KEA: ದಾಖಲಾತಿ ಪರಿಶೀಲನೆ NEET ಅಭ್ಯರ್ಥಿಗಳಿಗೆ ಮಹತ್ವ ಮಾಹಿತಿ, ಜು.10 ಕೊನೆ ದಿನ, ಗಮನಿಸಿ..
ಬೆಂಗಳೂರು, ಜುಲೈ 08: ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಗಳ (UGNEET-2025) ಫಲಿತಾಂಶ ಮೂರು ವಾರಗಳ ಹಿಂದಷ್ಟೇ ಪ್ರಕಟವಾಗಿದೆ. NRI ವಾರ್ಡ್ ಕ್ಲೇಮ್ ಅಡಿಯಲ್ಲಿ ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್ ಕೋರ್ಸ್‌ಗಳಿಗೆ ಪ್ರವೇಶ ಬಯಸುವ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮಹತ್ವದ ಸೂಚನೆ ನೀಡಿದೆ. ಶ್ರೇಯಾಂಕಗಳ ಆಧಾರದಲ್ಲಿ ದಾಖಲಾತಿ ಪರಿಶೀಲನೆಯನ್ನು ಇಂದಿನಿಂದ ನಡೆಯುತ್ತಿದೆ. ಮೂರು ದಿನಗಳ ಕಾಲ ನಡೆಯುವ ಈ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವವರು ಈ ದಾಖಲೆಗಳನ್ನು ಕಡ್ಡಾಯವಾಗಿ ತರಲೇಬೇಕು ಎಂದು ತಿಳಿಸಿದೆ.
UGNEET -25 ಗೆ ಅರ್ಹತೆ ಪಡೆದವರಿಗೆ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಯಿತು. ನಿಮ್ಮ ರೋಲ್ ಸಂಖ್ಯೆ ಸೇರ್ಪಡೆಗೂ ಲಿಂಕ್ ಬಿಡುಗಡೆ ಮಾಡಿತ್ತು. ಇದೀಗ ಮೂರು ದಿನ ಅಂದರೆ ಜುಲೈ 10ರವರೆಗೆ ಅರ್ಹ ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆ ನಡೆಯುತ್ತಿದೆ. NRI ವಾರ್ಡ್ ಕ್ಲೇಮ್ ಅಡಿಯಲ್ಲಿ ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್ ಕೋರ್ಸ್‌ಗಳಿಗೆ ಪ್ರವೇಶ ಬಯಸುವ ಅಭ್ಯರ್ಥಿಗಳು ಇದರಲ್ಲಿ ಪಾಲ್ಗೊಳ್ಳಬೇಕು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಅವರು ಮಾಹಿತಿ ನೀಡಿದರು.

ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್ ಕೋರ್ಸ್ ಪ್ರವೇಶಕ್ಕಾಗಿ NRI ಮತ್ತು NRI ವಾರ್ಡ್ ಕೋಟಾದ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಪರಿಶೀಲನೆಗಾಗಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ KEA ಕಚೇರಿಗೆ ಖದ್ದು ಭೇಟಿ ನೀಡಬೇಕು ಎಂದರು.
ಈ ಅಭ್ಯರ್ಥಿಗಳು ತಾವು NEET ಪರೀಕ್ಷೆಯಲ್ಲಿ ಪಡೆದ ಶ್ರೇಣಿಯ ಆಧಾರದ ಮೇಲೆ ಈ ಕೆಳಗಿನಂತೆ ದಾಖಲಾತಿ ಪರಿಶೀಲನೆಗೆ ಹಾಜರಾಗಬೇಕು. ಇಂದು ಜುಲೈ 8ರಂದು 4,00,000 ವರೆಗಿನ ಅಭ್ಯರ್ಥಿಗಳು ಹಾಜರಾಗಿದ್ದಾರೆ. ನಾಳೆ ಜುಲೈ 9ರಂದು 8,00,000 ವರೆಗಿನ ಶ್ರೇಯಾಂಕ ಪಡೆದ ಅಭ್ಯರ್ಥಿಗಳು, ನಾಡಿದ್ದು ಜುಲೈ 10ರಂದು 12,00,000 ತನಕ ಶ್ರೇಯಾಂಕ ಪಡೆದವರು ಹಾಜರಾಗುವಂತೆ ಕೆಇಎ ತಿಳಿಸಿದೆ.
