮುಂದೂಡಲ್ಪಟ್ಟಿವೆ ಎನ್ನುತ್ತಿದೆ ಮೂಲಗಳು. ಅತೃಪ್ತ ಶಾಸಕರನ್ನು ಮೊದಲಿಗೆ ತಹಬದಿಗೆ ತಂದು ಆ ನಂತರ ಸಂಪುಟ ವಿಸ್ತರಣೆ ಮಾಡುವ ಯೋಚನೆ ರಾಜ್ಯ ಕಾಂಗ್ರೆಸ್‌ನದ್ದು.

  ಕಾಂಗ್ರೆಸ್‌ ಬೆನ್ನಲ್ಲಿ ಚಳುಕು ಹುಟ್ಟಿಸಿದ ಜಾರಕಿಹೊಳಿ ಬ್ರದರ್ಸ್‌

  ಕಾಂಗ್ರೆಸ್‌ ಬೆನ್ನಲ್ಲಿ ಚಳುಕು ಹುಟ್ಟಿಸಿದ ಜಾರಕಿಹೊಳಿ ಬ್ರದರ್ಸ್‌

  ಇತ್ತೀಚೆಗಷ್ಟೆ ರಮೇಶ್ ಹಾಗೂ ಸತೀಶ್ ಜಾರಕಿಹೊಳಿ ಹಾಕಿದ್ದ ಭಾರಿ ಬಾಂಬ್‌ಗೆ ಕಾಂಗ್ರೆಸ್‌ ಬೆನ್ನುಮೂಳೆಯಲ್ಲಿ ನಡುಕ ಬಂದಿರುವುದು ಸುಳ್ಳಲ್ಲ. ಹಾಗಾಗಿ ಮುಂದಿನ ದಿನಗಳಲ್ಲಿ ಯಾವುದೇ ಶಾಸಕ ಅಥವಾ ಸಚಿವರನ್ನು ಹಗುರವಾಗಿ ಪರಿಗಣಿಸದೆ 'ದೊರೆ ರಾಜಕೀಯ' ಮಾಡದೆ ಸಮಾಧಾನದ ರಾಜಕೀಯ ಮಾಡುವ ನಿರ್ಣಯ ಕಾಂಗ್ರೆಸ್ ಕೈಗೊಂಡಿದೆ ಎನ್ನಲಾಗಿದೆ.

  'ಸೆ. 30ರೊಳಗೆ ಸಂಪುಟ ವಿಸ್ತರಿಸಿ, ಇಲ್ಲವೇ ನಮ್ಮ ದಾರಿ ನೋಡಿಕೊಳ್ಳುತ್ತೇವೆ'

  ಸಿದ್ದರಾಮಯ್ಯರನ್ನು ಭೇಟಿಯಾಗಿದ್ದ ಅತೃಪ್ತರು

  ಸಿದ್ದರಾಮಯ್ಯರನ್ನು ಭೇಟಿಯಾಗಿದ್ದ ಅತೃಪ್ತರು

  ಸಿದ್ದರಾಮಯ್ಯ ಅವರು ಯೂರೋಪ್‌ನಿಂದ ಬಂದ ಮಾರನೇಯ ದಿನವೇ ಸಚಿವಾಕಾಂಕ್ಷಿಗಳಾದ ಎಂಟಿಬಿ ನಾಗರಾಜು, ಎಂ.ಬಿ.ಪಾಟೀಲ್, ನಾಗೇಂದ್ರ, ಆನಂದ್‌ ಸಿಂಗ್, ಸುಧಾಕರ್, ಇನ್ನೂ ಕೆಲವರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಲಾಭಿ ಮಾಡಿದ್ದರು. ಸಚಿವ ಸ್ಥಾನ ಸಿಗದಿದ್ದರೆ ಬಂಡಾಯ ಏಳುವುದಾಗಿ ಸಿದ್ದರಾಮಯ್ಯ ಬಳಿ ಕೆಲವರು ಹೇಳಿದ್ದಾರೆ ಎನ್ನಲಾಗಿದೆ. ಹಾಗಾಗಿ ಮೊದಲು ಅವರ ಬಂಡಾಯ ಶಮನಗೊಳಿಸಿ ಯಾವುದೇ ಗೊಂದಲ ಇಲ್ಲದೆ ಸಂಪುಟ ವಿಸ್ತರಣೆ ಮಾಡುವುದು ಕಾಂಗ್ರೆಸ್ ತಂತ್ರ.

