ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆನ್‌ಲೈನ್ ಟ್ಯಾಕ್ಸಿ ಸಂಸ್ಥೆಗಳಿಗೆ ರಾಜ್ಯ ಸರ್ಕಾರದ ಮೂಗುದಾರ

|
Google Oneindia Kannada News

ಬೆಂಗಳೂರು, ಫೆಬ್ರವರಿ, 17: ಗ್ರಾಹಕರ ಸುರಕ್ಷತೆ ಮತ್ತು ಟ್ಯಾಕ್ಸಿ ಸಂಸ್ಥೆಗಳು ವಿಧಿಸುತ್ತಿರುವ ಅಧಿಕ ದರದ ಬಗ್ಗೆ ದೂರುಗಳು ಕೇಳಿಬಂದ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಟ್ಯಾಕ್ಸಿ ಸಂಸ್ಥೆಗಳು ಮತ್ತು ಚಾಲಕರಿಗೆ ಹೊಸ ನಿಯಮಾವಳಿಗಳನ್ನು ಜಾರಿ ಮಾಡಿದ್ದು ಕಟ್ಟುನಿಟ್ಟಿನ ಪಾಲನೆಗೆ ಸೂಚನೆ ನೀಡಿದೆ.

ಆನ್ ಲೈನ್ ಮೂಲಕ ಕ್ಯಾಬ್ ಸೇವೆ ನೀಡುತ್ತಿರುವ ಕಂಪನಿ ಮತ್ತು ಚಾಲಕರಿಗೆ ರಾಜ್ಯ ಸರ್ಕಾರ ಹೊಸ ನಿಯಮಾವಳಿಗಳನ್ನು ಅನುಸರಿಸುವಂತೆ ತಿಳಿಸಿದೆ. ಅಗ್ರಿಗೇಟರ್ ಸರ್ವೀಸ್ ಲೈಸನ್ಸ್ ಇರದ ಕಂಪನಿಗಳು ಇನ್ನು ಮುಂದೆ ಸೇವೆ ನೀಡುವಂತಿಲ್ಲ.[ಟ್ಯಾಕ್ಸಿ ಚಾಲಕರಿಗೆ ಪೊಲೀಸ್ ಇಲಾಖೆ ಸೂಚನೆಗಳೇನು?]

 taxi

ಫೆಬ್ರವರಿ 9 ರಂದೇ ಆದೇಶ ಹೊರಡಿಸಲಾಗಿದ್ದು ಒಂದು ತಿಂಗಳ ಕಾಲಾವಕಾಶ ನೀಡಲಾಗಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಒಲಾ 'ನಮ್ಮ ಸಂಸ್ಥೆಯ ಎಲ್ಲ ಚಾಲಕರಿಗೆ ನಿಯಮಾವಳಿ ಬಗ್ಗೆ ತಿಳುವಳಿಕೆ ನೀಡಿದ್ದೇವೆ" ಎಂದು ತಿಳಿಸಿದೆ.

ಹೊಸ ನಿಯಮಾವಳಿಯಪ್ರಮುಖ ಅಂಶಗಳು
* ಸೇವೆ ನೀಡುವ ಕಂಪನಿ ಕನಿಷ್ಠ ನೂರು ಟ್ಯಾಕ್ಸಿಗಳನ್ನು ಹೊಂದಿರಬೇಕು. [ಬೆಂಗಳೂರು ಸಿಟಿ ಟ್ಯಾಕ್ಸಿ ದೂರವಾಣಿ ಸಂಖ್ಯೆಗಳು]
* ಸೇವೆ ನೀಡುವವರು ತಮ್ಮ ಬಳಿ ಕಂಟ್ರೊಲ್ ರೂಂ ಸೌಲಭ್ಯವನ್ನು ಹೊಂದಿರಬೇಕು
* ಟ್ಯಾಕ್ಸಿ ಚಾಲಕ ಮತ್ತು ಇತರ ಮಾಹಿತಿ ಒಳಗೊಂಡ ಫಲಕ ಇರುವುದು ಕಡ್ಡಾಯ
* ಎಲೆಕ್ಟ್ರಾನಿಕ್ ಡಿಜಿಟಲ್ ಮೀಟರ್ ಮೂಲಕ ವಾಹನ ಮಾನ್ಯತೆ ಪಡೆದುಕೊಂಡಿರಬೇಕು.
* ಹಳದಿ ಬಣ್ಣದ ಬೋರ್ಡ್ ಹೊಂದಿದ್ದು ದೊಡ್ಡದಾಗಿ ಟ್ಯಾಕ್ಸಿ ಎಂದು ಬರೇದಿರಬೇಕು
* ಚಾಲಕ ಕರ್ನಾಟಕದವರೇ ಅಗಿದ್ದರೆ ಒಳಿತು ಇಲ್ಲವಾದಲ್ಲಿ ರಾಜ್ಯದಲ್ಲಿ ನೆಲೆಸಿ ಕನಿಷ್ಠ 5 ವರ್ಷ ಕಳೆದಿರಬೇಕು
* ಚಾಲಕನಿಗೆ ಕನ್ನಡ ಗೊತ್ತಿರಬೇಕು ಜತೆಗೆ ಇಂಗ್ಲಿಷ್ ನಲ್ಲಿ ವ್ಯವಹರಿಸುವಂತೆ ಇರಬೇಕು
* ರಾಜ್ಯ ಸರ್ಕಾರ ನಿಗದಿ ಮಾಡಿರುವ ದರಕ್ಕಿಂತ ಅಧಿಕ ತೆಗೆದುಕೊಳ್ಳುವಂತಿಲ್ಲ
* ಚಾಲಕರಿಗೆ ವರ್ಷದಲ್ಲಿ ಒಂದು ಸಾರಿ ಸುರಕ್ಷತಾ ಕ್ರಮ ಮತ್ತು ಮಾರ್ಗದರ್ಶಿ ಸೂತ್ರಗಳ ಬಗ್ಗೆ ತಿಳಿವಳಿಕೆ ನೀಡಬೇಕಾದ್ದು ಅಗತ್ಯ
* ಗ್ರಾಹಕರ ಮೇಲೆ ತಪ್ಪು ಕಾರಣ ನೀಡಿ ಅಧಿಕ ಹಣ ವಸೂಲಿ ಮಾಡುವಂತಿಲ್ಲ.

English summary
New draft rules have been recently published by the Karnataka state government for the online competing cab aggregators in the city. From now onwards, the companies who do not have a Technology aggregator service license will not be allowed to operate in the state and the drivers who are willing to work, can join other aggregators as per their convenience.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X