ವಿದೇಶಿ ಪ್ರಜೆಗಳಿಗೆ/ಅಭ್ಯರ್ಥಿಗಳು ತರಬೇಕಾದ ಕಡ್ಡಾಯ ದಾಖಲೆಗಳು
* ಅಭ್ಯರ್ಥಿ ಮತ್ತು ಪೋಷಕರ ಪಾಸ್‌ಪೋರ್ಟ್ ಮತ್ತು ವೀಸಾ/ನಿವಾಸ ವೀಸಾ (ಪ್ರತಿಗಳು)
* ಅಭ್ಯರ್ಥಿಗಳ ಪೌರತ್ವ ಪುರಾವೆ
* ಜನನ ಪ್ರಮಾಣಪತ್ರ ಮತ್ತು ಆಧಾರ್ ಕಾರ್ಡ್
* ನೀಟ್ ಸ್ಕೋರ್ ಕಾರ್ಡ್
* ನೀಟ್ ಹಾಲ್ ಟಿಕೆಟ್
* ಕೆಇಎ ಯುಜಿಸಿಇಟಿ/ನೀಟ್-2025 ಆನ್‌ಲೈನ್ ಅರ್ಜಿ ನಮೂನೆ (ಅಂತಿಮ ಪ್ರತಿ)
* ಅಭ್ಯರ್ಥಿಯ ಎಸ್‌ಎಸ್‌ಎಲ್‌ಸಿ / 10 ನೇ ತರಗತಿ ಅಂಕಗಳ ಕಾರ್ಡ್
* ಅಭ್ಯರ್ಥಿಯ 2 ನೇ ಪಿಯುಸಿ / 12 ನೇ ತರಗತಿ ಅಂಕಗಳ ಕಾರ್ಡ್
* ಆಯಾ ದೇಶದ ರಾಯಭಾರ ಕಚೇರಿಯಿಂದ ನೀಡಲಾದ ಪೋಷಕರ ನಿವಾಸ ಪ್ರಮಾಣಪತ್ರ, ಆದಾಯ ತೆರಿಗೆ ನಿಯಮಗಳಿಗೆ ಅನುಸಾರವಾಗಿ ಅಥವಾ ಪೋಷಕರ ವಿದೇಶದಲ್ಲಿ ನಿವಾಸ ಸ್ಥಿತಿಯನ್ನು ಸಾಬೀತುಪಡಿಸುವ ಯಾವುದೇ ಇತರ ಪ್ರಮಾಣಪತ್ರ/ಅಫಿಡವಿಟ್ (₹100 ಇ-ಸ್ಟ್ಯಾಂಪ್ ಪೇಪರ್‌ನಲ್ಲಿರಬೇಕು)
NRI ವಾರ್ಡ್ ಕ್ಲೇಮ್‌ಗೆ ಅಗತ್ಯ ದಾಖಲೆಗಳು
* ಇ-ಮಾಹಿತಿ ಬುಲೆಟಿನ್ 2025 ರ ಅನುಬಂಧ-6 ರ ಪ್ರಕಾರ ವಾರ್ಡ್ ಪ್ರಮಾಣಪತ್ರ
* ತಹಶೀಲ್ದಾರ್ ಸಹಿ ಮಾಡಿದ ಕುಟುಂಬ ವೃಕ್ಷ (ನೋಟರಿ ಸಹಿ ಮಾಡಿದ ಕುಟುಂಬ ವೃಕ್ಷ ಅಥವಾ ಸಂಬಂಧದ ಅಫಿಡವಿಟ್ ಅನ್ನು ಸ್ವೀಕರಿಸಲ್ಲ)
* ಭಾರತೀಯ ಕಾನ್ಸುಲೇಟ್ ಜನರಲ್ ಅಧಿಕೃತ ಮುದ್ರೆ ಇರುವ ಪ್ರಾಯೋಜಕರ ರಾಯಭಾರ ಪ್ರಮಾಣಪತ್ರ - ಕಳೆದ ಆರು ತಿಂಗಳೊಳಗೆ ನೀಡಲಾಗಿದೆ (ನೋಟರಿ ಸಹಿ ಮಾಡಿದ ಪ್ರಮಾಣಪತ್ರಗಳನ್ನು ಸ್ವೀಕರಿಸದಿಲ್ಲ)
* ಬ್ಯಾಂಕ್ ಪಾಸ್‌ಬುಕ್, ಪಾಸ್‌ಪೋರ್ಟ್ ಮತ್ತು ವೀಸಾ/ನಿವಾಸಿ ವೀಸಾ ಸೇರಿದಂತೆ ಪ್ರಾಯೋಜಕರ NRI/OCI ಸ್ಥಿತಿ ದಾಖಲೆಗಳು
* NEET ಸ್ಕೋರ್ ಕಾರ್ಡ್
* NEET ಹಾಲ್ ಟಿಕೆಟ್
* KEA UGCET/NEET-2025 ಆನ್‌ಲೈನ್ ಅರ್ಜಿ ನಮೂನೆ (ಅಂತಿಮ ಪ್ರತಿ)
* ಅಭ್ಯರ್ಥಿಯ SSLC / 10 ನೇ ತರಗತಿಯ ಅಂಕಪಟ್ಟಿ
* ಅಭ್ಯರ್ಥಿಯ 2 ನೇ ಪಿಯುಸಿ / 12 ನೇ ತರಗತಿಯ ಅಂಕಪಟ್ಟಿ ಕಡ್ಡಾಯವಾಗಿ ತರುವಂತೆ ಕೆಇಎ ತಿಳಿಸಿದೆ.












Click it and Unblock the Notifications