ಹೊಸ ಶಾಲೆಗಳನ್ನು ತೆರೆಯುವುದು ಇನ್ನುಮುಂದೆ ಸುಲಭವಲ್ಲ!

Posted By: Nayana
Subscribe to Oneindia Kannada

ಬೆಂಗಳೂರು, ಏಪ್ರಿಲ್ 07: ರಾಜ್ಯದಲ್ಲಿ ಪ್ರಾಥಮಿಕ ಶಾಲೆಗಳನ್ನು ತೆರೆಯುವುದು ಇನ್ನುಮುಂದೆ ಸುಲಭದ ಕೆಲಸವಲ್ಲ. ಶಾಲೆ ತೆರೆಯುವ ಮೊದಲು ವಿದ್ಯಾರ್ಥಿಗಳ ಭದ್ರತೆಗೆ ಒತ್ತು ನೀಡಬೇಕಾಗುತ್ತದೆ.

ಹೊಸ ಶಾಲೆ ತೆರೆಯುವ ಕುರಿತು ಶಿಕ್ಷಣ ಇಲಾಖೆಯ ಮುಂದೆ ಅರ್ಜಿಯನ್ನು ಸಲ್ಲಿಸುವಾಗ ಶಾಲೆಯಲ್ಲಿ ಕೈಗೊಂಡಿರುವ ಭದ್ರತಾ ಕ್ರಮಗಳನ್ನು ಪಟ್ಟಿಮಾಡಬೇಕಿದೆ. ವಿದ್ಯಾರ್ಥಿನಿರಿಗೆ ಭದ್ರತೆ, ಸೈಬರ್ ಸೇಫ್ಟಿ, ದೈಹಿಕ ಹಲ್ಲೆಯಾಗದಂತೆ ನೋಡಿಕೊಳ್ಳುವುದು ಹೀಗೆ ಅನೇಕ ಕ್ರಮಗಳನ್ನು ಪಾಲಿಸಬೇಕಾಗುತ್ತದೆ.

ಒಂದು ಸಂಜೆ ಸಿಕ್ಕ ಕೊಕ್ಕರೆ, ನಮ್ಮ ಶಾಲೆ ಆವರಣದಲ್ಲಿನ ಮಣ್ಣಿನಡಿ ನೆನಪು

ಯಾರು ಹೊಸ ಶಾಲೆಗಳನ್ನು ತೆರೆಯಲು ಯೋಜನೆಗಳನ್ನು ಹಾಕಿಕೊಂಡಿರುತ್ತಾರೋ ಅವರಿಗೆ ಪ್ರಾಥಮಿಕ ಶಿಕ್ಷಣ ಇಲಾಖೆಯು ಕೆಲವು ಕಠಿಣ ನಿಯಮಗಳನ್ನು ವಿಧಿಸಿದೆ. ಶಾಲೆಗಳಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣಗಳು, ಮಕ್ಕಳ ನೀಡುವ ಕಠಿಣ ಶಿಕ್ಷೆ, ದೈಹಿಕ ಹಲ್ಲೆ, ಆರೋಗ್ಯದ ಕುರಿತು ಭರವಸೆ ನೀಡಬೇಕು. ಜತೆಗೆ ವಾಹನ ವ್ಯವಸ್ಥೆಯನ್ನು ಒದಗಿಸಿಕೊಡಬೇಕು. ಕೆಲವು ಶಾಲೆಗಳಲ್ಲಿ ಶೌಚಾಲಯಗಳು, ಕುಡಿಯುವ ನೀರಿನ ವ್ಯವಸ್ಥೆಯಂತಹ ಮೂಲಭೂತ ಸೌಕರ್ಯಗಳೇ ಇಲ್ಲದಾಗಿದೆ.

New safety rules for starting schools

ನಿಮ್ಮ ಮಕ್ಕಳನ್ನು ಶಾಲೆಗೆ ಸೇರಿಸುವಾಗ ಆ ಶಾಲೆಯಲ್ಲಿ ಶಿಕ್ಷಕರು ಭದ್ರತೆಗಾಗಿ ಯಾವ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ವಿಚಾರಿಸಬೇಕಿದೆ. ಜತೆಗೆ ಮೂಲಭೂತ ಸೌಕರ್ಯಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದರೆ ಒಳಿತು. ದೈಹಿಕ ಸುರಕ್ಷತೆ ಕುರಿತು ಗಮನಿಸುವುದಾದರೆ ಪ್ರತಿಯೊಂದು ಶಾಲೆಯೂ ಕಾಂಪೌಂಡ್ ಗಳನ್ನು ಹೊಂದಿರಲೇ ಬೇಕು. ಜತೆಗೆ ಶಾಲಾ ಕೊಠಡಿಯಲ್ಲಿ ಬಾಗಲು ಕಿಟಕಿಗಳು ಸುವ್ಯಸ್ಥಿತವಾಗಿರಬೇಕು.

ಇನ್ನು ಲೈಂಗಿಕ ಭದ್ರತೆ ಕುರಿತು ಒಂದನೇ ತರಗತಿಯಿಂದ 12ರವರೆಗೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರುಗಳಿಗೆ ತರಬೇತಿ ನೀಡಬೇಕು. ಈ ಎಲ್ಲಾ ವಿಷಯಗಳ ಕುರಿತು ಅರ್ಜಿಯಲ್ಲಿ ನಮೂದಿಸಬೇಕಾಗುತ್ತದೆ. ಇಲಾಖೆಯ ಸಿಬ್ಬಂದಿಗಳು ಶಾಲೆಗೆ ಭೇಟಿ ನೀಡಿದಾಗ ಬೇಕಾದ ದಾಖಲೆಗಳಲ್ಲಿ ಒಂದು ದಾಖಲೆಯನ್ನು ನೀಡಲು ಅಸಮರ್ಥರಾದರೂ ಕೂಡ ಶಾಲೆಯನ್ನು ತೆರೆಯಲು ಪರವಾನಗಿ ನೀಡಲಾಗುವುದಿಲ್ಲ . ಈಗಿರುವ ಶಾಲೆಗಳು ಕೂಡ ವಿದ್ಯಾರ್ಥಿಗಳ ಭದ್ರತೆಗಾಗಿ ಏನೇನು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಗಮನಿಸಬೇಕಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Setting up a new primary school in the state will hence forth no be so easy. Under the new rules, Physical and infrastructure safety, personal and sexual safety, social, emotional and sexual safty for children have to be ensured at the time of application itself.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