  ಮೌನ ಮುರಿದ ಸಿದ್ದರಾಮಯ್ಯ ಸಂಪುಟ ವಿಸ್ತರಣೆ ಬಗ್ಗೆ ಹೇಳಿದ್ದೇನು?

  ಸಿದ್ದರಾಮಯ್ಯ ಟ್ವೀಟ್ ಸಹ ಮಾಡಿದ್ದರು

  ಈ ಹಿಂದೆ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮುಂಚೆಯೇ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದಾಗಿತ್ತು. ಆದರೆ ಆಗ ಆಷಾಡ ಮಾಸದ ನೆಪವೊಡ್ಡಿ ಮುಂದೂಡಿದರು. ಆ ನಂತರ ಸ್ಥಳೀಯ ಚುನಾವಣೆ ನಂತರ ಮಾಡಿಮುಗಿಸಲಾಗುವುದು ಎಂದಿದ್ದರು ಆದರೆ ಅದೂ ಆಗಲಿಲ್ಲ. ಕೊನೆಗೆ ಸಿದ್ದರಾಮಯ್ಯ ಯೂರೋಪ್ ಪ್ರವಾಸದ ನಂತರ ಪಕ್ಕಾ ಎಂದರು. ಸಿದ್ದರಾಮಯ್ಯ ಈ ಬಗ್ಗೆ ಟ್ವೀಟ್ ಕೂಡ ಮಾಡಿದರು ಆದರೆ ಈಗ ಮತ್ತೆ ಸಂಪುಟ ವಿಸ್ತರಣೆ ಮುಂದಕ್ಕೆ ಹೋಗಿದೆ. ಈ ಬಾರಿ ವಿಧಾನ ಪರಿಷತ್ ಚುನಾವಣೆ ನಂತರ ಸಂಪುಟ ವಿಸ್ತರಣೆ ಎನ್ನಲಾಗಿದೆ.

  ಸಿದ್ದರಾಮಯ್ಯ ಭೇಟಿ ಮಾಡಿದ ಎಂ.ಬಿ. ಪಾಟೀಲ: ಚರ್ಚೆಯ ಗುಟ್ಟೇನು?

  ಮುಂದಕ್ಕೆ ಹೋಗಲು ಕಾರಣವೇನು?

  ಮುಂದಕ್ಕೆ ಹೋಗಲು ಕಾರಣವೇನು?

  ಮೊನ್ನೆ ಸಿದ್ದರಾಮಯ್ಯ ಅವರು ಯೂರೋಪ್ ಪ್ರವಾಸದಿಂದ ಬಂದ ನಂತರ ವೇಣುಗೋಪಾಲ್ ಜತೆ ಸಭೆ ನಡೆಸಿದ್ದಾರೆ. ಇಂತಹಾ ವಿಷಯ ಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷದ ಯಾವೊಬ್ಬ ಶಾಸಕನೂ ಬಂಡಾಯವೇಳಬಾರದು ಹಾಗೆ ಸಂಪುಟ ವಿಸ್ತರಣೆಯನ್ನು ನಿಭಾಯಿಸುವಂತೆ ಸೂಚಿಸಿದ್ದಾರೆ. ಹಾಗಾಗಿ ಒಬ್ಬೊಬ್ಬರಾಗಿ ಅತೃಪ್ತರ ಶಾಸಕರನ್ನೆಲ್ಲಾ ವಿಶ್ವಾಸಕ್ಕೆ ತೆಗೆದುಕೊಂಡು ಅವರಿಗೆ ನಿಗಮ ಮಂಡಳಿ ಸ್ಥಾನ ಅಥವಾ ಇನ್ನಾವುದೇ ಜವಾಬ್ದಾರಿಗಳನ್ನು ನೀಡುವ ಭರವಸೆ ಕೊಟ್ಟ ನಂತರ ಸಂಪುಟ ವಿಸ್ತರಣೆ ಮಾಡುವ ಯೋಜನೆ ಹಾಕಿಕೊಂಡ ಕಾರಣ ಸಂಪುಟ ವಿಸ್ತರಣೆ ಮುಂದೂಡ್ಪಟ್ಟಿದೆ.

