ನಿಡುಮಾಮಿಡಿ ಮಠದ ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಸಂದರ್ಶನ
ಬೆಂಗಳೂರು, ಡಿ.4 : ಮೂಢ ನಂಬಿಕೆ ವಿರುದ್ಧದ ಹೋರಾಟ, ಅನಿಷ್ಟ ಪದ್ಧತಿಗಳ ವಿರುದ್ಧ ಜನರಿಗೆ ಅರಿವು ಮೂಡಿಸುವುದು, ಕಪಟ ಜ್ಯೋತಿಷಿಗಳ ವಿರುದ್ಧದದ ಹೋರಾಟ ಮುಂತಾವುಗಳಲ್ಲಿ ಮುಂಚೂಣಿಯಲ್ಲಿ ಕಂಡುಬರುವುದು ನಿಡುಮಾಮಿಡಿ ಮಹಾಸಂಸ್ಥಾನದ ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಅವರು.
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಗೂಳೂರು ಗ್ರಾಮ ನಿಡುಮಾಮಿಡಿ ಸಂಸ್ಥಾನದ ಮೂಲಮಠ. ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಅವರು ಮಠಕ್ಕೆ 40ನೇ ಪೀಠಾಧಿಪತಿ. ಮೂರು ರಾಜ್ಯಗಳಲ್ಲಿ ಶಾಖಾ ಮಠವನ್ನು ಹೊಂದಿರುವ ನಿಡುಮಾಮಿಡಿ ಪೀಠಕ್ಕೆ ಲಕ್ಷಾಂತರ ಭಕ್ತವೃಂದವಿದೆ.

ಸಾಮಾಜಿಕ ಕಳಕಳಿ ಹೊಂದಿರುವ ನಿಡುಮಾಮಿಡಿ ಮಠ ಸಮಾಜದ ಶೋಷಿತ ವರ್ಗಗಳ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದೆ. ನಾಡಿನ ಜ್ವಲಂತ ಸಮಸ್ಯೆಯ ಬಗ್ಗೆ, ಸಮಾಜದಲ್ಲಿರುವ ಅನಿಷ್ಟ ಪದ್ಧತಿಗಳ ಬಗ್ಗೆ ಧ್ವನಿ ಎತ್ತುವ ನಿಡುಮಾಮಿಡಿ ಶ್ರೀಗಳು ಕರ್ನಾಟಕ ಜ್ವಲಂತ ಸಮಸ್ಯಗಳ ಬಗ್ಗೆ ಒನ್ ಇಂಡಿಯಾ ಕನ್ನಡದೊಂದಿಗೆ ಮಾತನಾಡಿದ್ದಾರೆ.
ಪ್ರಶ್ನೆ : ಮೂಢನಂಬಿಕೆ,ಮೌಢ್ಯ ಆಚರಣೆಗಳ ವಿಚಾರದಲ್ಲಿ ಬದಲಾವಣೆ ತರಲು ಸಾಧ್ಯವೇ ?
ಬದಲಾವಣೆ ಪ್ರಕೃತಿಯ ನಿಯಮ. ಎಲ್ಲಾ ಕಾಲದಲ್ಲೂ ಬದಲಾವಣೆ ನಡೆಯುತ್ತಿದೆ. ಜಗತ್ತಿನ ಎಲ್ಲಡೆ ನಡೆದಿದೆ ನಮ್ಮಲ್ಲೂ ನಡೆಯುತ್ತಿದೆ. ಬದಲಾವಣೆಯ ವೇಗ ಮತ್ತು ತೀವ್ರತೆ ಕಡಿಮೆಯಾಗಿರಬಹುದು, ಬದಲಾವಣೆಗಾಗಿ ಹೋರಾಟ ಮಾಡಿದ ದೊಡ್ಡ ಪರಂಪರೆ ನಮ್ಮಜೊತೆ ಇದೆ. ಆದ್ದರಿಂದ ಬದಲಾವಣೆ ಸಾಧ್ಯವಿದೆ. ಆದರೆ, ಅದಕ್ಕಾಗಿ ನಾವು ನಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಣೆ ಮಾಡಿದರೆ ಸಾಕು.

ಮಡೆ-ಮಡೆ ಸ್ನಾನದ ವಿರುದ್ಧದ ಹೋರಾಟದಲ್ಲಿ ಹಿನ್ನಡೆ ಆಗಿಲ್ಲವೇ?
ಕುಕ್ಕೆ ಸುಬ್ರಮಣ್ಯದಲ್ಲಿ ಮಡೆ-ಮಡೆ ಸ್ನಾನಕ್ಕೆ ನೀಡಿದ್ದ ತಡೆಯಾಜ್ಞೆಯನ್ನು ಕರ್ನಾಟಕ ಹೈಕೋರ್ಟ್ ತೆರವುಗೊಳಿಸಿ ತೀರ್ಪು ನೀಡಿದ್ದು ಅಘಾತಕಾರಿ. ಮೊದಲು ಹೈಕೋರ್ಟ್ ಮಡೆಸ್ನಾನಕ್ಕೆ ತಡೆಯಾಜ್ಞೆ ನೀಡಿತ್ತು. ಸುಪ್ರೀಂಕೋರ್ಟ್ ಅದನ್ನು ಎತ್ತಿಹಿಡಿದಿತ್ತು.
ಆದರೆ, ಹೈಕೋರ್ಟ್‌ನಿಂದ ಇಂತಹ ತೀರ್ಪು ಬರಲಿದೆ ಎಂದು ಜನರು ನಿರೀಕ್ಷೆ ಮಾಡಿರಲಿಲ್ಲ.ಸರ್ಕಾರವೇ ಮಡೆಸ್ನಾನ, ಎಡೆಸ್ನಾನ ಎರಡೂ ಬೇಡ ಎಂದು ಸ್ಟಷ್ಟಪಡಿಸಿದೆ. ಇಂದಲ್ಲ ನಾಳೆ ಈ ವಿಚಾರದಲ್ಲಿ ಸಹಜವಾದ ನ್ಯಾಯ ಸರ್ವೋಚ್ಚ ನ್ಯಾಯಾಲಯದಿಂದ ದೊರಕಲಿದೆ. ನಾವು ಈ ಬಗ್ಗೆ ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಿ, ಕಾನೂನು ಹೋರಾಟ ಮುಂದುವರೆಸಿದ್ದೇವೆ.