  ನಿರ್ಧಾರ ಪ್ರಕಟಿಸುತ್ತೇನೆ ಎಂದಿದ್ದ ಎಂಟಿಬಿ

  ನಿರ್ಧಾರ ಪ್ರಕಟಿಸುತ್ತೇನೆ ಎಂದಿದ್ದ ಎಂಟಿಬಿ

  ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಬಂದಿದ್ದ ಹೊಸಕೋಟೆ ಕಾಂಗ್ರೆಸ್‌ ಶಾಸಕ ಎಂಟಿಬಿ ನಾಗರಾಜು, ಮಂತ್ರಿಗಿರಿಗಾಗಿ ತೀವ್ರ ಪಟ್ಟು ಹಿಡಿದಿದ್ದರು. ಇನ್ನೆರಡು ದಿನಗಳಲ್ಲಿ ಪತ್ರಿಕಾಗೋಷ್ಠಿ ನಡೆಸಿ ನನ್ನ ನಿರ್ಧಾರ ತಿಳಿಸುತ್ತೇನೆ ಎಂದು ಗುಠುರು ಹಾಕಿದ್ದರು. ಕೆಲವು ಕಾಂಗ್ರೆಸ್ ಶಾಸಕರು ನನ್ನೊಂದಿಗೆ ಇದ್ದಾರೆಂದು ಸಹ ಹೇಳಿದ್ದರು. ಮೂರು ಬಾರಿ ಸತತವಾಗಿ ಶಾಸಕರಾಗಿರುವ ಅವರು ಅತೃಪ್ತರ ಪಟ್ಟಿಯಲ್ಲಿ ಮೊದಲಿನಲ್ಲಿದ್ದಾರೆ.

  ಎಂ.ಬಿ.ಪಾಟೀಲ್‌ಗೆ ಸ್ಥಾನ

  ಎಂ.ಬಿ.ಪಾಟೀಲ್‌ಗೆ ಸ್ಥಾನ

  ಮೊದಲ ಬಾರಿ ಸಂಪುಟ ವಿಸ್ತರಣೆ ಆದಾಗ ತೀವ್ರವಾಗಿ ಬಂಡಾಯವೆದ್ದಿದ್ದ ಮಾಜಿ ಮಂತ್ರಿ ಎಂ.ಬಿ.ಪಾಟೀಲ್ ಅವರಿಗೆ ಸಚಿವ ಸ್ಥಾನ ಗ್ಯಾರೆಂಟಿ ಎನ್ನಲಾಗುತ್ತಿದೆ. ಇನ್ನು ಇತ್ತೀಚೆಗಷ್ಟೆ ತಮ್ಮ ಬಂಡಾಯವನ್ನು ದೆಹಲಿವರೆಗೂ ಹೊತ್ತೊಯ್ದು ಬಂದ ಸತೀಶ್ ಜಾರಕಿಹೊಳಿಗೂ ಸಚಿವ ಸ್ಥಾನ ಪಕ್ಕಾ ಎನ್ನಲಾಗಿದೆ. ಆಕಾಂಕ್ಷಿಗಳ ಪಟ್ಟಿ ದೊಡ್ಡದಿದ್ದು , ಸುಧಾಕರ್, ಆನಂದ್ ಸಿಂಗ್, ಎಚ್‌.ಕೆ.ಪಾಟೀಲ್, ರಾಮಲಿಂಗಾ ರೆಡ್ಡಿ, ಬಿಸಿ ಪಾಟೀಲ್ ಇನ್ನೂ ಹಲವರು ಮಂತ್ರಿ ಹುದ್ದೆಗೆ ಹಾತೊರೆಯುತ್ತಿದ್ದಾರೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  DCM G Parameshwar told that cabinet expansion will done after the Legislative council elections. Congress postponed cabinet expansion for minimum 4 times. previous date was September 3rdd week.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more