ವಿದ್ಯಾವಂತರು ಮಡೆಸ್ನಾನದಲ್ಲಿ ಪಾಲ್ಗೊಳ್ಳುತ್ತಾರಲ್ಲ?
ಮೊದಲು ಮಡೆಸ್ನಾನದ ಹಿನ್ನಲೆ ತಿಳಿಯೋಣ. ಮಡೆಸ್ನಾನ ಆಚರಣೆ ಇರುವುದು ನಾಗಕ್ಷೇತ್ರಗಳಲ್ಲಿ. ಹಿಂದೆ ನಾಗಕ್ಷೇತ್ರದಲ್ಲಿ ಮಡಸ್ತನ ಎಂಬ ಆಚರಣೆ ಇತ್ತು. ಅದರಂತೆ ಆದಿ ಕುಕ್ಕೆಯಲ್ಲಿರುವ ಹುತ್ತದ ಮಣ್ಣನ್ನು ಮೈಗೆ ಹಚ್ಚಿಕೊಂಡು, ದೇವಾಲದಲ್ಲಿ ಉರುಳುಸೇವೆ ಮಾಡಿ, ಕುಮಾರಧಾರಾ ನದಿಯಲ್ಲಿ ಸ್ನಾನ ಮಾಡುತ್ತಿದ್ದರು. ಇದು ಪ್ರಕೃತಿ ಚಿಕಿತ್ಸೆಯಾಗಿತ್ತು.
ಕುಕ್ಕೆ ಸುಬ್ರಮಣ್ಯ ದೇವಾಲಯದ ಬಗ್ಗೆ ಹೇಳುವುದಾದದರೆ ಅಲ್ಲಿನ ನಿಜವಾದ ವಾರಸುದಾರರು ಮಲೆಕುಡಿಯರು. ಶಿಷ್ಟವರ್ಗದ ಜನರು ಅಕ್ರಮಣ ಮಾಡಿ ಮಲೆಕುಡಿಯರಿಂದ ಅದನ್ನು ಕಸಿದುಕೊಂಡರು. ನಂತರ ಸಂಘರ್ಷ ಆರಂಭವಾಯಿತು. ಆಧುನಿಕ ಮಾಧ್ಯಮಗಳನ್ನು ಬಳಸಿಕೊಂಡು ಶಿಷ್ಟವರ್ಗದವರು ಹೊಸ ನಂಬಿಕೆ ಹುಟ್ಟು ಹಾಕಿದರು.
ಮಡೆಸ್ನಾನ ಮಾಡಿದರೆ ಚರ್ಮ ರೋಗ ಗುಣವಾಗುತ್ತೆ, ಸಂತಾನ ಭಾಗ್ಯ ದೊರೆಯಲಿದೆ, ಅವಿವಾಹಿತರಿಗೆ ವಿವಾಹವಾಗುತ್ತದೆ ಎಂದು ನಂಬಿಕೆ ಹುಟ್ಟು ಹಾಕಿದರು. ಮುಗ್ಧ ಜನರು ಇದನ್ನು ನಂಬಿ ಈ ಮೂಲಕ ನಮಗೆ ಒಳ್ಳೆಯದಾಗುತ್ತದೆ ಎಂದು ಮಡೆಸ್ನಾನಕ್ಕೆ ಬರುತ್ತಾರೆ.
-
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ -
National Highway: ಕರ್ನಾಟಕದ ನಾಲ್ಕು ಪ್ರಮುಖ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ನಿತಿನ್ ಗಡ್ಕರಿ -
ರಾಜ್ಯದಲ್ಲಿ 4,824 ಕೋಟಿ ರೂ. ಕೈಗಾರಿಕಾ ಹೂಡಿಕೆಗೆ ಸರ್ಕಾರ ಅಸ್ತು; 14,525 ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
Karnataka Weather: ರಾಜ್ಯವನ್ನು ಸುಡುತ್ತಿದೆ ರಣಬಿಸಿಲು; ಕರಾವಳಿ, ಮಲೆನಾಡಿಗೆ ಇಂದು ಮಳೆ ಮುನ್ಸೂಚನೆ -
LPG Crisis: ಎಲ್ಪಿಜಿ ಬಿಕ್ಕಟ್ಟಿನ ಸುಳಿಯಲ್ಲಿ ಭಾರತದ ಪ್ರಮುಖ ನಗರಗಳು: ದರ್ಶಿನಿಗಳು ಬಂದ್, ಪಿಜಿಗಳಲ್ಲಿ ಮೆನು ಚೇಂಜ್ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ












Click it and Unblock the Notifications